
ಕೆ.ಎಸ್.ಡಿ.ಎಲ್.ಗೆ ಸಂಬಂಧಿಸಿದಂತೆ ಗೌರವಾನ್ವಿತ ಲೋಕಾಯುಕ್ತರು ಕಳೆದ 2 ದಿನಗಳಿಂದ ನಿರಂತರವಾಗಿ ತನಿಖೆ ನಡೆಸುತ್ತಿರುವುದನ್ನು ನಮ್ಮ ಕೆ.ಎಸ್.&ಡಿ.ಎಲ್, ಎಂಪ್ಲಾಯೀಸ್ ಯೂನಿಯನ್ ಪ್ರಥಮವಾಗಿ ಹೃತ್ತೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಕೆ.ಎಸ್.ಡಿ.ಎಲ್.ನಲ್ಲಿ ನಡೆದಿರುವ ಹಗರಣಗಳ ಬಗ್ಗೆ ಮಾನ್ಯ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನ ಬಗ್ಗೆ ಬೆಳಕಿಗೆ ತಂದಿರುವುದು ಸರಿಯಷ್ಟೇ. ಆದರೆ ಇದಕ್ಕೆ ಸಂಪೂರ್ಣ ಜವಾಬ್ದಾರರಾಗಿರುವ ಈ ಕೆಳಕಂಡ ಅಧಿಕಾರಿಗಳು ಈ ಭ್ರಷ್ಟಾಚಾರ ಹಾಗೂ ಹಗರಣಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ.

ಈ ಮೇಲಿನ 6 ಜನ ಅಧಿಕಾರಿಗಳು ಸಂಪೂರ್ಣ ಅವ್ಯವಹಾರ, ಭ್ರಷ್ಟಾಚಾರ ನಡೆಸಿರುವುದರಿಂದ ಈ ಭ್ರಷ್ಟಾಚಾರಕ್ಕೆ ಕಾರಣಕರ್ತರಾಗಿದ್ದಾರೆ. ಇವರನ್ನು ಸಂಪೂರ್ಣ ಜವಾಬ್ದಾರರನ್ನಾಗಿ ಶಿಸ್ತಿಗೆ ಗುರಿಪಡಿಸಿದರೆ ಸತ್ಯ ಸಂಗತಿ ಬೆಳಕಿಗೆ ಬರುತ್ತದೆ.
ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ಪರ್ಚೆಸ್ ಮ್ಯಾನ್ಯುಯಲ್, ಸ್ಟೋರ್ ಮ್ಯಾನ್ಯುಯಲ್, ಡೆಲಿಗೇಷನ್ ಆಫ್ ಪವರ್, ಸ್ಥಾಯಿ ಆದೇಶಗಳು ಎಲ್ಲಾ ನಿಯಮಾವಳಿಗಳನ್ನು ಸರ್ಕಾರದ ಸಾರ್ವಜನಿಕ ಸಂಸ್ಥೆಯಾದ ಕೆ.ಎಸ್.&ಡಿ.ಎಲ್. ಹೊಂದಿದೆ. ಈ ಎಲ್ಲಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಮೇಲಿನ 6 ಜನ ಅಧಿಕಾರಿಗಳು ಮಾರುಕಟ್ಟೆಯಲ್ಲಿರುವ ದರಗಳನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ನೆಗೋಸಿಯೇನ್ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ, ಆ ಅಧಿಕಾರಿಗಳ ಕರ್ತವ್ಯ ವಿಫಲವಾಗಿರುವುದರಿಂದ ಈ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಈ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ಈ ಮೂಲಕ ಒತ್ತಾಯಿಸಲಾಗುತ್ತಿದೆ ಎಂದು ಜಿ.ಆರ್.ಶಿವಶಂಕರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936