
ಬ್ರಾಹ್ಮಣರು ಎಂದರೆ ಬಿಜೆಪಿಗೆ ಮಾತ್ರ ಮತ ಹಾಕುವ ಸಮುದಾಯ ಎಂಬ ಅಭಿಪ್ರಾಯ ದೇಶದಲ್ಲಿ ಸರ್ವವ್ಯಾಪಿಯಾಗಿದ್ದು, ಇದೇ ಇಂದು ಈ ಸಮುದಾಯಕ್ಕೆ ಮುಳುವಾಗಿ ಪರಿಣಮಿಸಿದೆ. ಬ್ರಾಹ್ಮಣರ ಮತಗಳು ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ ಎಂಬ ದೃಢ ವಿಶ್ವಾಸದಲ್ಲಿ ಬಿಜೆಪಿ ಇದ್ದರೆ, ಏನೇ ಮಾಡಿದರೂ ಬ್ರಾಹ್ಮಣರು ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ ಎಂಬ ಅಚಲ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ಇದರಿಂದಾಗಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀವ್ರ ಹಿಂದುಳಿಯಲು ಕಾರಣವಾಗಿದೆ. ಬ್ರಾಹ್ಮಣ ಸಮುದಾಯ ಕಳೆದ ಹಲವು ದಶಕಗಳಿಂದ ಇಂತಹ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು, ಈಗ ಇಂತಹ ಸ್ಥಿತಿಯಿಂದ ಹೊರ ಬಂದು, ಸಮುದಾಯಕ್ಕೆ ಸಹಕಾರ ನೀಡುವ ರಾಜಕೀಯ ಪಕ್ಷವನ್ನು ಬೆಂಬಲಿಸುವ ಚಿಂತನೆಯಲ್ಲಿದೆ. ಈ ಸಂಬಂಧ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿ, ಚರ್ಚಿಸಲಾಗಿದ್ದು, ಈ ಬಾರಿಯ ಚುನಾವಣೆಗಳಲ್ಲಿ ಇದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಸಮುದಾಯದ ಎಲ್ಲ ಮುಖಂಡರು, ಸ್ವಾಮೀಜಿಗಳು ನಿರ್ಧರಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಈಕೆಳಗಿನಂತಿದೆ.
೧.ಪ್ರಸ್ತುತ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯ ೧೨೪ ಅಭ್ಯರ್ಥಿಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರು ಜನರಿಗೆ ಟಿಕೆಟ್ ನೀಡಲಾಗಿದೆ. ಬಾಕಿ ಇರುವ ೧೦೦ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಇನ್ನೂ ಐದು ಜನರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಂದರೆ ಬ್ರಾಹ್ಮಣರ ಮತವೇ ಬರಲ್ಲ ಎಂದು ಭಾವಿಸಿರುವ ಕಾಂಗ್ರೆಸ್ ಅಂದಾಜು ೧೧ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ
೨. ಬ್ರಾಹ್ಮಣರ ಮತ ಪಡೆಯುವ ಬಿಜೆಪಿ ಕನಿಷ್ಠ ೨೫ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ. ಕಳೆದ ೨೦೧೮ರ ಚುನಾವಣೆಯಲ್ಲಿ ನೋಟಾಗೆ ಮತ ಚಲಾಯಿಸಲು ಬ್ರಾಹ್ಮಣ ಮಹಾ ಸಂಘ ಕರೆ ನೀಡಿತ್ತು. ಆಗ ಶೇ.೧ರಷ್ಟು ಜನ ನೋಟಾಗೆ ಮತ ಚಲಾಯಿಸಿದ್ದಾರೆ. ಇದರಿಂದ ಸುಮಾರು ೩.೫ಲಕ್ಷ ಮತದಾರರು ನೋಟಾಗೆ ಮತ ಹಾಕಿದ್ದಾರೆ. ಇದರ ಪರಿಣಾಮ ೧೩ ವಿಧಾನಸಭಾ ಕ್ಷೇತ್ರಗಳಲ್ಲಿ ಬೀರಿ ೧೩ ಅಭ್ಯರ್ಥಿಗಳು ಸೋಲಲು ಕಾರಣವಾಗಿದೆ.
