ಉತ್ಪಾದನಾ ಸೌಲಭ್ಯವನ್ನು ವಿಸ್ತರಿಸಲಿರುವ ಭಾರತ್ ಫಿಟ್ಸ್ ವರ್ನರ್ (ಬಿಎಫ್ ಡಬ್ಲ್ಯು)

~ಎಪಿಎಸಿ ವಲಯದಲ್ಲಿ ಈ ಪ್ರಮಾಣದಲ್ಲಿನ ತನ್ನ ರೀತಿಯ ಮೊದಲ ಮೂಲಸೌಕರ್ಯವಾಗಲಿದೆ.

~600 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಬೆಂಗಳೂರು, ಜನವರಿ 24, 2023 :- ಭಾರತದ ಮುಂಚೂಣಿಯ ಉನ್ನತೀಕೃತ ಉತ್ಪಾದನಾ ತಂತ್ರಜ್ಞಾನ ಪರಿಹಾರಗಳ ಕಂಪೆನಿಯಾದ ಭಾರತ್ ಫಿಟ್ಸ್ ವರ್ನರ್ (ಬಿಎಫ್‌ ಡಬ್ಲ್ಯು) ತನ್ನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಪ್ರಕಟಿಸಿದೆ. ಅದರ ಪ್ರಸ್ತುತ 3000 ಎಂಸಿಎಸ್‌ಗಳ ವಾರ್ಷಿಕ ಸಾಮರ್ಥ್ಯದಿಂದ 10,000 ಎಂಸಿಎಸ್‌ಗಳಿಗೆ ಉತ್ಪಾದನೆಯನ್ನು ಸಂಸ್ಥೆ ಹೆಚ್ಚಿಸಿಕೊಳ್ಳಲಿದ್ದು, ಇದಕ್ಕಾಗಿ ತಮಿಳುನಾಡಿನ ಹೊಸೂರಿನಲ್ಲಿ ನೂತನ ಆತ್ಯಾಧುನಿಕ ಸೌಲಭ್ಯವನ್ನು ಸ್ಥಾಪಿಸಲಿದೆ. ಕಂಪನಿ ಈ ಘಟಕಕ್ಕಾಗಿ ಮೂರು ಹಂತಗಳಲ್ಲಿ ಸಾಕಷ್ಟು ಹೂಡಿಕೆಯ ಬದ್ಧತೆ ಹೊಂದಿರುತ್ತದೆ. ಈ ಘಟಕ 10,000 ಚದರ ಮೀಟರ್ ನಿರ್ಮಿತ ಪ್ರದೇಶ ಹೊಂದಿರಲಿದ್ದು, 50 ಎಕರೆಗೂ ಹೆಚ್ಚಿನ ಭೂಪ್ರದೇಶ ಹೊಂದಿರುತ್ತದೆ. ಈ ಪ್ರಕಟಣೆಯನ್ನು ಪ್ರಸ್ತುತ ನಡೆಯುತ್ತಿರುವ ಇಂಟೆಕ್ಸ್ 2023 ಪ್ರದರ್ಶನದ ಸಂದರ್ಭದಲ್ಲಿ ಮಾಡಲಾಗಿದೆ. ಈ ಪ್ರದರ್ಶನ, ದಕ್ಷಿಣ ಮತ್ತು ಆನ್ನೇಯ ಏಷ್ಯಾದಲ್ಲಿ ಯಂತ್ರ ಹತಾರಗಳು(ಮೆಷಿನ್ ಟೂಲ್ಸ್) ಮತ್ತು ಉತ್ಪಾದನಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಪ್ರದರ್ಶನವಾಗಿದ್ದು, ಬೆಂಗಳೂರು ಇಂಟ‌ನ್ಯಾಷನಲ್ ಎಕ್ಸಿಬಿಷನ್‌ ಸೆಂಟರ್ ಬಿಐಇಸಿ)ನಲ್ಲಿ ನಡೆದಿವೆ.

ಪ್ರಗತಿಯ ನಿಟ್ಟಿನಲ್ಲಿ ಮತ್ತು ಸುಸ್ಥಿರ ಉಪಕ್ರಮಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಬಿಎಫ್‌ಡಟ್ಟುನ ಸೌಲಭ್ಯಗಳು, ನಿವ್ವಳ ಕಾರ್ಬನ್ ಶೂನ್ಯ ವರ್ಗದ ಜೋಡಣಾ ಘಟಕವನ್ನು ಒಳಗೊಂಡಿರಲಿದೆ. ಜೊತೆಗೆ ಯಂತ್ರಗಳ ಕನ್ನೆಯರೈಸ್ಟ್ ಅಸೆಂಬ್ಲಿ, ಲಿನ್ ಅಂಡ್ ಗ್ರೀನ್ ಸಂಪೂರ್ಣ ಡಿಜಿಟಲೀಕೃತ ಪ್ರಕ್ರಿಯೆಗಳು ಮತ್ತು ವಿಶ್ವಮಟ್ಟದ ಸ್ಪಂಡಲ ತಂತ್ರಜ್ಞಾನ ಕೇಂದ್ರ ಇದರಲ್ಲಿ ಸೇರಿರುತ್ತದೆ. ಇವೆಲ್ಲವುಗಳೊಂದಿಗೆ ಸೂಕ್ತಮಟ್ಟದ ಸಮಗ್ರ ಸ್ವಯಂಚಾಲನೆ ಸೇರಲಿದ್ದು, ಕಂಪನಿಯ ಅಂಗಸಂಸ್ಥೆಯಾದ ಎಂಡಿಎನ್‌ಎಕ್ಸ್‌ಟಿ ಇದನ್ನು ರೂಪಿಸಿರುತ್ತದೆ. ಜೊತೆಗೆ ಸಂಪೂರ್ಣ ಸಮಗ್ರವಾದ ಶೀಟ್ ಮೆಟಲ್ ಪ್ರಕ್ರಿಯಾ ಘಟಕ ಕೂಡ ಇರುತ್ತದೆ.

