ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್‌ ನಾರಾಯಣ ಈ ಕೂಡಲೇ ಬಂಧಿಸಲು ಒತ್ತಾಯಿಸಿ ಶೀಘ್ರದಲ್ಲೆ ಶೋಷಿತ ಸಮುದಾಯಗಳ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ನಿರ್ಧಾರ

ಚಾತುರ್ವಣ್ರ ಪದ್ಧತಿಯಲ್ಲಿ ಶೂದ್ರರು ಅಂದರೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಅತ್ಯಂತ ಕೆಳವರ್ಣದವರಾಗಿದ್ದಾರೆ. ಧರ್ಮಸೂತ್ರಗಳು, ಸ್ಮೃತಿಗಳು ಒಬಿಸಿಗಳನ್ನು ಪಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತವೆ. ವ್ಯವಸಾಯ ಮಾಡುವ ಒಕ್ಕಲಿಗರನ್ನು ಮನುಸ್ಮೃತಿಯು ದುರ್ಜನರೆಂದು ಕರೆಯುತ್ತದೆ. ಒಬಿಸಿ, ದಲಿತರು ಹಾಗೂ ಮಹಿಳೆಯರನ್ನು ಕೀಳಾಗಿ ಕಾಣುವ ಇಂತಹ ಚಾತುರ್ವಣ್ರ ಧರ್ಮವನ್ನು ಮತ್ತೆ ಸ್ಥಾಪನೆ ಮಾಡಲು ಬಿಜೆಪಿ-ಆರ್.ಎಸ್.ಎಸ್. ಹವಣಿಸುತ್ತಿದೆ. ಇದನ್ನು ಸಾಧಿಸಲು ದಲಿತರ ವಿರುದ್ಧ ಒಬಿಸಿಗಳನ್ನು, ಕ್ರೈಸ್ತರು-ಮುಸ್ಲಿಮರ ವಿರುದ್ಧ ದಲಿತರು ಒಬಿಸಿಗಳನ್ನು ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿದೆ. ಇದರ ಭಾಗವಾಗಿಯೇ ಹಲವು ರಾಜ್ಯಗಳಲ್ಲಿ ತನ್ನ ಓಟ್ ಬ್ಯಾಂಕ್‌ ರಾಜಕಾರಣವನ್ನು ಗಟ್ಟಿ ಮಾಡಿಕೊಂಡಿದೆ. ಈ ಪ್ರಕ್ರಿಯೆ ಕರ್ನಾಟಕಕ್ಕೂ ಬಂದು ಬಹಳ ವರ್ಷವಾಯಿತು. ಮುಂಬರುವ ಚುನಾವಣೆಯಲ್ಲಿ ಮತ್ತೆ ಕನ್ನಡಿಗರನ್ನು ಒಡೆದು ಆಳಲು ಬಿಜೆಪಿ-ಆರ್.ಎಸ್.ಎಸ್. ದಲಿತರ ವಿರುದ್ಧ ದಲಿತರು, ಓಸಿಗಳ ವಿರುದ್ಧ ಒಬಿಸಿಗಳನ್ನು ಎತ್ತಿ ಕಟ್ಟುವ ಉತ್ತರಭಾರತದ ಮಾದರಿಯನ್ನು ಕರ್ನಾಟಕದಲ್ಲಿ ಪಯೋಗಿಸಲು ಸಜ್ಜಾಗಿದೆ. ದಲಿತ ಹಿಂದುಳಿದ ಸಮುದಾಯಗಳ ಸಂವಿಧಾನಕಿ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇಡಬ್ಲೂಎಸ್ ಜಾರಿ ಮಾಡುವ ಮೂಲಕ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ಅಪವ್ಯಾಕ್ಯಾನ ಮಾಡಲಾಗಿದೆ. ಸಂವಿಧಾನದ ಮೂಲ ಆಶಯಗಳನ್ನು ತಿರುಚಿ, ಬದಲಾಯಿಸುವ ಹುನ್ನಾರಗಳನ್ನು ಬಿಜೆಪಿ ನಡೆಸುತ್ತಿದೆ. ಇವುಗಳ ಮುಂದುವರಿಕೆಗಾಗಿ ಸಂವಿದಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇರುವ ಜನ ನಾಯಕರನ್ನು ಅಪಮಾನಿಸುವ ಹೀಯಾಳಿಸುವ ಉದ್ದೇಶಿತ, ದುರುದ್ದೇಶಿತ ಕಾರಸೂಚಿಯನ್ನು ರೂಪಿಸಿಕೊಂಡಿದ್ದಾರೆ. ಹೀಗಾಗಿ ಈ ಪ್ರಯೋಗವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹಾಲಿ ಉನ್ನತ ಶಿಕ್ಷಣ ಸಚಿವ ನಾರಾಯಣ ಕೊಲೆಯ ಬೆದರಿಕೆ ಹಾಕುವುದರಿಂದ ಆರಂಭವಾಗಿದೆ. ದಿನಾಂಕ:13-02-2023ರಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸಭೆಯಲ್ಲಿ ಕರ್ನಾಟಕ ಸರ್ಕಾರದ ಉನ್ನತ ಸಚಿವರಾದ ಡಾ|ಆಶ್ವತ್ ನಾರಾಯಣ ರವು ರಾಜ್ಯದ ಅತ್ಯುನ್ನತ ಸರ್ವ ಸಮುದಾಯಗಳನ್ನು ಸಮಾನ ರೀತಿಯಲ್ಲಿ ಗೌರವಿಸುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ

ವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಒಡೆದು ಹಾಕಬೇಕೆನ್ನುವ ಭಾಷಣ ಮಾಧ್ಯಮಗಳಲ್ಲಿ ವೈರಲ್ ಆದ ಸಾರಾಂಶ ಈ ಕೆಳಗಿನಂತಿದೆ. ಅಶ್ವಥ್ ನಾರಾಯಣ ಮಾತನಾಡುತ್ತಾ “ಮಂಡ್ಯದಿಂದಲೇ ಪ್ರಾರಂಭವಾಗಬೇಕು. ರಾಜಕೀಯ ದಿಕ್ಕೂಚಿ ಎಲ್ಲಿಂದ ಕಾಣಬೇಕು. ಆ ಕಾಣಂಗೇ ಮಾಡುತ್ತಿರಾ ತಾನೇ? ಇದನ್ನು ಮಾಡುತ್ತಿರಾ ಅಂಥ ಮತ್ತೊಮ್ಮೆ ಕೇಳಿಕೊಂಡು ಇಲ್ಲದೇ ಇದೇ, ಟಿಪ್ಪು ಹೆಸರನ್ನು ಹೇಳಿದರೆ ಸಿದ್ದರಾಮಯ್ಯನವರು ಬಂದು ಮಗಳು | ಬಿಡುತ್ತಾರೆ. ಟಿಪ್ಪು, ಟಿಪ್ಪು, ಟಿಪ್ಪು ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಹಾಗಾಗಿ ಟಿಪ್ಪು ಸುಲ್ತಾನ್‌ನನ್ನ ಏಲ್ಲಿಗೆ ಕಳುಹಿಸಬೇಕು? ಹುರಿಗೌಡ ನಂಜೇಗೌಡ ಏನ್ ಮಾಡುದ್ರು? ಉರಿಗೌಡ, ನಂಜೇಗೌಡ ಏನ್ ಮಾಡುದ್ರು? ಅಂಗೇ ಇವರನ್ನು ಒಡೆದು ಹಾಕಬೇಕು. ಈ ರೀತಿ ಕಳುಹಿಸಿಕೊಡುವಂತೆ ಆಗಬೇಕು. ಈ ರೀತಿ ನಮ್ಮ ಪಕ್ಷವನ್ನು ಎದುರು ನೋಡಿ ಕೈಹಿಡಿರಿ ನಮ್ಮದನ್ನ ಕಾಪಾಡುವಂತಹದು ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಒಡೆದು ಹಾಕಬೇಕೆಂದು ಪ್ರಚೋದನಾ ಹೇಳಿಕೆ ನೀಡುವ ಮುಖಾಂತರ ಜನರನ್ನು ಎತ್ತಿ ಕಟ್ಟಿದ್ದಾರೆ. ಬಹಿರಂಗ ಸಭೆಯಲ್ಲಿಯೇ ‘ಸಿದ್ದರಾಮಯ್ಯನವರನ್ನು ಟಿಪ್ಪು ಮಾದರಿಯಲ್ಲಿ ಹೊಡೆದು ಹಾಕಬೇಕು’ ಎಂದು ಘಂಟಾಘೋಷವಾಗಿ ಹೇಳುವ ಮೂಲಕ ಉತ್ತರ ಭಾರತದ ಒಬಿಸಿಗಳನ್ನು ಒಡೆದು ಆಳುವ ಯಶಸ್ವೀ ಪ್ರಯೋಗವನ್ನು ಕರ್ನಾಟಕದಲ್ಲಿಯೂ ಪ್ರಯೋಗಿಸಲು ಮುಂದಾಗಿದೆ. ಮತ್ತೊಂದೆಡೆ ಶಾಸಕ ಹಾಗೂ ಬಿಜೆಪಿ ನಾಯಕ ಸಿ.ಟಿ.ರವಿ ಅವರನ್ನು ಪದೇ ಪದೇ ಹೀನಾಯ ಮಾತುಗಳ ಮೂಲಕ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಅಪಮಾನಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿಗೆ ಹಾಲಿ ಬಿಜೆಪಿ ಸಚಿವನೊಬ್ಬ ಹಾಕಿರುವ ಕೊಲೆ ಬೆದರಿಕೆಯ ಇಡೀ ದೇಶವನ್ನು ಹೆಚ್ಚಿ ಬೀಳಿಸಬೇಕಿತ್ತು. ತತ್ ಕ್ಷಣ ಕಾರ್ಯಪ್ರವೃತ್ತರಾಗಿ ಅಶ್ವಥ್ ನಾರಾಯಣನನ್ನು ಮೋಲೀಸರು ಬಂಧಿಸಿ ಜೈಲಿಗಟ್ಟಬೇಕಿತ್ತು. ಪೋಲಿಸರು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಳ್ಳಬೇಕಿತ್ತು. ಇದಕ್ಕಿಂತ ಹೆಚ್ಚಾಗಿ ಬಸವಣ್ಣ, ಕುವೆಂಪು, ಕನಕದಾಸರಂತಹ ಮಹಾಮಾನವರ ತವರೂರಾದ ಕರ್ನಾಟಕದ ಜನತೆಗೆ ಇಂತಹ ಕೊಲೆ ಬೆದರಿಕೆಗಳು ಕ್ರೂರವೆನಿಸಬೇಕಿತ್ತು. ಅಸಹ್ಯವೆನಿಸಬೇಕಿತ್ತು, ಆದರೆ ಇದಾವುದೂ ಆಗಿಲ್ಲ.

