
ಬೆಂಗಳೂರು, ಭಾನುವಾರ 08,01.2023: 108ನೇ ರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ ಹಸ್ತಸಾಮೂದ್ರಿಕ ಶಾಸ್ತ್ರಕ್ಕೆ ಸಂಬಂಧ ಪಟ್ಟ ಕಾರ್ಯಾಗಾರ ಇಂದು ಬೆಳಗ್ಗೆ 9.30ಕ್ಕೆ ಜ್ಯೋತಿ ಬೆಳಗುವುದರ ಮೂಲಕ ಆರಂಭವಾಯಿತು.
ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ನಡೆಯಲಿರುವ ಕಾರ್ಯಾಗಾರವನ್ನು ಬೆಂಗಳೂಲಿನಲ್ಲಿರುವ ರಾಮಕೃಷ್ಣ ಮಠದ ಹಿಂಭಾಗ, ಸಂಸ್ಕೃತ ಭವನ, ಉದಯಭಾನು ಕಲಾ ಸಂಘದಲ್ಲಿ ಶ್ರೀ ಮಾಯಕಾರ ಗುರುಕುಲ, ಮೈಸೂರು ಹಾಗೂ ಕರ್ನಾಟಕ ರಾಜ್ಯ ಜ್ಯೋತಿಷ್ಯರ ಹಾಗೂ ಜ್ಯೋತಿಷ್ಯ ಭೋದನಾ ಸಂಸ್ಥೆಯಗಳ ಒಕ್ಕೂಟ, ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ 108ನೇ ರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ ಹಸ್ತಸಾಮೂದ್ರಿಕ ಶಾಸ್ತ್ರಕ್ಕೆ ಸಂಬಂಧ ಪಟ್ಟ ಕಾರ್ಯಾಗಾರವನ್ನು ಯಶಸ್ವಿಯಾಗಿ ನೂರಾರು ಹಿರಿಯ ಜ್ಯೋತಿಶಿಗಳ ಸಮ್ಮುಖದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ : ಡಾ. ಅರುಳಾಳನ್, ಕಾಸ್ಮಿಕ್ ವಿಷನ್ ಸಂಸ್ಥೆ, ಬೆಂಗಳೂರು, ಪ್ರೊ. ಗಜೇಂದ್ರ, ಪ್ರದಾನ ಕಾರ್ಯದರ್ಶಿ, KSFAAI, ಬೆಂಗಳೂರು, ಡಾ.ಅನಂತರಾಘವನ್, ಅವಿನಿ ಅಷ್ಟೋ ಇನ್ಸಿಟ್ಯೂಟ್, ಬೆಂಗಳೂರು, ಡಾ. ಹಲದಾಸ್, ಕಾಸರ ಸಂಸ್ಥೆ, ಬೆಂಗಳೂರು, ರವರಿಂದ ನೆರವೇರಿತು.
ಕಾರ್ಯಾಗಾರದ ವಿಷಯ : ವಿವಾಹ ಮತ್ತು ವಿವಾಹ ನಂತರ ಜೀವನ. ಉಪನ್ಯಾಸ : ಡಾ. ಮೂಗೂರು ಮಧುವೀಕ್ಷಿತ್, ಮೈಸೂರು, ಶಕುನ ಮತ್ತು ಬಣ್ಣಗಳು, ಡಾ. ರಾಮಮೂರ್ತಿ, ಬೆಂಗಳೂರು, ನಾಡಿ ಜ್ಯೋತಿಷ್ಯ, ಡಾ. ಪವನ್ ಶರ್ಮ, ಬೆಂಗಳೂರು, ವಾಸ್ತುಶಾಸ್ತ್ರ, ಡಾ. ಬಾಲಸುಬ್ರಮಣ್ಯಂ, ಬೆಂಗಳೂರು, ಜ್ಯೋತಿಷ್ಯ, ಶ್ರೀ ಇಂದ್ರಧನುಶ್, ಬೆಂಗಳೂರು, ಫಿರಮಿಡ್ ವಾಸ್ತು, ಶ್ರೀ ಅರವಿಂದ್ ರತನ್, ಬೆಂಗಳೂರು, ಸಂಖ್ಯಾಶಾಸ್ತ್ರ, ಶ್ರೀ ಪ್ರದೀಪ್, ಕೆ.ಪಿ ಜ್ಯೋತಿಷ್ಯ, ಡಾ. ಅಂದ್ರ ಜೈನ್, ಬೆಂಗಳೂರು, ಪ್ರಶ್ನಶಾಸ್ತ್ರ, ಡಾ. ಕುಮಾರ್ ವಶಿಷ್ಟ, ಬೆಂಗಳೂರು, ಹಸ್ತಸಾಮುದ್ರಿಕಶಾಸ್ತ್ರದ ಮೂಲಕ ವಿವರಣೆ ನೀಡಿದರು.
ಕಾರ್ಯಾಗಾರದ ಆಯೋಜಕರಾದ ಡಾ. ಮೂಗೂರು ಮಧುದೀಕ್ಷಿತ್ ಸಂಸ್ಥಾಪಕರು, ಶ್ರೀ ಮಾಯಕಾರ ಗುರುಕುಲ, ಮೈಸೂರು, ರು “ಕಾಯಾಗಾರಕ್ಕೆ ಆಗಮಿಸಿದ ಜ್ಯೋತಿಶಿಗಳು ಹೆಚ್ಚಿನ ಜ್ಞಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಮಾತನಾಡುತ್ತಾ ತಿಳಿಸಿದರು.
City Today News – 9341997936