ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ವರ್ಗವಾದ ಗಾಣಿಗ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ “ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ” ವನ್ನು ಸ್ಥಾಪಿಸಿ ಸರ್ಕಾರವು ಆದೇಶ ಹೊರಡಿಸಿದ್ದು, ನುಡಿದಂತೆ ನಡೆದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ಸಮಸ್ತ ಗಾಣಿಗ ಸಮುದಾಯದ ಪರವಾಗಿ ಹೃತ್ತೂರ್ವಕ ಧನ್ಯವಾದಗಳನ್ನು ಕೃತಜ್ಞತಾಪೂರ್ವಕವಾಗಿ ಅರ್ಪಿಸಬಯಸಿದೆ.

ಮುಂಬರುವ ಅವಧಿಯಲ್ಲಿ ಸರ್ಕಾರವು ಗಾಣಿಗ ಜನಾಂಗದ ಪುರೋಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ತನ್ಮೂಲಕ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವುದೆಂಬ ಆಶಯವನ್ನು ಹೊಂದಲಾಗಿದೆ ಎಂದು (ಎಂ.ಆರ್.ರಾಜಶೇಖರ್-ಅಧ್ಯಕ್ಷರು, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಸಂಘದ ಮುನಿಶೆಟ್ಟಿ, ಅಮರ್ ನಾಥ್, ರಂಗರಾಜ್, ಮಲ್ಲೇಶ್, ನರಸಿಂಹಯ್ಯ,ಲೋಕೇಶ್,ಸಧಾಶಿವ ಮತ್ತು ಗಾಯತ್ರಿ ಮುನಿರಾಜು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.
City Today News – 9341997936