
ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರವು ನೇಕಾರ ಲಿಂಗಾಯತ ಸಾಂದ್ರತೆಯುಳ್ಳ ಕ್ಷೇತ್ರವಾಗಿದ್ದು, ಕಳೆದ ನಾಲ್ಕು ಚುನಾವಣೆಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ನೇಕಾರ ಲಿಂಗಾಯತರನ್ನು ಕಡೆಗಣಿಸುತ್ತಾ ಬಂದಿದ್ದರಿಂದ ನಾವು ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.
ಸುಮಾರು 2.25 ಲಕ್ಷ ಮತದಾರರನ್ನು ಹೊಂದಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಹಟಗಾರ ಲಿಂಗಾಯತ (ನೇಕಾರ) ಮತವಿದ್ದು, 2.5 ಲಕ್ಷಕ್ಕೂ ಹೆಚ್ಚು ಮತದಾರರು ಬಾಗಲಕೋಟೆ ಜಿಲ್ಲೆಯಲ್ಲಿ ಹಾಗೂ 10 ಲಕ್ಷಕ್ಕೂ ಹೆಚ್ಚು ಮತದಾರರು ಕರ್ನಾಟಕ ರಾಜ್ಯದಲ್ಲಿದ್ದು ನಮ್ಮ ಈ ಧ್ವನಿ ಯಾರಿಗೂ ಕೇಳಿಸದೆ ಅರಣ್ಯರೋದನವಾಗಿದೆ, ಅದರಲ್ಲೂ ತೇರದಾಳ ಮತಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹಟಗಾರ ಲಿಂಗಾಯತ (ನೇಕಾರ) ಸಾಂದ್ರತೆ ಹೆಚ್ಚಿಗೆ ಇದ್ದು , ಇಲ್ಲಿ ಪಕ್ಷದ ಟಿಕೇಟ್ ಕೇಳಲು ಹೆಚ್ಚು ಹಕ್ಕು ಹೊಂದಿದ್ದೇವೆ.
ಈಗ ಮುಖ್ಯವಾಗಿ ನಮ್ಮ ಸಮಾಜದ ಡಾ|| ಮಲ್ಲೇಶಪ್ಪ ಎಸ್. ದಡ್ಡೆನವರ ವೃತ್ತಿಯಿಂದ ವೈದ್ಯರು, ಮುಖ್ಯವಾಗಿ ಇವರ ಮನೆತನವು ಕಾಂಗ್ರೇಸ್ ಪಕ್ಷದ ಕಛೇರಿಯಂತೆ ಸ್ವಾತಂತ್ರ್ಯ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಶ್ರೀಯುತರು ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ, ಈಗಾಗಲೇ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಡಾ|| ಮಲ್ಲೇಶಪ್ಪ ಎಸ್. ದಡ್ಡನವರ ಅವರು ತೇರದಾಳ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಅವರಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ಅನುವು ಮಾಡಿಕೊಡಬೇಕು. ಕಾಂಗ್ರೇಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿಕೊಂಡು ಬಂದಿದ್ದು ಪಕ್ಷವು ಎಲ್ಲರಿಗೂ ಸೇರಿದ್ದು ಹಾಗೂ ಎಲ್ಲರ ಹಿತವನ್ನು ಕಾಯ್ದುಕೊಂಡು ಹೋಗುತ್ತದೆ ಎಂಬ ಬಲವಾದ ನಂಬಿಕೆ ಹಾಗೂ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಶ್ರೀ ಶ್ರೀ ಶ್ರೀ ಚಿಕ್ಕರೇವಣಸಿದ್ಧ ಸ್ವಾಮೀಜಿ ಪತ್ರಿಕಾ ಫ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಪತ್ರಿಕಾಗೋಷ್ಠಿಯ ಉಪಸ್ಥಿತಿ
1) ಪರಮಪೂಜ್ಯ ಶ್ರೀ ಶ. ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು, ಗುರು ಹಿರೇಮಠ, ಮೈಂದರಿಗಿ.
2) ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತುಂಜಯ ಮಹಾಸ್ವಾಮಿಗಳು, ಸಿದ್ಧಾಶ್ರಮ ವಿರಕ್ತಮಠ, ಮೈಂದರಿಗಿ,
3) ಪರಮಪೂಜ್ಯ ಶ್ರೀ ಘನಲಿಂಗ ಮಹಾಸ್ವಾಮಿಗಳು, ಸಿದ್ದರೂಢ ಮಠ, ನೀರಲಕೇರಿ,
ನೇಕಾರ ಮುಖಂಡರಾದ ಶ್ರೀ ಶಂಕರ್ ಜಾಲಿಗಿಡದ, ಡಾ.ಪಂಡಿತ್ ಪಟ್ಟಣ, ಶ್ರೀ ಮಲ್ಲಪ್ಪ ಭಾವಿಕಟ್ಟಿ, ಶ್ರೀ ಚಂದ್ರಶೇಖರ ಶಿವಪೂಜಿ ಹಾಗೂ ಶ್ರೀ ಜಯವಂತ್ ಇಂಜಿನೇರಿ.
City Today News – 9341997936