
ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.
ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.
City Today News – 9341997936