ಹಾವೇರಿ ಬಿಜೆಪಿಯಲ್ಲಿ ಜೋರಾದ ಟಿಕೆಟ್ ಫೈಟ್..!
‘ಅಭ್ಯರ್ಥಿ ಬದಲಿ ಬಿಜೆಪಿ ಗೆಲ್ಲಿಸಿ’ ಅಭಿಯಾನ..
ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ಹಾವೇರಿಯಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ಅಭ್ಯರ್ಥಿ ಬದಲಾವಣೆ ಆಗಬೇಕು, ಹಾಲಿ ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ನೀಡಬಾರದು, ಶಾಸಕರಿಗೆ ಹೀಗಾಗಿಲೇ ಲೋಕಾಯುಕ್ತ ಕೋರ್ಟ್ 2ವರ್ಷ ಶಿಕ್ಷೆ ನೀಡಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಿಗೆ ನೀಡುವುದು ಸೂಕ್ತ.
ಕೆಲವು ದಿನಗಳ ಹಿಂದೆ ನವೀನ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು,ಈ ಕೇಸ್ ಸಂಬಂಧ ಹಲವರ ಮೇಲೆ ಸುಳ್ಳು ಕೇಸ್ ದಾಖಲಾಗಿದೆ,ಟಿಕೆಟ್ ಆಕಾಂಕ್ಷಿಗಳ ಮೇಲೆ ಸುಳ್ಳು ಎಫ್ಐಆರ್ ಮಾಡಿಸಲಾಗಿದೆ..
ಈಗಾಗಲೇ ಶಿಕ್ಷೆ ಆಗಿರುವ ನೆಹರು ಓಲೇಕಾರ ಅವರಿಗೆ ಟಿಕೆಟ್ ನೀಡಬಾರದು, ಕೋರ್ಟ್ ಸ್ಟೇ ಕೊಟ್ಟಿದ್ದನ್ನೇ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದಾರೆ. ಇಷ್ಟಾದರೂ ಓಲೆಕಾರ್ ಗೆ ಟಿಕೆಟ್ ನೀಡುವಂತೆ ಕೆಲವು ಬೆಂಬಲಿಗರು ಕೇಳ್ತಾ ಇದ್ದಾರೆ. ಈ ಬಾರಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ವೆಂಕಟೇಶ್ ನಾರಯಣಿ, ಪರಮೇಶ್ವರಪ್ಪ ಮೇಗಳಮನಿ, ಶ್ರೀಪಾದ್ ಬೆಟ್ಟಗೆರಿಯಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ನನ್ನ ಮನವಿ.
ನೆಹರು ಓಲೆಕಾರ್ ಶಾಸಕ ಸ್ಥಾನಕ್ಕೆ ಅನರ್ಹ ಮಾಡುವಂತೆ ರಾಜ್ಯಪಾಲರು, ನಳೀನ್ ಕಟೀಲ್, ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ, ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇನೆ.
ಹೀಗಾಗಿ ನೆಹರು ಓಲೆಕಾರ್ ಅವರಿಗೆ ಟಿಕೆಟ್ ನೀಡದಂತೆ ಪಕ್ಷಕ್ಕೆ ನನ್ನ ಆಗ್ರಹ, ಭ್ರಷ್ಟಾಚಾರ ದಲ್ಲಿ ಭಾಗಿಯಾಗಿರುವ ಯಾವುದೇ ಅಭ್ಯರ್ಥಿ ಗಳಿಗೂ ಟಿಕೆಟ್ ನೀಡದಂತೆ ನನ್ನ ಮನವಿ. ಇಲ್ಲವಾದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂದು ಹಾವೇರಿ ಬಿಜೆಪಿ ಕಾರ್ಯಕರ್ತ ಸಂತೋಷ್ ರೆಡ್ಡಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News – 9341997936