
ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು
ನ್ಯಾಯಮೂರ್ತಿ ಶ್ರೀಯುತ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಎಸ್.ಸಿ. ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಳ್ಳದ ಐತಿಹಾಸಿಕ ನಿರ್ಧಾರವನ್ನು ನಿನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮೊದಲನೆಯದಾಗಿ ನನ್ನ ವೈಯಕ್ತಿಕವಾಗಿ ಹಾಗೂ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ. ಅಲೆಮಾರಿ ಬುಟಕಟ್ಟು ಮಹಾಸಭಾದ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಅಭಿನಂದನೆಗಳನನು ಸಲ್ಲಿಸುತ್ತೇನೆ.
ಆದರೆ ಇದುವರೆಗೂ ಸಮಾಜದ ಮುಖ್ಯ ವಾಹಿನಿಯಿಂದ ವಂಚಿತವಾಗಿ ಗುಡಿಸಲು, ಗುಡಾರಗಳಲ್ಲಿ ವಾಸಿಸುತ್ತಾ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ ಇದುವರೆಗೂ ಶಾಲೆಯ ಮುಖವನ್ನೇ ನೋಡದ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆಗಳಿಲ್ಲದೆ, ವಿಳಾಸವಿಲ್ಲದೆ, ಶಿಕ್ಷಣವಿಲ್ಲದೆ ಊರಿಂದ ಊರಿಗೆ ಅಲೆಯುವ ಅಲೆಮಾರಿ ಮತ್ತಿತರ ಸಮುದಾಯಗಳೆಂದು 4ನೇ ವರ್ಗದಲ್ಲಿ ಗುರುತಿಸಿ ಕೇವಲ 1% ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದೆ.
ಕಾರಣ ಪ.ಜಾತಿಗೆ ಇದ್ದ 15% ಮೀಸಲಾತಿಯನ್ನು ಇದುವರೆಗೂ ಯಾವ ಸಮುದಾಯಗಳು ಹೆಚ್ಚಿನ ಮಟ್ಟದಲ್ಲಿ ಮೀಸಲಾತಿಯನ್ನು ಅನುಭವಿಸಿದ್ದವೋ ಅದೇ ಸಮುದಾಯಗಳಿಗೆ ಈ ಸದಾಶಿವ ಆಯೋಗದ ವರದಿಯಲ್ಲಿಯೂ ಸಹ ಅವರಿಗೇನೆ ಪ್ರಧಾನ ಆದ್ಯತೆ ನೀಡಿ ಹಂಚಿಕೆ ಮಾಡಿದೆ.
ಹಾಗೂ ಇತ್ತೀಚಿನ ದಿನಗಳಲ್ಲಿ ಶೇಕಡ 15% ಇದ್ದ ಮೀಸಲಾತಿಯನ್ನು 17% ಗೆ ಹೆಚ್ಚಿಸಿದ್ದು, ಈ ಹೆಚ್ಚಳದ ಮೀಸಅನಲ್ಲಿ ಸ್ಯುಷ್ಯ ಸಮುದಾಯಗಳಿಗೆ 1 1/2% ಹೊಲಯ ಮತ್ತು ಹೊಲಯ ಸಂಬಂಧಿತ ಜಾತಿಗೆ 1/2 ಹೆಚ್ಚಿಸಿ 2% ಮೀಸಲನ್ನು ಈ ಎರಡು ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ. ಅಲೆಮಾರಿ ಮತ್ತಿತರ ಸಮುದಾಯಗಳನ್ನು ಮರೆತಿದ್ದಾರೆ.
ದಿನಾಂಕ 10/1/2023ರಂದು ಎಲ್ಲಾ ಜಿಲ್ಲಾ ಅಧಿಕಾರಿಗಳ ದ್ವಾರ ಮಾನ್ಯ ಸರ್ಕಾರಕ್ಕೆ ನಮ್ಮ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು (ರಿ) ವತಿಯಿಂದ ಪತ್ರ ಚಳುವಳಿ ಮಾಡಿದ್ದರೂ ಕೂಡ ಸರ್ಕಾರಕ್ಕೆ ನಮ್ಮ ಅಲೆಮಾರಿ ದ್ವನಿ ಕೇಳಿಲ್ಲಾ.
ಕೇವಲ ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ವರ್ಗೀಕರಣ ಮಾಡದೆ. ಇದುವರೆಗೂ ಯಾವ-ಯಾವ ವರ್ಗಗಳು ಈ 15% ಮೀಸಲಾತಿಯನ್ನು ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಡಲು ನೀಡಿ, ಇದುವರೆಗೂ ಶಾಲೆಯ ಮುಖವನ್ನೇ ನೋಡದ ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಮೀಸಲನ ವಾಸನೆಯನ್ನು ತಿಳಿದಿರದ ಯಾವುದೇ ಸರ್ಕಾರಿ ನೌಕರಿ, ರಾಜಕೀಯ ಸ್ಥಾನ-ಮಾನ ಪಡೆಯದೇ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಅಲೆಮಾರಿ ಮತ್ತಿತರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿರುವ 4 ವರ್ಗದ ಸಮುದಾಯಗಳಿಗೆ ಈ ಒಳ ಮೀಸಲು ನೀಡಿರುವ 1% ಮೀಸಲು ಮೂಗಿಗೆ ತುಪ್ಪ ಸವರಿದಂತಿದೆ ಹಾಗೂ ಈ ಸಮುದಾಯಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಈ ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಿಕ ನ್ಯಾಯ ಏನಾದರೂ ದೊರೆಯಬೇಕೆಂದರೆ ಕನಿಷ್ಠ 2% ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಲೇಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷರು ವಿ. ಸಣ್ಣ ಅಜ್ಜಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
City Today News – 9341997936