ದಿನಕ್ಕೆ ಸರಾಸರಿ 6 – 8 ಗಂಟೆಗಳ ಕಾಲ
ಸ್ಮಾರ್ಟ್‌ಫೋನ್ ಗೆ ಜೋತು ಬೀಳುತ್ತಿರುವ ಯುವ ಸಮುದಾಯ
ದೇಶದ ಮೊದಲ ಗ್ರಾಮೀಣ ಭಾಗದಲ್ಲಿ ಡಿಜಿಟಲ್ ವ್ಯಸನ ವರ್ಜನ ಕೇಂದ್ರ
digital DETOX Centre

ಒತ್ತಡ ಕಡಿಮೆ ಮಾಡಲು ಡಿಜಿಟಲ್ ತಂತ್ರಜ್ಞಾನ – ಸಾಧನಗಳಿಂದ ಯುವಕರನ್ನು ದೂರವಿಡಲು ಡಿಜಿಟಲ್ ವ್ಯಸನ ವಿಮುಕ್ತಿ (ಡಿಟಾಕ್ಸ್) ಕೇಂದ್ರ ಯುವಕರು ದಿನಕ್ಕೆ ಸರಾಸರಿ 6 – 8 ಗಂಟೆಗಳಷ್ಟು ಅವಧಿಯನ್ನು ಸ್ಮಾರ್ಟ್ ಫೋನ್ ಗಳ ವ್ಯರ್ಥ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದ ಯುವಕರಿಂದ ಮತ್ತು ವೃದ್ಧರವರೆಗೆ ಹಲವಾರು ಮಂದಿ ನಿದ್ರಾ ಹೀನತೆಯ ಸಮಸ್ಯೆಯನ್ನು ಎದುರಿಸಲಾರಂಭಿಸಿದ್ದಾರೆ. ಸ್ಮಾರ್ಟ್ ಫೋನ್ ಗಳನ್ನು ಬಳಸುವ ವ್ಯಸನ ತಮ್ಮ ವಿದ್ರಾ, ಚಕ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯದ ಅವರು ಈ ನಿದ್ರೆಯ ಕೊರತೆ ಸಮಸ್ಯೆಯೊಂದಿಗೆ ವೈದ್ಯರನ್ನು ಕಾಣುತ್ತಿದ್ದಾರೆ. ನಿರಂತರ ತಲೆನೋವು ಮತ್ತು ಆಯಾಸ ಯುವಜನರಲ್ಲಿ ಈಗ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ಖ್ಯಾತ ವೈದ್ಯರಾದ ಎಂದು ಮಾನಸ ಆಸ್ಪತ್ರೆಯ ಡಾ|| ಹೆಚ್.ಎಸ್. ಶಶಿಧರ್ ಕುಮಾರ್ ಗೌರಿಬಿದನೂರು ಹೇಳಿದ್ದಾರೆ.
