23ನೇ ಏಪ್ರಿಲ್ 2023ರ ಭಾನುವಾರ, ಬಸವ ಸಮಿತಿಯಿಂದ “ಬಸವ ಜಯಂತೋತ್ಸವ”

ಕರ್ನಾಟಕದ ಗಾಂಧಿ ಎಂದೇ ಸುಪ್ರಸಿದ್ಧರಾದ ಪೂಜ್ಯ ಡಾ. ಹರ್ಡೇಕರ್ ಮಂಜಪ್ಪನವರು ಪ್ರಪ್ರಥಮ ಬಾರಿಗೆ 1913ನೇ ಇಸವಿಯಲ್ಲಿ ಧಾರವಾಡದ ಮುರುಘಾಮಠದ ಪೂಜ್ಯ ಗುರುಗಳಾದ ಮೃತ್ಯುಂಜಯಪ್ಪಗಳವರನ್ನು ಒಡಗೂಡಿ, ಬಸವ ಜಯಂತಿಯನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದರು. ಅಂದಿನಿಂದ, ಇಂದಿನವರೆಗೆ, ಬಸವ ಜಯಂತಿಯ ಸಂಭ್ರಮಾಚರಣೆಗಳು ವಿಶ್ವದಾದ್ಯಂತ ನಡೆಯುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ.

ಮಹಾಮಾನವತಾವಾದಿ ವಿಶ್ವಗುರು ಬಸವಣ್ಣ ಮತ್ತು ಇತರ ಶಿವಶರಣರ ಧೈಯೋದ್ದೇಶಗಳನ್ನು ನಾಡಿನಾದ್ಯಂತ, ದೇಶವ್ಯಾಪ್ತಿ ಮತ್ತು ವಿಶ್ವದಾದ್ಯಂತ ಸಾರುವ ಸದುದ್ದೇಶದಿಂದ 1964ರಲ್ಲಿ ಮಾಜಿ ಹಂಗಾಮಿ ರಾಷ್ಟ್ರಪತಿಗಳಾದ ಡಾ. ಬಿ.ಡಿ. ಜತ್ತಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಸ್ಥಾಪಿಸಲ್ಪಟ್ಟ ಬಸವ ಸಮಿತಿ ಕಳೆದ 59 ವರ್ಷಗಳಿಂದ ಮಹತ್ವಪೂರ್ಣವಾದ ಅನೇಕ ಸಾಧನೆಗಳನ್ನು ಮಾಡಿದೆ. ನಿರಂತರವಾಗಿ, ಬಸವ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿರುತ್ತದೆ.

ಬಸವ ಸಮಿತಿ ಕೈಗೊಂಡ ಮುಖ್ಯವಾದ ಕಾರ್ಯಕ್ರಮಗಳು:

• 1965 – ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ. ಜಾಕೀರ್ ಹುಸೇನ್‌ರವರ ನೇತೃತ್ವದಲ್ಲಿ ದೆಹಲಿಯಲ್ಲಿ ಬಸವ ಜಯಂತಿ ಆಚರಣೆ.

1966 – ಹಂಪಿಯಿಂದ ಬಸವ ಕಲ್ಯಾಣದವರೆಗೆ ಐತಿಹಾಸಿಕ ಪಾದಯಾತ್ರೆ ಮೂಲಕ ಬಸವತತ್ವ ಪ್ರಚಾರ

1967 – ರಾಷ್ಟ್ರಾದ್ಯಂತ ಬಸವಣ್ಣನವರ ಅಪಶತಮಾನೋತ್ಸವದ ಕಾರ್ಯಕ್ರಮಗಳು.