ಕರ್ನಾಟಕದ ರಾಜಕಾರಣ ಇಂತಹ ಹೀನ ಸ್ಥಿತಿಯನ್ನು ಎಂದಿಗೂ ಕಂಡಿರಲಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಯಾವ ಪಕವು ಸಹ ಇಂತಹ ಕೀಳು ರಾಜಕಾರಣವನ್ನು ಮಾಡಿರಲಿಲ್ಲ. ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ನಿಬಂಧಿಸುವುದರಿಂದ, ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವುದು, ಒಂದಿಡೀ ಜನಾಂಗಕ್ಕೆ ‘ಗುಂಡು ಹೊಡೆಯಿರಿ’ ಎನ್ನುವುದರಿಂದ, ವ್ಯಾಪಾರದಲ್ಲಿ ಒಂದು ಜನಾಂಗವನ್ನು ನಿಬಂಧಿಸುವುದರಿಂದ ಚುನಾವಣೆಯಲ್ಲಿ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬ ‘ಹೀನಾಯ ರಾಜಕಾರಣ’ ವನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಈಗ ಕಣ್ಣಾರೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲನಿಕ ಪಾತ್ರಗಳನ್ನು ಸೃಷ್ಟ ಮಾಡುವುದರ ಮೂಲಕ ಕರ್ನಾಟಕದ ಒಕ್ಕಲಿಗ ಸಮುದಾಯದ ಘನ ಅಸ್ಮಿತೆಯನ್ನೇ ಅಳಿಸಿ ಹಾಕುವ

ಹುನ್ನಾರಕ್ಕೂ ಬಿ.ಜೆ.ಪಿ.ಆರ್.ಎಸ್.ಎಸ್. ಕೈ ಹಾಕಿರುವುದು ದುರಂತದ ಸಂಗತಿಯಾಗಿದೆ. ಹಾಗಾಗಿ ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ವು ಇಂತಹ ಜೀವವಿರೋಧಿ ನಡೆಗಳನ್ನು ತೀವ್ರವಾಗಿ ಖಂಡಿಸುತ್ತದೆ.

1. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಚಿವ ಅಶ್ವಥ್ ನಾರಾಯಣ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಕೊಳ್ಳಬೇಕು. ತಕ್ಷಣ ಬಂಧಿಸಬೇಕು.

2. ಪದೇ ಪದೇ ಹೀನಾಯ ಮಾತುಗಳ ಮೂಲಕ ಮಾನ್ಯ ಸಿದ್ದರಾಮಯ್ಯನವರನ್ನು ಅಪಮಾನಿಸುತ್ತಿರುವ ಶಾಸಕ ಸಿ.ಟಿ.ರವಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು

3. ಇಲ್ಲಿಯವರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿರುವ ಮಂಡ್ಯ ಪೋಲಿಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.

ಬಿಜೆಪಿ ಪರಿವಾರದ ಇಂತಹ ಕುತಂತ್ರಗಳನ್ನು ವಿರೋಧಿಸಿ ನಾಡಿನ ದಲಿತ, ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯಗಳು ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಶೀಘ್ರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗುವುದು.

ಬುದ್ಧ, ಬಸವ, ಕನಕ, ಅಂಬೇಡ್ಕರ್, ಕುವೆಂಪು ನೆಲದಲ್ಲಿ ದ್ವೇಷ ಬಿತ್ತುವುದನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ತಿಳಿಸಲಾಯಿತು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೆ.ಎಂ.ರಾಮಚಂದ್ರಪ್ಪ , ಪ್ರೋ.ಎಸ್.ವಿ.ನರಸಿಂಹಯ್ಯ, ಮಾವಳ್ಳಿ ಶಂಕರ್, ಡಾ.ಬಿ.ಟಿ.ಲಲಿತಾನಾಯಕ್‌, ಎಣ್ಣೆಗೆರ R. ವೆಂಕಟರಾಮಯ್ಯ, ಎನ್. ಅನಂತನಾಯ್ಕ,ಸುರೇಶ್ ಎಂ.ಲಾತೋರ್‌. ಉಪಸ್ತಿತರಿದ್ದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.