
ಸುಮಾರು 3 ದಿನಗಳ ಕಾಲ ನನ್ನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿ ನನಗೆ ರಕ್ತ ಗಾಯ ಮಾಡಿ, ದೌಜನ್ಯ ದಬ್ಬಾಳಿಕೆ ವೆಸಗಿ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನಗೆ ಪ್ರಾಣ ಬೆದರಿಕೆ ಹಾಕಿರುವ ಕೋಣನಕುಂಟೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪೊಲೀಸ್ ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ ನಾಯ್ಕ, ಸಬ್ ಇನ್ಸಪೇಕ್ಟರ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಇವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಹಾಗೂ ಸಂಬಂಧಿಕರ ಹೆಸರಿನಲ್ಲಿ ಮಾಡಿರುವ ಹಾಕಿಕೊಳ್ಳಬೇಕೆಂದು ಕೋರಿ, ಇವರು ಹಾಗೂ ಇವರ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು
ಮಾನ್ಯರೇ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ವಿಳಾಸದಲ್ಲಿ ನಾನು ಸುಮಾರು 25 ವರ್ಷಗಳಿಂದ ಇದೇ ಗ್ರಾಮದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಕೂಲಿ (ಪೈಂಟ್) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ, ಹೀಗಿರುವಾಗ ದಿನಾಂಕ: 12-01-2023 ರಂದು ಸಮಯ ಬೆಳಿಗ್ಗೆ 7:30 ಕ್ಕೆ ನಮ್ಮ ಮನೆಗೆ ಬಂದ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳು ನಮ್ಮ ಮನೆಯ ಬಾಗಿಲನ್ನು ಕಾಲಿನಿಂದ ಒದ್ದು, ಏ ಸೂಳೆ ಮಗನೆ ಕಿರಣ ಬಾಗಿಲು ತೆಗಿ ಎಂದು, ಏರುಧ್ವನಿಯಲ್ಲಿ ಮಾಡುತ್ತಿದ್ದರು, ನಾನು ಬಾಗಿಲು ತೆಗೆದಾಗ ನನ್ನನ್ನು ಕತ್ತು ಪಟ್ಟಿ ಹಿಡಿದು ಎಳೆದುಕೊಂಡು, ಹೊಯ್ಸಳ ಗಾಡಿಯಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು, ನಾನು ಸಾರ್ ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಾ ಎಂದು ಕೇಳಿದ್ದಕ್ಕೆ, ನಮ್ಮನ್ನೇ ಪ್ರಶ್ನೆ ಮಾಡುತ್ತೀಯಾ, ಸೂಳೆ ಮಗನೇ ಎಂದು ಬೈದರು, ನಂತರ ಅಲ್ಲಿಗೆ ಬಂದ ಪೊಲೀಸ್ ಪೇದೆ ಶೈಲೇಶ್ ರವರು ಏನೋ ನಿನ್ನಮ್ಮನ್‌ನ ಕೇಯ ಸೂಳೆ ಮಗನೇ ನಾನು ಹೇಳಿದ ಕೆಲಸ ಮಾಡು ಎಂದರೆ, ತಪ್ಪಿಸಿಕೊಂಡು ತಿರುಗುತ್ತಿದ್ದೀಯಾ, ಇರು ನಮ್ಮ ಇನ್ಸಪೇಕ್ಟರ್ ಶಿವಕುಮಾರ್ ಸಾಹೇಬರು ಬರುತ್ತಾರೆ, ನಿನಗೆ ಇದೆ ಎಂದಾಗ, ಸಾರ್ ನಾನು ಏನು ಮಾಡಿದೆ ಸಾರ್’ ಎಂದು ಶೈಲೇಶ್ ಸಾರ್ ರವರನ್ನು ಕೇಳಿದೆ, ಅದಕ್ಕೆ ಅವರು ನಿನ್ನಮ್ಮನ್ ನಾಟಕ ಮಾಡುತ್ತೀಯಾ, ನಾನು ಹೇಳಲಿಲ್ವ. ಎಲ್ಲ ಗಾನಹಳ್ಳಿಯ ಸರ್ವನಂ-2 ರಲ್ಲಿ ಕೆಂಭತ್ತಹಳ್ಳಿ ಟು ಗೊಟ್ಟಿಗೆರೆ 80 ಅಡಿ ರಸ್ತೆ, ಎಸ್.