ಹೆಚ್.ಎಂ. ಗೋಪಿಕೃಷ್ಣರವರಿಗೆ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿ ಪತ್ರಿಕಾ ಗೋಷ್ಠಿ

ಹೆಚ್.ಎಂ. ಗೋಪಿಕೃಷ್ಣ ರವರು ಕಾಂಗ್ರೆಸ್ ಪಕ್ಷದಲ್ಲಿ ಮಡಿವಾಳ ಸಮಾಜದ ಏಕೈಕ ಸಕ್ರಿಯ ರಾಜಕಾರಣಿ, ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಸುಮಾರು 20ಸಾವಿರ ಸದಸ್ಯರನ್ನು ಮಾಡಿದ್ದಾರೆ. ಎಲ್ಲಾ ಪಕ್ಷಗಳು ಮಡಿವಾಳರ ಯುವ ನಾಯಕರನ್ನು ಪಕ್ಷದ ಸಂಘಟನೆಗೆ ದುಡಿಸಿಕೊಂಡು ರಾಜಕೀಯ ಸ್ಥಾನ ಮಾನ ನೀಡದೆ ನಿರ್ಲಕ್ಷಿಸುತ್ತಿವೆ, ಹೆಚ್.ಎಂ. ಗೋಪಿಕೃಷ್ಣ ರವರು 2013 ಮತ್ತು 2018ರ ಚುನಾವಣೆಯಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಕಡಿಮೆ ಮತಗಳ ಅಂತರದಿಂದ ಸೋತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಈ ಸಾರಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲ್ಲುವ ಎಲ್ಲಾ ಲಕ್ಷಣಗಳು ಇವೆ. ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಿ ಈ ಮೂಲಕ ಒಬ್ಬ ಮಡಿವಾಳರನ್ನು ವಿಧಾನಸೌದಕ್ಕೆ ಕಳುಹಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಕಾಯಕ ಸಮಾಜಗಳಿಗೆ ಕಾಂಗ್ರೆಸ್ ಪಕ್ಷ ರಾಜಕೀಯ ಶಕ್ತಿ ನೀಡಿದಂತಾಗುತ್ತದೆ. ಆದ್ದರಿಂದ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಆಯ್ಕೆ ಕಮಿಟಿಯ ಎಲ್ಲಾ ಸದಸ್ಯರು ಮತ್ತು ಹೈಕಮಾಂಡ್ ಹೆಚ್.ಎಂ.ಗೋಪಿಕೃಷ್ಣ ರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು, ಹಾಗಾದರೆ ಮಾತ್ರ ರಾಜ್ಯದ ಎಲ್ಲಾ ಮಡಿವಾಳರು ಕಾಂಗ್ರೆಸ್ಸನ್ನು ಬೆಂಬಲಿಸುತ್ತೇವೆ. ಕುತಂತ್ರ ರಾಜಕಾರಣದಿಂದ ಹೆಚ್.ಎಂ. ಗೋಪಿಕೃಷ್ಣ ರವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೆ ರಾಜ್ಯದ ಎಲ್ಲಾ ಮಡಿವಾಳರು ಹಿಂದುಳಿದ ಕಾಯಕ ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿ, ನಾವು ಕಾಂಗ್ರೆಸನ್ನು ವಿರೋಧಿಸುತ್ತೇವೆ. ಟಿಕೆಟ್ ಕೈ ತಪ್ಪಲು ಕಾರಣರಾದವರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ. ಅದಕ್ಕೆ ಅವಕಾಶ ನೀಡದೆ ಹೆಚ್.ಎಂ.ಗೋಪಿಕೃಷ್ಣ ರವರಿಗೆ ಟಿಕೆಟ್ ನೀಡಲೇಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೆಚ್.ಎಂ. ಕೆಂಪಶೆಟ್ಟಿ ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936