
ಭಾರತ ಸರ್ಕಾರ ಕೃಷಿ ಕಾಯ್ದೆ ಜಾರಿಗೆ ತಂದು ಮತ್ತೆ ವಾಪಸ್ ಪಡೆದು ವರ್ಷಗಳ ಕಳೆದರೂ ಆದರೆ ನೀವು ನಮ್ಮನ್ನು ಬೆಂಗಳೂರು ಅಧಿವೇಶನದಿಂದ ಬೆಳಗಾವಿ ಮತ್ತು ಬೆಂಗಳೂರು ಮತ್ತೆ ಬೆಳಗಾವಿ ಈಗ ನಮ್ಮನ್ನು ರೋಟ್ಟಿ ಬುತ್ತಿ ಕಟ್ಟಿಕೊಂಡು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೊಡಾಡಿಸಿ ಬೆಸರ ತಂದಿದೆ ನೀವು ಮತ್ತೆ ಅದೇ ಸುಳ್ಳು ಹೇಳುವದು ಬೇಡ ಅದಕ್ಕೆ ನಿಮ್ಮಿಂದ ಸರಿಯಾದ ಉತ್ತರ ನೀರಿಕ್ಷಿಸುತ್ತೆವ. ಒಂದು ಪಕ್ಷ ನಿಮ್ಮ ಪಕ್ಷದ ತಿರ್ಮಾನವ ಕೃಷಿ ಕಾಯ್ದೆ ಮುಂದುವರಿಸುವ ಉದ್ದೇಶವಾಗಿದ್ದರೆ ಅದನ್ನಾದರು ಹೇಳಿ ಅಥವಾ ನಿಮ್ಮ ಸರ್ಕಾರ ಮುಂದುವರಿಸಲು ಯಾರದಾದರು ಒತ್ತಾಯವಿದೆಯೇ ಅಥವಾ ರೈತರನ್ನ ಕೃಷಿಯಿಂದ ಹೊರದುಡುವ ಉದ್ದೇಶವಾಗಿದೆಯೇ ರಾಜ್ಯದಲ್ಲಿ ಜಾರಿಗೆ ತಂದು 2024ರ ಲೋಕಸಭೆ ಚುನಾವಣೆ ಕಳೆದ ಮೇಲೆ ನಿಮ್ಮ ಸರ್ಕಾರ ಪೂನ: ಆಯ್ಕೆಯಾದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ತರುವ ಉದ್ದೇಶ ನೀವು ಹೊಂದಿದ್ದರೆ ಅದನ್ನಾದರು ಹೇಳಿ, ನಮ್ಮ ಉದ್ದೇಶ ಇದಾಗಿದೆ. ಆ ಕಾರಣಕ್ಕೆ ವಾಪಸ್ ಪಡೆಯುತ್ತಿಲ್ಲ ಎಂದು ಹೇಳಿಬಿಡಿ.
ಈಗಾಗಲೇ ಎ ಪಿ ಎಮ್ ಸಿ ಕಾಯ್ದೆಯಿಂದ ಕೃಷಿ ಮಾರುಕಟ್ಟೆ 90% ಭಾಗ ನಿಮ್ಮಿಂದ ನಿರ್ಜೀವಗೊಂಡಿದೆ, ಹಾಗು ನಿಮ್ಮ ಕಂದಾಯ ಕಾಯ್ದೆ ಸೀತಿ ತಿದ್ದುಪಡಿಯಿಂದಾಗಿ ಪ್ರತಿದಿನ ಲಕ್ಷಾಂತರ ರೈತರು ಕೃಷಿ ಭೂಮಿ ಕಳೆದುಕೊಂಡು ಕೃಷಿಯಿಂದ ಹೋರ ಬಿಳುತ್ತಿದ್ದಾರೆ, ಸರ್ಕಾರ ಧರ್ಮ ನಂಬಿಕೆಯನ್ನ ತೋರಿಸಿ,ಜಾನುವಾರು ಹತ್ಯೆ ಕಾಯ್ದೆ ಜಾರಿಗೆ ತಂದಿದೆ. ಈಗ ಹೈನುಗಾರಿಕೆಯನ್ನ ಕಾರ್ಪೋರೇಟ್ ಕಂಪನಿಗಳಿಗೆ ಕೊಡಲು ಕೇಂದ್ರದ ಸಚಿವರಾದ ಅಮಿತ್ ಶಾ ಅವರು ಅಮೂಲ ಜೋತ ನಂದಿನಿಯನ್ನ ಸೇರಿಸುವ ಇಂಗಿತ ತೋರಿ ಅಲ್ಲಿ ಉದ್ದಿಮೆದಾರ ಅದಾನಿಯು ಅಮೂಲ ಉತ್ಪಾದನೆಯನ್ನ ತಿಳಿಯಲು ಆನಂದ ಡೈರಿ ಗುಜರಾತಗೆ ಅವರು ಬಂದು ನೋಡುತ್ತಾರೆ ಇದರ ಉದ್ದೇಶ ರೈತರಿಗೆ ಅರ್ಥವಾಗದೆ. ನಿಮ್ಮ ನಡೇ ಯಾವ ಕಡೆ ಎಂದು ನಾವು ಮುಂದಿನ ತೀರ್ಮಾನ ಕೈಗೊಳ್ಳಲು ಇದು ಸೂಕ್ತ ಸಮಯಯವಾಗಿದೆ.ಕೃಷಿ ಕಾಯ್ದೆ ವಾಪಸ್ ಪಡೆಯಲು ಸಾಧ್ಯ ಅಥವಾ ಅಸಾಧ್ಯ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ತಿಳಿಸಿ ಎಂದು ಕೋಡಿಹಳ್ಳಿ ಚಂದ್ರಶೇಖರ
– ರಾಜ್ಯದ್ಯಕ್ಷರು ಒತ್ತಾಯಿಸಿದರು.
City Today News – 9341997936