೩. ಹೀಗೆ ಸೋತವರ ಪಟ್ಟಿಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಇದ್ದು, ಎರಡು ಸ್ಕ್ಯಾನಗಳಲ್ಲಿ ಕಾಂಗ್ರೆಸ್, ಎರಡು ಸ್ಥಾನಗಳಲ್ಲಿ ಜೆಡಿಎಸ್ ಮತ್ತು ೯ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಗೆದ್ದಿದ್ದು ಕೇವಲ ೧,೬೯೬ ಮತಗಳ ಅಂತರದಿಂದ, ಇಲ್ಲಿ ೨,೪೫೦ ಮತಗಳು ನೋಟಾಗೆ ಚಲಾವಣೆಯಾಗಿವೆ, ಅಂದರೆ ಈ ಎಲ್ಲ ಮತಗಳೂ ಬಿಜೆಪಿಗೆ ಸಲ್ಲಿಕೆಯಾಗಿದ್ದರೆ ಶ್ರೀರಾಮುಲು ಗೆದ್ದು ಸಿದ್ದರಾಮಯ್ಯ ಸೋಲುತ್ತಿದ್ದರು.
೪. ಅದೇ ರೀತಿಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವನಗೌಡ ತುರವೀಹಾಳ್ ಅವರು ಕೇವಲ ೨೧೩ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಈಪಟ್ಟಿ, ಮುಂದುವರಿದು ಶಿವರಾಮ ಹೆಬ್ಬಾರ್, ಎಚ್ .ಕೆ. ಪಾಟೀಲ್, ಗೆದ್ದಿದ್ದು, ಅನಿಲ್ ಮೆಣಸಿನ ಕಾಯಿ ಕೇವಲ ೧,೮೬೮ ಮಗಳಿಂದ ಸೋತಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ, ಚಿಕ್ಕನಗೌಡ ಅವರು ೩೩೦ ಮತಗಳಿಂದ ಸೋತಿರುವುದು ಹೀಗೆ ನೋಟಾ ಮತಗಳಿಂದ ೯ ಮಂದಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
೫. ಶೇ.೧ ರಷ್ಟು ಮತ ನೋಟಾಗೆ ಬಿದ್ದರೆ, ಇನ್ನೂ ಶೇ.೨ರಷ್ಟು ಮಂದಿ ಬ್ರಾಹ್ಮಣ ಸಮುದಾಯದವರು ನೋಟಾಗೆ ಮತ ಹಾಕುವುದಕ್ಕೆ ಮತಗಟ್ಟೆಗೆ ಹೋಗುವುದೇಕೆ ಎಂದು ಮನೆಯಲ್ಲಿಯೇ ಉಳಿದರು. ಇವರೂ ಮತ ಹಾಕಿದರೆ ಇನ್ನೂ ೨೫ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗುತ್ತಿತ್ತು.
೬ ೨೦೧೮ರಲ್ಲಿ ಚಲಾವಣೆಯಾದ ಒಟ್ಟು ಶೇಖಡಾವಾರು ಮತಗಳಲ್ಲಿ ಶೇ.೬೮ ರಷ್ಟು ಕಾಂಗ್ರೆಸ್ ಮತ್ತು ಶೇ.೩೩ ರಷ್ಟು ಮತ ಬಿಜೆಪಿ ಪಡೆದಿವೆ. ಈ ಶೇ.೩೬ರಲ್ಲಿಯೇ ಬಿಜೆಪಿ ೧೦೪ ಸ್ಥಾನ ಪಡೆದರೆ, ಕಾಂಗ್ರೆಸ್ ೭೮ ಸ್ಥಾನ ಪಡೆದಿದೆ. ಆದರೆ ಬ್ರಾಹ್ಮಣರ ಈ ಶೇ.೨ರಷ್ಟು ಮತ ಚಲಾವಣೆಯಾಗಿದ್ದರೆ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಬಹುದಾಗಿತ್ತು. ಬ್ರಾಹ್ಮಣರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಬಿಜೆಪಿ ಇದನ್ನು ಕಳೆದುಕೊಂಡಿದೆ ಎಂಬುದು ಸ್ಪಷ್ಟ
೭. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಕ್ಕೆ ಕೊಟ್ಟ ಆಶಾಸನೆಯಂತೆ ೨೦೧೮ರಲ್ಲಿ ಬ್ರಾಹ್ಮಣರ ಅಭಿವೃದ್ಧಿ ಮಂಡಲಿ ಮಾಡಿದವರು ಅಂದಿನ ಜೆಡಿಎಸ್ ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ ಅವರು ಅಂದು ಮಂಡಳಿಗೆ ಕೊಟ್ಟ ೨೫ ಕೋಟಿ ಹೊರತುಪಡಿಸಿ, ಈ ವರೆಗೆ ಯಾವುದೇ ಸರ್ಕಾರ ಒಂದು ರುಪಾಯಿ ನೀಡಿಲ್ಲ ಮಂಡಳಿ ರಚನೆಯಾದ ನಂತರ ಬಿಜೆಪಿ ಸರ್ಕಾರ ಮೂರು ಆಯ ವ್ಯಯ ಮಂಡಿಸಿದೆ. ಆದರೆ ಒಂದು ಬಜೆಟ್ ನಲ್ಲಿಯೂ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಗೆ ಹಣ ನೀಡಿಲ್ಲ.
