
ನಾಡಿನ ಗಣ್ಯಮಾನ್ಯ ಸಂಗೀತ ಸಂಸ್ಥೆಯಾದ ರಾಜಮಹಲ್ ವಿಲಾಸ ಸಂಗೀತಸಭಾ ಜನವರಿ 15 ರಿಂದ ಸಂಕ್ರಾಂತಿ ಸಂಗೀತೋತ್ಸವ ಬಾಗವತಸಪ್ತಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಜಯ ನಗರದ ಶ್ರೀ ರಾಧಾಕೃಷ್ಣ ದೇವಾಲಯದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಸಂಗೀತೋತ್ಸವ ಹಾಗೂ ಆಧ್ಯಾತ್ಮ ವೈಭವ ಕಾರ್ಯಕ್ರಮಗಳು ರಾಜಮಹಲ್ ವಿಲಾಸ ಸಂಗೀತ ಸಭಾದ ಮುಂಬರುವ 25 ನೇ ವರ್ಷದ ಬೆಳ್ಳಿ ಹಬ್ಬದ ಸಡಗರಕ್ಕೆ ನಾಂದಿ ಹಾಡುತ್ತಿದೆ. 5 ರಿಂದ 6:30 ರವರೆಗೆ ಸಂಗೀತ ಕಾರ್ಯಕ್ರಮ ಹಾಗೂ 6:30 ಯಿಂದ 8 ರವರೆಗೆ ಭಾಗವತ ಪ್ರವಚನ ಕಾರ್ಯಕ್ರಮ ವ್ಯವಸ್ಥೆಯಾಗಿದೆ. ಸಂಕ್ರಾಂತಿ ಸಂಗೀತೋತ್ಸವದ ಈ ವಿಶಿಷ್ಟ ಕಾರ್ಯಕ್ರಮ ಸಂಜಯ ನಗರದ ಪ್ರಖ್ಯಾತ ಸಂಗೀತ ಸಂಸ್ಥೆಯಾದ ರಿಧಮ್ಸ್ ಅವರ ಸಹಯೋಗದಲ್ಲಿ ನಡೆಯಲಿದೆ. ಭಾಗವತ ಪ್ರವಚನವನ್ನು ಅಂತರಾಷ್ಟ್ರೀಯ ವಿದ್ವಾಂಸರದೇ ಹೆಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ನಡೆಸಿಕೊಡಲಿದ್ದಾರೆ. ಈಗಾಗಲೇ ಅವರು ದಾಸಸಾಹಿತ್ಯದಲ್ಲಿ ಮಾಡಿರುವ ಅಗಾಧ ಸೇವೆಗೆ ದೇಶ ವಿದೇಶಗಳಿಂದ ಮನ್ನಣೆ ದೊರೆತಿದೆ. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ್ ಫೆಡರೇಷನ್ ಎಂಬ ಜಾಗತಿಕ ಸಂಸ್ಥೆಯನ್ನು ಎಂದು ಸ್ಥಾಪಿಸಿ, ಆ ಮೂಲಕ ಜಗತ್ತಿನಾದ್ಯತ್ಯಂತ ವಿಷ್ಣುಸಹಸ್ರನಾಮದ ಬೃಹತ್ ಅಭಿಯಾನವನ್ನು ಅವರು ಕೈಗೊಂಡಿದ್ದಾರೆ

ಕು| ಎಂ.ಆ. ಅಮೃತವಳ್ಳಿ ಹಾಗೂ ತಂಡದವರಿಂದ, 19.1.2023 ಗುರುವಾರ ಕರ್ನಾಟಕ ಸಂಗೀತ ಕಾರ್ಯಕ್ರಮ: ಕು! ಸ್ವಾತಿ ಮಹೇಶ್ ಮತ್ತು ಮಾ| ರೋಹಿತ್ ಶ್ರೀನಿವಾಸ್ ಹಾಗೂ ತಂಡದವರಿಂದ 20.1.2023 ಶುಕ್ರವಾರ ಹಿಂದೂಸ್ತಾನಿ ಕೊಳಲು ವಾದನ ಮತ್ತು ದ್ವಂದ್ವ ಗಾಯನ ಮಾ। ಮೀಹಿ ಮತ್ತು ಮಾ| ಚೇತನ್‌ರವರಿಂದ ಹಾಗೂ ಕರ್ನಾಟಕ ಸಂಗೀತ ಕಾರ್ಯಕ್ರಮ ಕು|| ನಿತ್ಯ ಅಂತಪು ತಂಡದವರಿಂದ, 21.1.2023 ಶನಿವಾರ ಪಿಟೀಲು ವಾದನ ಮಾ| ಆದಿತ್ಯ ರವಿದಾಸ್ ಹಾಗೂ ತಂಡದವರಿಂದ, ಕರ್ನಾಟಕ ಸಂಗೀತ ಕಾರ್ಯಕ್ರಮ ಕು! ನೇಹ ಹರಿಹರನ್ ಹಾಗೂ ತಂಡದವರಿಂದ ದ್ವಂದ್ವ ಪೀಟಿಲು ವಾದನ ಮಾ|| ಭರತ್ ಕುಮಾರ್, ಮಾ|ವಿಜಯ್ ಕುಮಾರ್ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದೊಂದು ಭಾಗವತದ ರಸದೌತಣ-ಸಂಗೀತದ ಸಿಹಿ ಸಂಭ್ರಮ. ಈ ಏಳೂ ಸಂಸ್ಕೃತಿ ಸಂಜೆಗಳಿಗೆ ನಗರದ ಸಂಗೀತ ಅಭಿಮಾನಿಗಳು, ಆಧ್ಯಾತ್ಮ ಜೀವಿಗಳು ಹಾಗೂ ಭಾಗವತದ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂಕ್ರಾಂತಿಯಲ್ಲಿ ನಡೆಯುತ್ತಿರುವ ಸಡಗರದ ಸಂಗೀತ ಹಾಗೂ ಭಾಗವತೋತ್ಸವಗಳ ಸಪ್ತಾಹ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಂಗೀತ ಸಭಾ ಅಧ್ಯಕ್ಷರಾದ ಡಾ||ಮದ್ದೂರು ಬಾಲಕೃಷ್ಣ ಅವರು ಮನವಿ ಮಾಡಿದ್ದಾರೆ.
City Today News – 9341997936