
ಪ್ರಪಂಚದಲ್ಲೇ ಅತ್ತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಸಿಲಿಕಾನ್ ಮತ್ತು ಐ.ಟಿ ಬಿಟಿ ಸಿಟಿಯಾಗಿದೆ. ಜೊತೆಗೆ ಭೂಮಿಯ ಬೆಲೆಯು ಸಹ ಚಿನ್ನದ ಬೆಲೆಗಿಂತ ಅಧಿಕವಾಗಿದೆ ಹಾಗೆಯೇ ಬಡವರನ್ನು ಯಾಮಾರಿಸಿ ಭೂಮಿಯನ್ನು ಕಬಳಿಸುವವರ ಸಂಖ್ಯೆಯು ಹೇರಳವಾಗಿದೆ. ಇಂತಹ ಪರಿಸ್ಥಿಯಲ್ಲಿ ದಲಿತ ರೈತರು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿ ಕಳೆದ 74 ವರ್ಷಗಳ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀತಪದ್ಧತಿಯಲ್ಲಿದ್ದ ದಲಿತ ಕುಟುಂಬಗಳನ್ನು ಸರ್ಕಾರವೇ ಗುರುತಿಸಿ ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ಮತ್ತು 40X50) ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುತ್ತಾರೆ. ಜೊತೆಗೆ ದಲಿತ ರೈತರ ಹೆಸರಿಗೆ ಕಂದಾಯ ಇಲಾಖೆಯಿಂದ ಪಹಣಿ ನೀಡಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಂದಾಯವನ್ನು ಸಹ ವಸೂಲಿ ಮಾಡಿರುತ್ತಾರೆ.
ತದನಂತರ 1981-82 ರಲ್ಲಿ ಸದರಿ ರೈತರ ಬಳಿಯಿದ್ದ ಸ್ವಲ್ಪ ಪ್ರಮಾಣದ (385 ಎಕರೆ) ಭೂಮಿಯನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ತಲ್ಲಾ ಎಕರೆ ಭೂಮಿಗೆ 30,000/- ರೂಗಳಂತೆ ದಲಿತ ರೈತರಿಗೆ ಪರಿಹಾರವನ್ನು ನೀಡಿ ಭೂಮಿಯನ್ನು ತೆಗೆದುಕೊಂಡಿರುತ್ತಾರೆ. ಸದರಿ ಭೂಮಿಯಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗು ಖಾಸಗಿ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತದೆ.
385 ಎಕರೆ ಹೊರತುಪಡಿಸಿ ಉಳಿದಿರು ಸುಮಾರು 150 ಎಕರೆ ಭೂಮಿಯಲ್ಲಿ ದಲಿತ ರೈತರು ಇಂದಿಗೂ ವ್ಯವಸಾಯದ ಕುರಿ, ಮೇಕೆ ಹಾಗು ದನಗಳ ಸಾಕಾಣಿಕೆಯಿಂದ ಹಾಲಿನ ವ್ಯಾಪಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಬೃಹತ್ ಬೆಂಗಳೂರು: ಮೇಟೋ ನಿಗಮದವರು ಸುಮಾರು 49 ಎಕರೆ ಭೂಮಿಯನ್ನು ಸ್ವಾಧಿನಪಡಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ದಲಿತ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಎರಡು ವರ್ಷಗಳು ಕಳೆದರು. ಭೂಮಿ ಕಳೆದುಕೊಂಡ ರೈತರಿಗೆ ಒಂದು ಬಿಡಿಗಾಸಿನ ಪರಿಹಾರವು ದೊರೆತಿಲ್ಲ. ಇದರಿಂದಾಗಿ 24 ದಲಿತ ಕುಟುಂಬಗಳು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಇನ್ನೂಳಿದ ಕೃಷಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಸರ್ಕಾರದ ಕೆಲವು ಸಂಸ್ಥೆಗಳ ಹೆಸರಿನಲ್ಲಿ ಸ್ವಾಧಿನಪಡಿಸಿಕೊಂಡು ತದನಂತರ ಖಾಸಗೀಯವರಿಗೆ ಮಾರಾಟ ಮಾಡುವ ಉನ್ನಾರ ನಡೆಯುತ್ತಿದೆ. ಇಂತಹ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಗ್ರಾಮದ ದಲಿತ ರೈತರು ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಹಲವು ವರ್ಷಗಳಿಂದ ನ್ಯಾಯಾಕ್ಕಾಗಿ ಹೋರಾಟಗಳನ್ನು ಮಾಡುತ್ತಿದೆ. ಈ ರೀತಿಯಲ್ಲಿ ಹೋರಾಟಗಳನ್ನು ಮಾಡುವ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ಭೂಮಿ ಮತ್ತು ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಮಾಡಿಸುವುದಾಗಿ ಹಲವು ಭಾರಿ ಭರವಸೆಗಳನ್ನು ನೀಡಿರುತ್ತಾರೆ.
ಇದೀಗ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 5 ವರ್ಷಗಳು ಕಳೆದರು ಮಾನ್ಯ ಶಾಸಕರು ನಮ್ಮ ದಲಿತ ರೈತರ ಸಮಸ್ಯೆಗಳನ್ನು ಪರಿಹಾರಿಸಲು ಯಾವುದೇ ಕ್ರಮವಹಿಸದಿರುವುದು ದಲಿತ ವಿರೋಧಿ ನೀತಿಯಾಗಿದೆ. ದಲಿತ ರೈತರ ಸ್ವಾಧಿನಾನುಭವದಲ್ಲಿರುವ ಭೂಮಿಗಳನ್ನು ಯಾವುದೇ ಪರಿಹಾರವಿಲ್ಲದೆ ಕಬಳಿಸುವ ಜೊತೆಗೆ ದಲಿತರನ್ನು ಮತ್ತಷ್ಟು ಶೋಷಣೆ ಮಾಡುವ ಸರ್ಕಾರದ ಹಾಗು ಶಾಸಕರ ನಡೆಯನ್ನು ಖಂಡಿಸಿ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಕಳೆದ 365 ದಿನಗಳಿಂದ ನಿರಂತರ ಧರಣಿ ಸತ್ಯಗ್ರಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಧರಣಿ ನಿರತ ಸ್ಥಳಕ್ಕೆ ಮಾನ್ಯ ಶಾಸಕರು ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಕೋರಿ ಪತ್ರದ ಮೂಲಕ ಮನವಿ ಸಲ್ಲಿಸಿದರು ಸಹ ಮಾನ್ಯ ಶಾಸಕರು ದಲಿತ ರೈತರ ಕಡೆ ಮುಖ ಮಾಡಲಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ದಲಿತ, ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚಿಸಿ ಮತ್ತಷ್ಟು ಹೋರಾಟಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಇತರೆ ಪ್ರದೇಶಗಳ ಜನಸಮಾನ್ಯರಿಗೆ ವಿಚಾರವನ್ನು ಸಲುವಾಗಿ ಬೆಂಗಳೂರಿನ ಪ್ರಸ್‌ಕ್ಲಬ್ ನಲ್ಲಿ ಪತ್ರಿಕ ಗೋಷ್ಟಿಯನ್ನು ಕರೆಯಲಾಗಿ ಮುನೇಂದ್ರ .ಪಿ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936