
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಏಳಿ! ಎದ್ದೇಳಿ! ವೀರಕನ್ನಡಿಗರೇ, ಭ್ರಷ್ಟರನ್ನು ತೊಲಗಿಸುವ ತನಕ ವಿರಮಿಸದಿರಿ ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ನೂರಾರು ವಾಹನಗಳೊಂದಿಗೆ “KRS ಪಕ್ಷವನ್ನು ಬೆಂಬಲಿಸಿ ಕರ್ನಾಟಕ ರಕ್ಷಿಸಿ” ಎಂಬ ಘೋಷವಾಕ್ಯದೊಂದಿಗೆ “ಕರುನಾಡು ಕಟ್ಟೋಣ – ಸಂಕಲ್ಪ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೇ ಸೋಮವಾರ, 27-02-202 ರಾಮನಗರ ಜಿಲ್ಲೆಯ ಮಾಗಡಿಯಿಂದ ಪ್ರಾರಂಭವಾಗಿ ತುಮಕೂರು, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗಿ ತುಮಕೂರಿನಲ್ಲಿ ಈ ಯಾತ್ರೆಯು ಸಮಾರೋಪಗೊಳ್ಳಲಿದ
ಈಗಾಗಲೆ, ರಾಜ್ಯ ಸಮಿತಿಯ ಹಲವಾರು ಪದಾಧಿಕಾರಿಗಳು ಕಳೆದ ಮೂರು ತಿಂಗಳಿಂದ ನಿರಂತರವಾಗಿ ರಾಜ್ಯಾದ್ಯಂತ ಪ್ರವಾಸ, ಯಾತ್ರೆಗಳನ್ನು ಹಮ್ಮಿಕೊಳ್ಳೂವುದು, ಜನರಿಂದ ದೇಣಿಗೆ ಸಂಗ್ರಹ ಕಾರ್ಯ, ಭ್ರಷ್ಟ ಜೆಸಿಬಿ ಪಕ್ಷಗಳ ದುಷ್ಟ ಚುನಾವಣಾ ತಂತ್ರಗಳನ್ನು ನಿಯಂತ್ರಿಸಲು ಒತ್ತಾಯಿಸಿ ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಯಾತ್ರೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಕೆ.ಆರ್.ಎಸ್. ಪಕ್ಷದ ಪ್ರಮುಖ ಪ್ರಣಾಳಿಕಾ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಮತ್ತು ಅದನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯ ಸಮಾರೋಪದಲ್ಲಿ ಪಕ್ಷದ ಸಂಪೂರ್ಣ ಪ್ರಣಾಳಿಕೆಯನ್ನು ಬಿಡುಗಡ ಮಾಡಲಾಗುವುದು. ಈಗಾಗಲೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 82 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಜನರ ಬಳಿಗೆ ತೆರಳಿ ತನ್ನ ಹಾಗೂ ಜೆಸಿಬಿ ಪಕ್ಷಗಳ ರಾಜಕೀಯ ವಿಚಾರಗಳನ್ನ ಕ್ಷೇತ್ರದ ಮತದಾರರಿಗೆ ಬಿಡಿಬಿಡಿಯಾಗಿ ವಿವರಿಸುತ್ತಿದ್ದಾರೆ. ಈಗಾಗಲೇ ಜೆಸಿಬಿ ಪಕ್ಷಗಳು ಮಾಡುತ್ತಿರುವ ಅನಾಚಾರದ ಕುಕ್ಕರ್, ಲಿಕ್ಕರ್, ಹಣ, ಹೆಂಡದ ವಿಚಾರಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಪಕ್ಷದ ಸಂಘಟನೆಯಲ್ಲಿ ಮತ್ತು ಕ್ಷೇತ್ರದಲ್ಲಿ ಉತ್ತಮವಾಗಿ ಪ್ರಚಾರ ನಡೆಸಿರುವವರನ್ನು ಅಭ್ಯರ್ಥಿಗಳಂದು ಘೋಷಣೆ ಮಾಡಲಾಗುವುದು.
ಜೆಸಿಬಿ ಪಕ್ಷಗಳು ಸಂಪೂರ್ಣವಾಗಿ ಸಮಾಜವನ್ನು ಒಡೆದು, ರಾಜ್ಯವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿವೆ ಮತ್ತು ಅವರು ಪ್ರತಿನಿತ್ಯವೂ ಹಣ, ಹೆಂಡ, ಸೀರೆ ಹಂಚುವ ಕೆಲಸದಲ್ಲಿ ಹೊಡಗಿದ್ದಾರೆ, ಈ ಪಕ್ಷಗಳಿಗೆ ರಾಜ್ಯವನ್ನು ಸಮಗ್ರವಾಗಿ ಕಟ್ಟುವ, ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನಡೆಸುವ ಯೋಜನೆಯಾಗಲಿ ಅಥವಾ ಬದ್ಧತೆಯಾಗಲಿ ಇಲ್ಲವೇ ಇಲ್ಲ. ಅವರ ಎಲ್ಲಾ ಯೋಜನಗಳು ಕೇವಲ ಹಣ ಮಾಡಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಮಾತ್ರ ರಾಜ್ಯದ ಜನ ಜೆಸಿಬಿ ಪಕ್ಷಗಳ ಒಪ್ಪಂದ ರಾಜಕಾರಣ ವ್ಯವಸ್ಥೆಯನ್ನ ತಿರಸ್ಕರಿಸಿ ಉತ್ತಮ ರಾಜಕಾರಣವನ್ನು ನಾಡಿಗೆ ತರುವ ನಿಟ್ಟಿನಲ್ಲಿ ಹೋರಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನ ಬೆಂಬಲಿಸುತ್ತಾರೆ ಹಾಗೂ 2022ರ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸೌಧದ ಶಕ್ತಿ ಕೇಂದ್ರಕ್ಕೆ ಕಳಿಸಕೊಡಲಿದ್ದಾರೆ ಎಂಬ ನಂಬಿಕೆಯಿಂದ ರಾಜ್ಯದಲ್ಲಿ ಯಾತ್ರೆಯು ನಡೆಯಲಿದೆ ಎಂದು ಸೋಮಸುಂದರ್ ಕೆ.ಎಸ್- ರಾಜ್ಯ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936