ಡಾ|| ಕೆ.ಎಸ್. ರತ್ನ, ಪ್ರಕಾರ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 6 ರಿಂದ 8 ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಗಳನ್ನು ಯಾವುದಾದರೂ ರೂಪದಲ್ಲಿ ಬಳಸುತ್ತಿದ್ದಾರೆ. ಇದು ವೈರಲ್ / ಅಶ್ಲೀಲ – ಬೆತ್ತಲೆ ವೀಡಿಯೊಗಳನ್ನು ವೀಕ್ಷಿಸುವುದು, ಡೇಟಿಂಗ್ ಅಪ್ಲಿಕೇಷನ್ ಗಳನ್ನು ಬ್ರೌಸ್ ಮಾಡುವುದು, ಸಂಗೀತ ಕೇಳುವುದು, ಸಂದೇಶ ಕಳುಹಿಸುವುದು, ಚಾಟ್ ಮಾಡುವುದು ಮತ್ತು ಮೇಲ್ ಪರಿಶೀಲಿಸುವುದು, ಆನ್‌ಲೈನ್ ಆಟ ಆಡುವುದು ಹೀಗೆ ನಾನಾ ಚಟುವಟಿಕೆಗಳನ್ನು ಒಳಗೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರಿನಲ್ಲಿ ಭಾರತದ ಪ್ರಪ್ರಥಮ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಮಾನಸ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ. ಡಾ|| ಸುಮಂತ್, ವೈಜೆ ಪ್ರಕಾರ ಈ ನಿದ್ರಾಹೀನ ವ್ಯಕ್ತಿಗಳಿಗೆ, ಸಮಸ್ಯೆಯಿಂದ ಹೊರ ಬಂದು ಹೆಚ್ಚು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಲು ಸಹಾಯ ಮಾಡಲು ನಿರ್ಧರಿಸಿದ್ದಾರೆ. “ಪ್ರತಿದಿನ, ನಾನು ಹಲವಾರು ಯುವಕರು ನಿದ್ರೆಯ ಮಾದರಿಯಲ್ಲಿ ಅಡಚಣೆ, ತಲೆನೋವು, ಕಣ್ಣಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳೊಂದಿಗೆ ನಮ್ಮ ಬಳಿಗೆ
ಚಿಕಿತ್ಸೆಗೆ ಆಗಮಿಸುತ್ತಾರೆ. ಇದಕ್ಕೆಲ್ಲ ಒಂದೇ ಕಾರಣವೆಂದರೆ ಯಾವುದೇ ಬೆಳಕು ಇಲ್ಲದ ಕೋಣೆಯಲ್ಲಿ ರಾತ್ರಿಯಲ್ಲಿ ಸ್ಮಾರ್ಟ್‌ಫೋನ್ ಗಳ ನಿರಂತರ ಬಳಕೆ’ ಎಂದು ಅವರು ಕಂಡುಕೊಂಡಿದ್ದಾರೆ.
ಸ್ಮಾರ್ಟ್ ಫೋನ್ ಗಳಲ್ಲಿ ನಿರಂತರವಾಗಿ ಲಭ್ಯವಿರುವ ವಿವಿಧ ವಿಷಯಗಳೊಂದಿಗೆ ಅದನ್ನು ಅತಿಯಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಯುವಕರು ಮತ್ತು ಇತರರನ್ನು ಈ ಡಿಜಿಟಲ್ ವ್ಯಸನದಿಂದ ದೂರ ಮಾಡಲು ಡಾ|| ಶಶಿಧರ್ ಕುಮಾರ್ ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಾಧನಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಮಾರ್ಟ್‌ಫೋನ್ ಗಳು, ಟಿವಿ ಮಾಧ್ಯಮ, ಇಂಟರ್ನೆಟ್, ಡಿಜಿಟಲ್ ಗೇಮ್ಸ್ ಮತ್ತು ಜೂಜು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಗೌರಿಬಿದನೂರಿನಲ್ಲಿರುವ ಈ ಕೇಂದ್ರದಲ್ಲಿ ಡಿಜಿಟಲ್ ದಾಸರಾಗಿರುವವರಿಗೆ ಆರೋಗ್ಯಕರ ಜೀವನಶೈಲಿ ಹಾಗು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಲಹೆ ನೀಡಲಾಗುತ್ತದೆ. ಈ ಕೇಂದ್ರವು ಇಂತಹ ವ್ಯಕ್ತಿಗಳಿಗೆ ಮುಖಾಮುಖಿ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ, ಅವರನ್ನು ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್, ಇತ್ಯಾದಿಗಳಿಂದ ವಿರಾಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ, ತಂತ್ರಜ್ಞಾನದ ವ್ಯಸನವು ವ್ಯಕ್ತಿಗಳಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದ ಮತ್ತು ಈ ವ್ಯಸನಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆಗಿನ ಸಂಶೋಧನೆಯನ್ನು ಉಲ್ಲೇಖಿಸುವ ಡಾ|| ಶಶಿಧರ್, ಡಿಜಿಟಲ್ ವ್ಯಸನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
– MANASA HOSPITAL B.H ROAD, Gauribidanur-561208, Chikkaballapur Dist., Mob: 9945619067
City Today News – 9341997936