ಎಲ್.ವಿ ಸಾರ್ ಹಿಂದೆ ಇರುವ ನಮ್ಮ ಅಕ್ಕನ ಜಾಗಕ್ಕೆ ಬೇಲಿ ಹಾಕು, ನಾನು ನಿನಗೆ ಯಾವ ರೀತಿ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ, ಆದರೆ ನೀನು ನನ್ನ ಕೈಗೆ ಸಿಗದ ಹಾಗೆ ನಗಾಡುತ್ತಿದ್ದೀಯಾ, ಸೂಳೆ ಮಗನೇ ಈಗ ನಿನ್ನ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿ, ನನ್ನ ಕೈ ಕಾಲು ಮುರಿಸಿ ಬಿಡುತ್ತೇನೆ ಎಂದರು, ಇನ್ಸಪೇಕ್ಟರ್ ಶಿವಕುಮಾರ್ ರವರು ಬಂದು ಎಲಾ ಕಿರಣ್ ಕುಮಾರ ನಿನ್ನಮ್ಮನ್ ಸೂಳೆ ಮಗನೆ ನನ್ನ ಲಿಮಿಟಲ್ಲಿ ಪೊಲೀಸ್ ಅಧಿಕಾರಿಗಳ ಎದೆಯೇ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ಕೊಡುತ್ತೀಯಾ ಎಂದು, ಇನ್ಸಪೇಕ್ಟ ಶಿವಕುಮಾರ್, ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ್ ನಾಯ್ಕ, ಸಬ್ ಇನ್ಸ್ ಪೆಕ್ಟರ್ ರವರುಗಳು ನನ್ನ ಕೈ ಕಾಲು, ಬೆರಳುಗಳಿಗೆ, ಹಾಕಿ ಬ್ಯಾಟ್‌ನಿಂದ ಒಡೆದು, ನನ್ನ ಕತ್ತು ಆ ರಾಗಿ ಮೆಷಿನ್ ಬೆಲ್ಸ್‌ಗಳಲ್ಲಿ ಮನಸೋ ಇಚ್ಛೆ, ಮನಬಂದಂತೆ ನನ್ನನ್ನು ಹೊಡೆದು ರಕ್ತಾಯಗೊಳಿಸಿ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ, ಆಗ ನಾನು ಸುಸ್ತಾಗಿ ಬಿದ್ದು ಹೋದೆ, ನೂತನ ನನಗೆ ಪ್ರಶ್ನೆ ಬಂದಾಗ ನಾನು ಸಾರ್ ನೀರು ಕೊಡಿ ದಾಹವಾಗುತ್ತಿದೆ ಎಂದು ಕೇಳಿದಾಗ, ಶೈಲೇಶ್ ರವರು ಸೂಳೆ ಮಗನೆ ನಿನಗೆ ನೀರು ಬೇಕಾ ನನ್ನ ಉಚ್ಚ ಉಯ್ಯುತ್ತೇನೆ ಕುಡಿ ಎಂದು ತನ್ನ ಗುಪ್ತಾಂಗವನ್ನು ಬಿಚ್ಚಿ ಕೊರಿಸಿರುತ್ತಾರೆ. ನಂತರ ನನ್ನ ತಂದೆ ತಾಯಿ ನನ್ನನ್ನು ಬಿಡಲು ಎಷ್ಟು ಅಂಗಲಾಚಿ ಕಾಲುಹಿಡಿದುಕೊಂಡು ಕೇಳಿಕೊಂಡರು ನನ್ನನ್ನು ಬಿಡದೇ, ನಿನ್ನಮ್ಮನ್‌ನ ಕೇಯ ಈ ಕೂಡಲೇ ನೀನು ಊರು ಬಿಡಬೇಕು ಇಲ್ಲ ಎಂದರೆ ಸುಳ್ಳು ಕೇಸ್‌ಗಳಲ್ಲಿ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ, ನಂತರ ನಾನು ಯಾರಿಗೂ ದೂರು ನೀಡಲ್ಲ ಸಾರ್ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಸಾರ್ ಇನ್ನೊಂದು ಬಾರಿ ನೀವು ಕರೆದಾಗಲೆಲ್ಲ ಬರುತ್ತೀನಿ, ನೀವು ಹೇಳಿದ ಕೆಲಸವನ್ನು ಮಾಡುತ್ತೇನೆ ಎಂದಾಗ ದಿನಾಂಕ:14-01-2023 ರಂದು ರಾತ್ರಿ ನನ್ನನ್ನು ಠಾಣೆಯಿಂದ ಬಿಟ್ಟು ಕಳುಹಿಸಿರುತ್ತಾರೆ, ಈ ಎಲ್ಲಾ ಘಟನೆಯನ್ನು ಭಾಗ್ಯಮ್ಮ, ಗೋಪಾಲ್, ಹಾಗೂ ಇತರರು ಕಣ್ಣಾರೆ ಕಂಡಿರುತ್ತಾರೆ, ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾರೆ.
