ಸರಕಾರದ ದಿಟ್ಟ ನಿರ್ದಾರವನ್ನು ಭಾರತೀಯ ಭೋವಿ ಸಮಾಜ ಸೇವಾ ಸಂಘ ತುಂಬು ಹೃದಯದಿಂದ ಅಭಿನಂದಿಸುತ್ತದೆ – ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ ವೆಂಕಟೇಶ್ ಮೌರ್ಯ

ಭೋವಿ ಸಮಾಜವನ್ನು SC ಪಟ್ಟಿಯಿಂದ ತೆಗಿಯುವ ಪ್ರಸ್ತಾವನೆ ಅಥವಾ ನಿರ್ದಾರ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಇಲ್ಲ ನಾವು ಭೋವಿ ಸಮಾಜವನ್ನು SC ಪಟ್ಟಿ ಇಂದ ತೆಗಿಯುವುದಿಲ್ಲ ಎಂದು
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 16 ಫೆಬ್ರವರಿ 2003 ರಂದು ಭಾರತ ಸರಕಾರದ ಪರಿಶಿಷ್ಟ ಜಾತಿ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಸರಕಾರದ ಈ ದಿಟ್ಟ ನಿರ್ದಾರವನ್ನು ಭಾರತೀಯ ಭೋವಿ ಸಮಾಜ ಸೇವಾ ಸಂಘ ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದು
ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ ವೆಂಕಟೇಶ್ ಮೌರ್ಯ ತಿಳಿಸಿದ್ದಾರೆ.
ಇದರಿಂದ 1962ಇಂದ ಇಂದಿನ ತನಕ ಇದ್ದಂಥಹ ಗೊಂದಲ ಬೇರೆ ಸಮಾಜದವರು ಆಗಾಗ ಭೋವಿ ಸಮಾಜವನ್ನು sc ಪಟ್ಟಿ ಇಂದ ತೆಗೆಯುವಂತೆ ಒತ್ತಾಯಿಸುತ್ತಿದ್ದರು
ಅವರ ಅಹವಾಲುಗಳನ್ನು ಆಲಿಸಿದ ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಯು ಅವರು ಭೋವಿ ಸಾಮಾಜದ ಇತಿಹಾಸ ಮತ್ತು ಹಿನ್ನಲೆಯನ್ನು ಪರಿಶೀಲಿಸಿ ಭಾರತ ಸರ್ಕಾರಕ್ಕೆ ಕಳಿಸಿರುವ ಪಾತ್ರದಲ್ಲಿ ಸ್ಪಷ್ಟವಾಗಿ ನಮೂಡಿಸಿದ್ದಾರೆ 1917ನೇ ಇಸವಿಯಲ್ಲಿ ಸರ್ ವೆಸ್ಲಿ ಮಿಲ್ಲರ್ ಆಯೋಗದ ವರದಿಯಂತೆ ಅವತ್ತಿನ ಮೈಸೂರ್ ಮಹಾರಾಜಾರಾದ ನಾಲ್ವಡಿ ಕೃಷ್ಣರಾಜ ಒಡೆಯರು ಭೋವಿ ಸಮಾಜವನ್ನು ಒಳಗೊದಂತೆ ಸುಮಾರು 6 ಜಾತಿಗಳನು deppressed classe ಜಾತಿಗಲೆಂದು ಗುರುತಿಸಿ ಅವತ್ತಿನ ಮೈಸೂರ್ ಸಂಸ್ಥಾನದಲ್ಲಿ 1921ರಲ್ಲಿ ಭೋವಿ ಸಮಾಜಕ್ಕೆ ಮೀಸಲಾತಿ ಜಾರಿ ಮಾಡಿರುತ್ತಾರೆ, ಅದು ಮೈಸೂರ್ ಸಂಸ್ಥಾನ ಭಾರತ ಸರಕಾರದಲ್ಲಿ ವಿಲೀನಾ ಆಗುವ ತನಕ ಮೀಸಲಾತಿ ಮುಂದುವರೆದ್ದಿರುತ್ತದೆ.
1950 ರಿಂದ ಇಂದಿನ ವರೆಗೂ ಭೋವಿ ಸಮಾಜ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮುಂದುವರೆದಿರುತ್ತದೆ
ಹಾಗಾಗಿ ಈಗ ಯಾವ ಕಾರಣಕ್ಕೂ
ಪರಿಶಿಷ್ಟ ಜಾತಿ ಪಟ್ಟಿದ ಭೋವಿ ಸಮಾಜವನ್ನು
ತೆಗಯುವ ಹಾಗೆ ಇಲ್ಲ
ಎಂದು ತಿಳಿಸಿದರು.