ಎಪಿಎಸಿ ವಲಯದಲ್ಲಿ ತನ್ನ ರೀತಿಯ ದೊಡ್ಡ ಪ್ರಮಾಣದ ಮೊದಲ ಮೂಲಸೌಕರ್ಯ ಇದು ಎಂದು ಹೇಳಲಾಗಿದ್ದು, ನೂತನ ಘಟಕದ ಮೊದಲ ಹಂತ 2024ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. 2ನೇ ಹಂತ 2024ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ಮತ್ತು ಮೂರನೇ ಹಾಗೂ ಅಂತಿಮ ಹಂತ 2025ರ ಆರ್ಥಿಕ ವರ್ಷದಲ್ಲಿ ಕಾರ್ಯಾಚರಣೆ ಆರಂಭಿಸಲಿವೆ. ವಿಸ್ತರಣಾ ಯೋಜನೆಯ ಭಾಗವಾಗಿ ಬಿಎಫ್‌ ಡಬ್ಲ್ಯು ಆಡ್ರಾಯ್‌ ಟೆಕ್, ಇಂಡಿಯಾ ಜೊತೆಗೆ ಸಹಭಾಗಿತ್ವ ಕೈಗೊಂಡಿದ್ದು, ದೇಶದ ಎಲ್ಲೆಡೆ ಈ ಪರಿಹಾರಗಳನ್ನು ಹರಡಲು ಮುಂದಾಗಿದೆ.

ಭಾರತ್ ಫಿಟ್ಸ್ ವರ್ನರ್ (ಬಿಎಫ್‌ ಡಬ್ಲ್ಯು)ನ ವ್ಯವಸ್ಥಾಪಕ ನಿರ್ದೇಶಕರಾದ ರವಿ ರಾಘವನ್ ಅವರು ಮಾತನಾಡಿ, “2025ರ ಹೊತ್ತಿಗೆ ಜಾಗತಿಕ ಸಂಸ್ಥೆಯಾಗುವುದಕ್ಕಾಗಿ ತನ್ನ ಮಾರ್ಗವನ್ನು ಬಿಎಸ್‌ಡಬ್ಲ್ಯು ದೃಢವಾಗಿ ರೂಪಿಸಿಕೊಂಡಿದೆ. ಜೊತೆಗೆ ಸಮರ್ಥ ಸರಕು ಸಾಗಣೆಗಾಗಿ ಒಂದೇ ಸೂರಿನಡಿಯಲ್ಲಿ ಪ್ರಮುಖ ಉಪ ಪೂರೈಕೆದಾರರು ಲಭ್ಯವಿರಲಿದ್ದು, ಇವುಗಳೊಂದಿಗೆ ಬೃಹತ್ ಮತ್ತು ಸಮಗ್ರವಾದ ಉತ್ಪಾದನಾ ಸೌಲಭ್ಯದ ದೃಷ್ಟಿಕೋನವನ್ನು ಸಂಸ್ಥೆ ಹೊಂದಿದೆ. ನಮ್ಮ ಜಾಗತಿಕ ಗ್ರಾಹಕರ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಬೆಂಬಲಿಸಲು ನಮ್ಮ ಉಪಕ್ರಮ ‘ಲೀಪ್-ಬಿಎಫ್‌ಡಬ್ಲ್ಯು’ ಮೂಲಕ ಉತ್ಪನ್ನ/ಪ್ರಕ್ರಿಯೆ ತಂತ್ರಜ್ಞಾನ ಮಾರ್ಗ ರೂಪಿಸುವುದು ಮತ್ತು ನಮ್ಮ ಮೂರು ಪಟ್ಟು ಬೆಳವಣಿಗೆಗಳು ಸಿದ್ಧವಾಗಿರುತ್ತವೆ ಎಂಬುದನ್ನು ಹಂಚಿಕೊಳ್ಳಲು ಇಂದು ನಾನು ಹರ್ಷಗೊಂಡಿದ್ದೇನೆ” ಎಂದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.