ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ಅನ್ನ ಅರಸಿ ಬೆಂಗಳೂರಿಗೆ ಬಂದ ಲಕ್ಷಾಂತರ ಮಂದಿ ಬಡವರು, ಕೂಲಿ ಕಾರ್ಮಿಕರ, ಟ್ರ್ಯಾಕ್ಟರ್ ಚಾಲಕರು, ಸಹಾಯಕರು ಇಂದು ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರ ಪೊಲೀಸರ ಅವೈಜ್ಞಾನಿಕ ಸುತ್ತೊಲೆಯಿಂದ ನಮ್ಮ ಕನ್ನಡ ಮಣ್ಣಿನ ಮಕ್ಕಳಾದ ಬಡ ಕಾರ್ಮಿಕರು ಇಂದು ಬೀದಿ ಪಾಲಾಗುವಂತೆ ಅಗಿದೆ.

ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇದಿಸಿ ಆದೇಶ ಹೊರಡಿಸಿದರಿಂದ ಅದನ್ನ ನಂಬಿ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬಡವರು ಇಂದು ಯಾವುದೇ ಕೆಲಸ ವಿಲ್ಲದೆ ಬೀದಿ ಪಾಲಾಗಿದ್ದಾರೆ.

ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳು ಕೃಷಿ ಉತ್ಪನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಟ್ರಾಕ್ಟರ್ ಗಳು ಪ್ರಮುಖ ಪಾತ್ರವಹಿಸಿವೆ.

ಪ್ರತಿ ಟ್ರಾಕ್ಟರ್ ಗೆ ಒಬ್ಬ ಚಾಲಕ, ಒಬ್ಬ ಸಹಾಯಕ ಹಾಗೂ ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಅಂದರೆ 40 ಸಾವಿರ ಟ್ರಾಕ್ಟರ್ ನಿಂದ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ಮಂದಿಗೆ ಕೈತುಂಬಾ ಕೆಲಸ ಅಷ್ಟು ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ದಾರಿಯಾಗಿದ್ದವು. ಏಕಾಏಕಿ ಈ ಟ್ರಾಕ್ಟರ್ ನಿಷೇದಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದರಿಂದ ಅಷ್ಟು ಕುಟುಂಬಗಳು ಬೀದಿ ಪಾಲಾಗುವಂತ ಆಗಿದೆ.

ಟ್ರಾಕ್ಟರ್ ನಿಷೇದದಿಂದ ಬೆಂಗಳೂರು ಸಂಚಾರ ದಟ್ಟಣೆ ನಿಷೇಧ ಸಾಧ್ಯವಿಲ್ಲ. ನಿಲುಗಡೆ ಸೌಲಭ್ಯ ವಿಲ್ಲದಿದ್ದರು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ ಇಂದು ಕಾರಿನಲ್ಲಿ ಒಬ್ಬೊಬ್ಬರ ಸಂಚರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಮೂಲ ಕಾರಣವಾಗಿದೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲು ಇದಕ್ಕೆ ಕಡಿವಾಣ ಹಾಕಬೇಕು.

ಪ್ರಮುಖ ಬೇಡಿಕೆಗಳು

*ನಿಗದಿತ ಸಮಯ ನಿಗದಿಪಡಿಸಿ ಟ್ರಾಕ್ಟರ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. *ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ಟ್ರಾಕ್ಟರ್ ಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು.*ಕಚೇರಿ ಸಮಯದಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವುದಕ್ಕೆ ಕಡಿವಾಣ ಹಾಕಬೇಕು. *ಮೆಟ್ರೊ ರೈಲು, ಬಿಎಂಟಿಸಿ ಬಸ್‌ ಸಹಿತ ಸಾರ್ವಜನಿಕ ಸಂಚಾರಕ್ಕೆ ಉತ್ತೇಜನ ನೀಡಬೇಕು. *ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ನಿರ್ಗಮನದ ಸಮಯಕ್ಕೆ ತಕ್ಕಂತ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಸಮಯವನ್ನು ನಿಗದಿ ಮಾಡಬೇಕು.*ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ. ಎಂ.ಬಸವರಾಜ್ ಪಡುಕೋಟೆ ರಾಜ್ಯಾಧ್ಯಕ್ಷರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಲಿಂಗಪ್ಪ ಹುಲ್ಲೂರು, ಗುರು ದೊಡ್ಡಮನಿ, ರೂಪೇಶ್ ರಾಜಣ್ಣ ಮತ್ತು ನಾಗರಾಜು ಉಪಸ್ಥಿತಿಯಿದ್ದರು

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.