
ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ಬಿ.ಜೆ.ಪಿಯ ಹಿರಿಯ ಮುಖಂಡರು, ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ 2023ನೇ ಸಾಲಿನ ವಿಧಾನಸಭೆಗೆ ಸ್ಪರ್ಧಿಸಲು “ಬಿ” ಫಾರಂ ನೀಡುವ ಕುರಿತು ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಯಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಛಲವಾದಿ ಜನಾಂಗದ ಪರವಾಗಿ ತಮ್ಮಲ್ಲಿ ವಿನಂತಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಛಲವಾದಿ ಜನಾಂಗವು ಇರುವುದು ತಿಳಿದ ವಿಷಯವಾಗಿರುವುದು ಸರಿಯಷ್ಟೆ ಈಗ ಈ ಜನಾಂಗದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎ.ಐ.ಸಿ.ಸಿ.) ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಛಲವಾದಿ ಜನಾಂಗದವರ ಮತಗಳು ಬಿ.ಜೆ.ಪಿ. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಲವನ್ನು ತೋರಿ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಛಲವಾದಿ ಜನಾಂಗದ ಪ್ರಮುಖ ನಾಯಕರಾದ ಶ್ರೀ ಕೆ. ಶಿವರಾಮು ರವರು ತಮ್ಮ ಆಡಳಿತ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ವರ್ಗದ ಜನತೆಯೊಂದಿಗೆ ಉತ್ತಮ ರೀತಿಯ ಬಾಂದವ್ಯವನ್ನು ಹೊಂದಿರು ತ್ತಾರೆ. ಹಾಗೂ ತಮ್ಮ ಸೇವಾ ಅವಧಿಯಲ್ಲಿ ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ನಿರುದ್ಯೋಗಿ ಯುವಕರುಗಳಿಗೆ ಅನುಕೂಲವಾಗುವಂತೆ ಶ್ರಮಿಸಿರುತ್ತಾರೆ. ಇಂತಹ ಪ್ರಮುಖ ರಾಜ್ಯ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಬಿ.ಜೆ.ಪಿ.ಯ ಹಿರಿಯ ಮುಖಂಡರು, ನಿವೃತ್ತ ಐ.ಎ.ಎಸ್., ಅಧಿಕಾರಿಯಾದ ಶ್ರೀ ಕೆ.ಶಿವರಾಮು ರವರಿಗೆ ಬಿ.ಜೆ.ಪಿ. ಪಕ್ಷದ ವತಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು “ಬಿ” ಫಾರಂ ಅನ್ನು ನೀಡುವುದು ಛಲವಾದಿ ಜನಾಂಗದ ಏಳಿಗೆಯ ಹಿತದೃಷ್ಟಿಯಿಂದ ಅಗತ್ಯವಾಗಿರುತ್ತದೆ. ಈಗಾಗಲೇ ಬಿ.ಜೆ.ಪಿ. ಪಕ್ಷದಿಂದ ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿಡುಗಡೆ ಮಾಡಿರುವ ಮೊದಲ ಪಟ್ಟಿಯನ್ನು ಮಾರ್ಪಡಿಸಿ ಬಿ.ಜೆ.ಪಿ. ಪಕ್ಷದ ವತಿಯಿಂದ 2023ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶ್ರೀ ಕೆ.ಶಿವರಾಮು ರವರಿಗೆ ಟಿಕೇಟ್ ನೀಡಿ ಛಲವಾದಿ ಜನಾಂಗದ ಅಭ್ಯರ್ಥಿಯ ಗೆಲುವಿಗೆ ಅನುಕೂಲವಾಗುವಂತೆ ಛಲವಾದಿ ಮಹಾಸಭಾ ಹಾಗೂ ಸಮಸ್ತ ಛಲವಾದಿ ಜನಾಂಗದ ಪರವಾಗಿ ಇಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಮೈಕೋ ನಾಗರಾಜ್ ಒತ್ತಾಯ ಪೂರ್ವಕವಾಗಿ ವಿನಂತಿಸಿದರು.
City Today News-9341997936