
ಬೆಂಗಳೂರು : ಪರಂಪರ ಕಲ್ಚರಲ್ ಫೌಂಡೇಶನ್ ವತಿಯಿಂದ ಕಥೆ ಹೇಳುವೆ ಎಂಬ ಶೀರ್ಷಿಕೆಯಡಿ ಚಿನ್ನರಿಗೆ ಕಥೆ ಹೇಳುವ ಕಾರ್ಯಕ್ರಮವನ್ನು ಜಯನಗರ ಒಂದನೇ ಪೂರ್ವ ವಿಭಾಗದಲ್ಲಿರುವ ಶ್ರೀ ಸಂಗಮೇಶ್ವರ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಪರಂಪರಾ ಕಲ್ಚರಲ್ ಫೌಂಡೇಶನ್ ಅಧ್ಯಕ್ಷರಾದ ಜಿ.ಪಿ ರಾಮಣ್ಣ ಮಾತನಾಡಿ ನಮ್ಮ ಸಂಸ್ಥೆ ವತಿಯಿಂದ 2018ರಲ್ಲಿ ಕಥೆ ಹೇಳುವೆ ಕಾರ್ಯಕ್ರಮವು ಪ್ರಾರಂಭಿಸಲಾಗಿದ್ದು ಇಂದು 12ನೇ ಸಂಚಿಕೆಯನ್ನು ಈ ಶಾಲೆಯಲ್ಲಿ ಅನಾವರಣಗೊಂಡಿದೆ. ಮಕ್ಕಳಲ್ಲಿ ಕನ್ನಡದ ಬೀಜವನ್ನು ಬಿತ್ತಿ ಕನ್ನಡ ಉಳಿಸುವ ಕೆಲಸ ಕಥೆ ಹೇಳುವ ಕಾರ್ಯಕ್ರಮದ ಮುಖೇನ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಶಾಲೆಯಲ್ಲಿ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಆಯೋಜಿಸಿ ಮಕ್ಕಳಲ್ಲಿ ಕನ್ನಡದ ಮೌಲ್ಯ ತುಂಬುವ ಕೆಲಸ ಈ ಕಾರ್ಯಕ್ರಮದ ಮುಖೇನ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದರು. ನಂತರ ಶೀಲಾ ಅರಕಲಗೂಡು ರವರು ಮಾತನಾಡಿ ಪರಂಪರ ಕಲ್ಚರಲ್ ಫೌಂಡೇಶನ್ ಅತ್ಯದ್ಭುತ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ಮಕ್ಕಳಿಗೆ ಕಥೆ ಹೇಳುತ್ತಾ ಅವರೊಂದಿಗೆ ನಾವು ಮಕ್ಕಳಾಗುವ ಅನುಭವವು ತುಂಬಾ ವಿಶಿಷ್ಟ
ಇಂತಹ ಕಥೆ ಹೇಳುವ ಒಂದು ಅಪೂರ್ವವಾದ ಅವಕಾಶವನ್ನು ನನಗೆ ಕಲ್ಪಿಸಿ ಕೊಟ್ಟಿರುವುದು ನಿಜಕ್ಕೂ ಸಂತಸದ ವಿಷಯ ಎಂದರು. ವೇದಿಕೆಯಲ್ಲಿ ಶ್ರೀ ಸಂಗಮೇಶ್ವರ ಶಾಲೆಯ ವಿದ್ಯಾರ್ಥಿಗಳು ಕಥೆಗಳನ್ನು ಹೇಳಿದರು ಈ ವೇಳೆ ಅತ್ಯುತ್ತಮ ಕಥೆ ಹೇಳಿದ ಮಕ್ಕಳಿಗೆ ಗಣ್ಯರು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ರಾಜೇಂದ್ರ ಬಿ ಶೆಟ್ಟಿ, ಟಿ.ಎನ್. ಸಾಯಿಕುಮಾರ್, ಪಾಲನೆತ್ರ, ಶ್ರೀ ಸಂಗಮೇಶ್ವರ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
City Today News – 9341997936