ನೂತನ ಸಂಸತ್‌ ಭವನಕ್ಕೆ ‘ಅನುಭವ ಮಂಟಪ’ ನಾಮಕರಣಕ್ಕೆ ಒಕ್ಕೊರಲ ಅಗ್ರಹ

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತನ್ನ ಐದು ವರ್ಷಗಳ ಯಶಸ್ವಿ ಹೋರಾಟದ ಹಾದಿ ಸವೆಸಿದ್ದು ಇತ್ತೀಚೆಗಷ್ಟೆ ‘ಪಂಚ ಸಂಭ್ರಮ'” ಕಾರ್ಯಕ್ರಮ ಅರಿಸಿತು. ಈ ಐದು ವರ್ಷಗಳ ಅವಧಿಯಲ್ಲಿ ಹತ್ತಾರು ಸಮಾಜವರ ಹೋರಾಗಳಲ್ಲಿ ಸಂಘಟನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದರಲ್ಲಿ ಪ್ರಮುಖವಾದದ್ದು ಅನುಭವ ತುಂಟಪದ ವಿಚಾರ 12ನೇ ಶತಮಾನದಲ್ಲಿಯೇ ಜಗಜ್ಯೋತಿ ಬಸವೇಶ್ವರರು ಸ್ಥಾಪಿಸಿದ್ದ ಮತ್ತು ಇಡೀ ಜಗತ್ತಿಗೆ ಅನುಭವ ಮಂಟಪದ ಮುಖೇನ ಮೊಟ್ಟಮೊದಲ ಬಾರಿಗೆ ಪ್ರಜಾಪ್ರತಿನಿಧಿ ಸಂಸತ್ ವ್ಯವಸ್ಥೆಯನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನಕ್ಕೆ ‘ಅನುಭವ ಮಂಟಪ’ ಎಂದು ನಾಮಕರಣ ಮಾಡಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ನಮ್ಮ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಒತ್ತಾಯಿಸುತ್ತದೆ. ಈ ಸಂಬಂಧ ಈಗಾಗಲೇ ವೇದಿಕೆ ಸಾಕಷ್ಟು ಮುಂದಡಿ ಇಟ್ಟಿದೆ ವಿವಿಧ ಮಠಾಧೀಶರು, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ ಸಮಗ್ರ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ಖುದ್ದು ನವದೆಹಲಿಗೆ ತೆರಳಿ ಹಲವು ಮಂದಿ ಕೇಂದ್ರ ಸಚಿವರು, ಕರ್ನಾಟಕದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಹಾಗೂ ಬಸವತತ್ವ ಪಾಲನೆಯ ವಿವಿಧ ರಾಜ್ಯಗಳ ಸಂಸದರಿಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮನವಿ ಪತ್ರ ನೀಡಿದ್ದು, ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ’ ಎಂದು ಹೆಸರಿಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒತ್ತಾಯಿಸಿದೆ.

ಬಸವಣ್ಣ ಅವರ ಬಗ್ಗೆ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಹತ್ತಾರು ಬಾರಿ ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬಸವೇಶ್ವರರ ಸಮಾನತೆ, ಜಾತ್ಯತೀತ ಪರಿಕಲ್ಪನೆ, ಕೆಳವರ್ಗದ ಬಗ್ಗೆ ಅವರಿಗಿದ್ದ ಕಾಳಜಿ ಎಲ್ಲವೂ ಇಂದಿಗೂ ಪ್ರೇರಣೆ ಎಂದು ಪ್ರಶಂಶಿಸಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಖುದ್ದು ಬಸವಣ್ಣ ಅವರ ವಚನ ಪ್ರಸ್ತಾಪಿಸಿ ನಮ್ಮ ಆಡಳಿತಕ್ಕೆ ಬಸವಣ್ಣ ಅವರೇ ಆದರ್ಶ ಎಂದಿದ್ದಾರೆ. ಇದನ್ನು ವೇದಿಕೆ ಶ್ಲಾಘಿಸುತ್ತದೆ. ಬಸವೇಶ್ವರರ ಬಗ್ಗೆ ಇಷ್ಟೆಲ್ಲಾ ಗೌರವ ಭಾವನೆ ಹೊಂದಿರುವ ಹಿನ್ನೆಲೆಯಲ್ಲಿ ಹಾಗೂ ಜಗತ್ತಿಗೆ ಸಂಸತ್ ವ್ಯವಸ್ಥೆ ಪರಿಚಯಿಸಿದ ಅವರ ಕಾಯಕ ಸ್ಮರಣೆ ಮತ್ತು ಆದರ್ಶಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೂ ಪರಿಚಯವಾಗಲು ನೂತನ ಸಂಸತ್ ಭವನಕ್ಕೆ `ಅನುಭವ ಮಂಟಪ’ ಎಂದು ನಾಮಕರಣ ಮಾಡುವುದು ಪ್ರಸ್ತುತ ಮತ್ತು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ಕನ್ನಡನಾಡಿದ ಏಳೂವರೆ ಕೋಟಿ ಜನರು ಒಂದೇ ಧ್ವನಿಯಾಗಿ ನಿಲ್ಲಬೇಕಿದೆ.

ಈ ನಿಟ್ಟಿನಲ್ಲಿ ಕರ್ನಾಟಕದ ಅಡಳಿತಾರೂಢ ಬಿಜೆಪಿ ಸರ್ಕಾರ ಈ ಸಂಬಂಧ ಕೂಡಲೇ ಸಚಿವಸಂಪುಟದಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜಾತ್ಯತೀತ ಜನತಾದಳ ಸಹಿತ ಇತರ ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಸಮುದಾಯಗಳ ಮಠಾಧೀಶರು, ಸಮಾಜಗಳ ಮುಖಂಡರು, ಕನ್ನಡಪರ, ರೈತವರ, ವಿವಿಧ ಸಮುದಾಯಪರ, ನಾಡಪರ ಎಲ್ಲ ಸಂಘಟನೆಗಳು, ವಿವಿಧ ಕ್ಷೇತ್ರಗಳ ಗಣ್ಯರು ನಮ್ಮ ಸಂಘಟನೆಗೆ ಜೊತೆಯಾಗಿ ನಿಂತು ನಮ್ಮ ಹೋರಾಟಕ್ಕೆ ಬಲ ನೀಡುವಂತೆ ಈ ಮೂಲಕ ಕಳಕಳಿಯ ಮನವಿ ಮಾಡುತ್ತೇವೆ.ಎಂದು ಪ್ರದೀಪ ಕಂಕನವಾಡಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಧರ್ಬದಲ್ಲಿ ಡಾ. ವಿಕ್ರಮ್‌ ಶಿವಪ್ಪ, ಸಂಜಯ ಹೋಸಮಠ, ಗಂಗಾಧರ ಶಾಸ್ತ್ರೀ ಜೊತೆಗಿದ್ದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.