ಭೋವಿ ಸಮಾಜದ ಕುಲ ಗುರುಗಲ್ಲಿ ಒಬ್ಬರದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ನೀತೃತ್ವದಲ್ಲಿ ನ್ಯಾಯ ಮುರ್ತಿ ಸಾದಾಶಿವ ವರದಿ ಜಾರಿ ಆಗಬಾರದೆಂದು ಹೋರಟ ಮಾಡಿದ್ದರು.
ನಮ್ಮ ಭೋಸ್ ಸಂಘಟನೆಯು ಕೂಡ
ಈ ವರದಿಯ ವಿರುದ್ಧ ಹೂರಾಟ ಮಾಡುತ್ತಾ ಬಂದಿದ್ದೆವು, ಈಗ ರಾಜ್ಯ ಸರಕಾರ ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಿಸಿ ಎಡಗೈ ಸಮುದಾಯಕ್ಕೆ 6%, ಬಲಗೈ ಸಮುದಾಯಕ್ಕೆ 5.5%, ಭೋವಿ, ಲಂಬಾಣಿ, ಕೊರಚ ಹಾಗೂ ಕೋರಮಾ ಈ 4 ಜಾತಿಗಳಿಗೆ 4.5ರಷ್ಟು ಹಾಗೂ ಅಲೆಮಾರಿ ಸಮಾಜಕ್ಕೆ 1% ರಷ್ಟು ಮೀಸಲಾತಿ ಜಾರಿಗೆ ಮಾಡಿರುತ್ತಾರೆ.
ಸದಾಶಿವ ಆಯೋಗದ ವರದಿಯ ಪ್ರಕಾರ ನಮ್ ಭೋವಿ ಸಮಾಜಕ್ಕೆ ಹಾಗೂ ಇತರೆ ಜಾತಿಗಳಿಗೆ 3% ಮೀಸಲಾತಿ ಕೊಡಬೇಕು ಎಂದು ಶಿಫಾರಸ್ಸು ಮಾಡಿದ್ದರು ಆದರೆ ಮುಖ್ಯ ಮಂತ್ರಿ ಬೊಮ್ಮಾಯಿ ನೀತೃತ್ವ ಸರಕಾರ ನಮ್ಮ ಸಮುದಾಯಗಳಿಗೆ 4.5%ರಷ್ಟು ಮೀಸಲಾತಿ ಮಾಡಿರುವುದಕ್ಕೆ ನಮ್ಮ ಕುಲಗುರುಗಳಲ್ಲಿ ಒಬ್ಬರಾದ ಚಿತ್ರದುರ್ಗದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜೀರವರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಸ್ವಗತಕೊರಿದ್ದಾರೆ .
ರಾಜ್ಯ ಸರಕಾರಕ್ಕೆ ನಾವು ಕೂಡ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಬಿ .ಎಂ.ಜಗನಾಥ್, ರಾಜ್ಯ ಖಜಾನ್ಸಿ ಮಂಜುನಾಥ್, ಚಂದ್ರು ಶೇಖರ್, ಹನುಮಂತು ಹಾಗೂ ಸಂತರಾಮ್ ಅವ್ರು ಉಪಸ್ಥಿತಾರಿದ್ದರು.

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.