೮. ರಾಜ್ಯದಲ್ಲಿ ಪುಸ್ತುತ ಸರಕಾರವು ಸಮಾನ ನ್ಯಾಯ ಕೊಡಿಸುವ ಭೂಮಿಕೆ ನಿರ್ವಹಿಸುತ್ತಿಲ್ಲ. ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸಬೇಕು ಎಂಬುದು ಬ್ರಾಹ್ಮಣ ಸಮುದಾಯದ ಬೇಡಿಕೆ. ಯಾವ ಪಕ್ಷ ಸಮಾನ ನ್ಯಾಯ ನೀಡಲಿದೆಯೋ ಆ ಪಕ್ಷದ ಪರ ಇರಲು ಬ್ರಾಹ್ಮಣ ಸಮುದಾಯ ಚಿಂತನೆ ಮಾಡುತ್ತಿದೆ.
೯. ರಾಜ್ಯದಲ್ಲಿ ಶೇ.೯ ರಷ್ಟು ಬ್ರಾಹ್ಮಣ ಸಮುದಾಯದ ಮತಗಳಿವೆ. ಅಂದರೆ ಸುಮಾರು ೪೫ ಲಕ್ಷ ಬ್ರಾಹ್ಮಣ ಮತದಾರರು ರಾಜ್ಯದಲ್ಲಿದ್ದಾರೆ. ಶೇ.೫ ಮತ್ತು ಶೇ.೭ರಷ್ಟಿರುವ ಸಮುದಾಯಗಳಿಗೆ ಮೀಸಲಾತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಮನೆಗೇ ನೀಡುತ್ತಿರುವ ರಾಜಕೀಯ ಪಕ್ಷಗಳು ಶೇ.೯ರಷ್ಟು ಮತ ಹೊಂದಿರುವ ಬ್ರಾಹ್ಮಣರ ಕಡಗಣನೆ ಯಾಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ.
೧೦. ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ೪೫ ಸಾವಿರಕ್ಕೂ ಹೆಚ್ಚು, ಗುಲ್ಬರ್ಗಾ ಉತ್ತರ ಕ್ಷೇತ್ರದಲ್ಲಿ ೨೦ ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಜೊತೆಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಧಾರವಾಡದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಮತದಾರರಿದ್ದಾರೆ. ಅಲ್ಲದೆ ರಾಜ್ಯದ ಒಟ್ಟು ೪೭ ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಇಂತಹ ಸಮುದಾಯವನ್ನು ಎಲ್ಲ ಪಕ್ಷಗಳೂ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದು, ಈ ನಿರ್ಲಕ್ಷ್ಯ ಹೀಗೇ ಮುಂದುವರಿದಲ್ಲಿ ಇದರ ವಿರುದ್ಧ ಮತದಾನ ಅಸ್ತ್ರವನ್ನು ಪುಯೋಗಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಯಾವದೇ ಒಂದು ಪಕ್ಷಕ್ಕೆ ಮತ ಚಲಾಯಿಸುವುದನ್ನು ನಿಲ್ಲಿಸಿ, ಸಮುದಾಯಕ್ಕೆ ಯಾರು ಸಹಕಾರ ನೀಡುವರೋ ಅವರನ್ನು ಬೆಂಬಲಿಸಲು ಸಮುದಾಯ ನಿರ್ಧರಿಸಿದೆ ಎಂದು ತಿಳಿಸಲು ಇಚ್ಛಿಸುತ್ತೇವೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಗೋವಿಂದ ಕುಲಕರ್ಣಿ ರಾಷ್ಟ್ರ ಅಧ್ಯಕ್ಷರು ಜಿ ಆ ಪುದೀಪ್ ರಾಜ್ಯ ಅಧ್ಯಕ್ಷರು ಡಾ. ಸುಬ್ರಹ್ಮಣ್ಯ ಶರ್ಮ ಎಂ. ಕೆ. ನಂಜುಂಡಸ್ವಾಮಿ ರಾಘವೇಂದ್ರ ಮಯ್ಯ ಉಪಸ್ತಿತರಿದ್ದರು.
City Today News – 9341997936