ಅಹಿಂಸಾ ಚೇತನ್ ಅವರ ನ್ಯಾಯಸಮ್ಮತವಲ್ಲದ ಬಂಧನದ ಬಗ್ಗೆ ಪತ್ರಿಕಾ ಗೋಷ್ಠಿ

ಶ್ರೀ ಅಹಿಂಸಾ ಚೇತನ್ ಅವರು ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರೊಬ್ಬ ಕನ್ನಡ ಪರ ನಿಲುವು ಹೊಂದಿರುವ ಸಮಾಜವಾದಿ, ಲಿಂಗಾಯತ ಸ್ವತಂತ್ರಧರ್ಮದ ಹೋರಾಟದ ಧ್ವನಿಯಾಗಿದ್ದಾರೆ. ಅವರನ್ನು ಕ್ಷುಲಕ ನೆಪದಿಂದ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಟ್ಟುರುವುದು ನ್ಯಾಯಸಮ್ಮತವಲ್ಲದ ಕಾರಣ ಅದನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಕರ್ನಾಟಕ ಬೌದ್ಧ ಸಮಾಜ, ಬಹಳ ಉಗ್ರವಾಗಿ ಖಂಡಿಸುತ್ತವೆ.
ಶ್ರೀ ಅಹಿಂಸಾ ಚೇತನ್ ಅವರು ನಾಡಿನ ಹಲವಾರು ಅಸಮಾನತೆಯ ಪರ ಧ್ವನಿ ಎತ್ತುವ ಮೂಲಕ ಹೋರಾಟವನ್ನು ಮಾಡುವುದು ಸಮಾಜದ ಹಿತದೃಷ್ಟಿಯಿಂದಲೇ ಹೊರತು ವೈಯಕ್ತಿಕ ಹಿತದೃಷ್ಟಿಯಿಂದಲ್ಲ. ಭಾರತದ ಸಂವಿಧಾನದ ಅಡಿಯಲ್ಲಿ ತಮ್ಮ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇದೆ. ಹೀಗಿರುವಾಗ ಚೇತನ್ ಬಂಧನ ಉದ್ದೇಶಪೂರ್ವಕವಾಗಿ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅನ್ಯಾಯದಿಂದ ಅವರನ್ನು ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರನ್ನು ಈ ಕೂಡಲೆ ಬಿಡುಗಡೆ ಮಾಡಬೇಕೆಂದು ನಮ್ಮೆಲ್ಲ ಸಂಘಟನೆಗಳ ಪರವಾಗಿ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದೇವೆ. ಸಮಾಜಪರ ಕಾಳಜಿ ಹೊಂದಿರುವ ಚೇತನ್ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ನಾವು ಈ ಮೂಲಕ ತಿಳಿಸುತ್ತಿದ್ದೇವೆ.
ಈ ಹೋರಾಟಕ್ಕೆ ಬೆಂಬಲಿತ ಸಂಸ್ಥೆಗಳ ದೂರವಾಣಿ ಸಂಪರ್ಕಗಳು :
ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಜಿಲ್ಲೆ, ಅಧ್ಯಕ್ಷರು, ಕರ್ನಾಟಕ ಬೌದ್ಧ ಸಮಾಜ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು
9342510286, 9738467983, 9845530982, 9663205083, 9448119652, 9986283922, 9880447829.
ಪ್ರೊ. ವೀರಭದ್ರಯ್ಯ ಅಧ್ಯಕ್ಷರು 9448119652
City Today News – 9341997936