ಆದುದರಿಂದ ಯಾವುದೇ ತಪ್ಪ ಮಾಡದೇ ಇರುವ ನನ್ನ ಮೇಲೆ ಉದ್ದೇಶಪೂರಕವಾಗಿ 3 ದಿನಗಳ ಕಾಲ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ನನಗೆ ಅವಾಚ್ಯ ಶಬ್ದಗಳಿಂದ ಹೀನಾಮಾನವಾಗಿ ಬೈದು, ಮಾರಾಣಾಂತಿಕವಾಗಿ ನನ್ನ ಮೇಲೆ ಹಲ್ಲೆ ಮಾಡಿ, ರಕ್ತ ಗಾಯಮಾಡಿ ನನ್ನ ಮೇಲೆ ದೌಜನ್ಯ ದಬ್ಬಾಳಿಕೆ ವೆಸಗಿ, ನಮ್ಮ ವಿರುದ್ಧ ಏನಾದರೂ ಮೇಲಾಧಿಕಾರಿಗಳಿಗೆ ದೂರು ನೀಡಿದರೆ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ನನಗೆ ಪ್ರಾಣ ಹಾಕಿರುವ ಕೋಣನಕುಂಟೆ, ಇನ್ಸಪೇಕ್ಟರ್ ಶಿವಕುಮಾರ್, ಪೊಲೀಸ್ ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ ನಾಯ್ಕ, ಸಬ್ ಇನ್ಸಪೇಕ್ಟರ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ, ಹಾಗೂ ಕೋಣನಕುಂಟೆ ಇನ್ಸಪೇಕ್ಟರ್ ಶಿವಕುಮಾರ್ ಹಾಗೂ ಮೇಲ್ಕಂಡ ಅಧಿಕಾರಿಗಳು ನಮ್ಮ ವಿರುದ್ಧ ಏನಾದರೂ ಮೇಲಾಧಿಕಾರಿಗಳಿಗೆ ದೂರು ನೀಡಿದರೆ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ನನಗೆ ಪ್ರಾಣ ಬೆದರಿಕೆ ಹಾಕಿದ್ದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಹಾಗೂ ಪೊಲೀಸ್ ಪೇದೆ ಶೈಲೇಶ್ ರವರು ಸುಮಾರು 5 ವರ್ಷಗಳಿಂದ ಇದೇ ಠಾಣೆಯಲ್ಲಿಯೇ ಇದ್ದು, ಈ ಹಿಂದೆ 3 ತಿಂಗಳು ಬೇರ ಠಾಣೆಗೆ ಮೇಲಾಧಿಕಾರಿಗಳು ವರ್ಗಾವಣೆ ಮಾಡಿದರು. ಇವರು ತಮ್ಮ ಹಣ ಬಲ, ಅಧಿಕಾರ ಬಲದಿಂದ ಇದೇ ಠಾಣೆಗೆ ಹಾಕಿಸಿಕೊಂಡು ಖಾಸಗಿ ಜಮೀನು ವಿಚಾರಗಳಲ್ಲಿ ಇವರು ತೊಡಗಿರುತ್ತಾರೆ. ಇವರ ಸಂಬಂಧಿಕರಾದ ಇವರ ಅಕ್ಕನ ಹೆಸರಿನಲ್ಲಿ ಈ ಠಾಣಾ ವ್ಯಾಪ್ತಿಯಲ್ಲಿ ಸುಮಾರು 5 ರಿಂದ 6 ಬಾಲಿ ನಿವೇಶನಗಳನ್ನು ಖರೀದಿಸಿರುತ್ತಾರೆ. ಈ ವಿಚಾರವನ್ನು ಶೈಲೇಶ್ ಸಾರ್ ರವರೇ ನನಗೆ ಕಂಪೌಂಡ್ ಹಾಕಲು ಹೇಳಿರುತ್ತಾರೆ, ಆದ್ದರಿಂದ ಇವರ ಮೇಲೆ ಇಲಾಖಾ ತನಿಖೆ ನಡೆಸಿ ಇವರನ್ನು ಈ ಠಾಣೆಯಿಂದ ವರ್ಗಾವಣೆ ಮಾಡಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಖಿರನ್ ಕುಮಾರ್ ತಿಳಿಸಿದರು.
City Today News