1979 – ಪ್ರಥಮ ಬಾರಿಗೆ ಸಂಯುಕ್ತ ಅಮೇರಿಕ ದೇಶದ ನ್ಯೂಯಾರ್ಕ್ ಮತ್ತು ವಾಷಿಂಗ್‌ಟನ್‌ ನಗರಗಳಲ್ಲಿ ಬಸವ ಜಯಂತಿ ಆಚರಣೆ,

1994 – ಬೆಂಗಳೂರಿನ ಶ್ರೀ ಬಸವೇಶ್ವರ ವೃತ್ತದಲ್ಲಿ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಕೆ.ಆರ್. ನಾರಾಯಣನ್‌ರವರಿಂದ ಅಶ್ವರೂಢ ಬಸವಣ್ಣನವರ ಕಂಚಿನ ಪ್ರತಿಮೆ ಅನಾವರಣ,

2003 – ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರಿಂದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ.

2005 – ಆಂಧ್ರ ಪ್ರದೇಶದಾದ್ಯಂತ ಶರಣ ಸಂಸ್ಕೃತಿ ಮಹಾಯಾತ್ರೆ

2006 – ಭಾರತದ ಪ್ರಧಾನ ಮಂತ್ರಿಗಳಾದ ಡಾ ಮನಮೋಹನ ಸಿಂಗ್‌ರವರಿಂದ ಪ್ರಪ್ರಥಮ ಕನ್ನಡಿಗ ದಾರ್ಶನಿಕ ಬಸವಣ್ಣನವರ ಬಸವ ನಾಣ್ಯದ ಲೋಕಾರ್ಪಣೆ ಬೆಂಗಳೂರಿನ ಅರಮನೆ ಆವರಣದಲ್ಲಿ

• 2013 – 1913ನೇ ಇಸವಿಯಲ್ಲಿ ಪ್ರಾರಂಭವಾದ ಬಸವ ಜಯಂತಿಯ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯಾದಾದ್ಯಂತ ಶರಣ ಸಂಸ್ಕೃತಿ ಮಹಾಯಾತ್ರೆಯ ಕಾರ್ಯಕ್ರಮ ಆಯೋಜಿಸಲಾಯಿತು.

2017 – ಬಸವ ಸಮಿತಿಯ ಸುವರ್ಣಮಹೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮಗಳನ್ನು ರಾಷ್ಟ್ರದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಂದ ದೆಹಲಿಯ ಪ್ರತಿಷ್ಟಿತ ವಿಜ್ಞಾನ ಭವನದಲ್ಲಿ ಉದ್ಘಾಟನೆ ಹಾಗೂ ಬಹುಭಾಷಾ ವಚನ ಅನುವಾದ ಯೋಜನೆಯಡಿಯಲ್ಲಿ 23 ಭಾಷೆಗಳ ವಚನ ಸಂಪುಟಗಳನ್ನು ಬಿಡುಗಡೆಗೊಳಿಸಿದರು.

2019 – ಬಸವ ಜಯಂತಿಯನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಆಸ್ಟ್ರೇಲಿಯಾದ ಮೆಲ್‌ಬೌರ್ನ್‌ನಲ್ಲಿ ಆಚರಿಸಲಾಯಿತು.

• 2022 – ಇಸ್ಲಾಂ ಧರ್ಮದ ಖುರೇಷಿ ಸಮಾಜ ಬಾಂಧವರ ಮನವೊಲಿಸಿ ಬಸವಣ್ಣನವರ ಏಕೈಕ ಐತಿಹಾಸಿಕ ಸ್ಮಾರಕವಾದ ಬಸವ ಕಲ್ಯಾಣದಲ್ಲಿರುವ ಪರುಷ ಕಟ್ಟೆಯ ಜೀರ್ಣೋದ್ಧಾರದ ಮನರುತ್ಥಾನಕ್ಕೆ ಕಾರಣವಾದ ಬಸವ ಸಮಿತಿಯ ಕಾರ್ಯಸಾಧನೆ.

ಐದು ದಶಕಗಳಿಂದ ಪರಂಪರಾಗತವಾಗಿ ನಡೆದು ಬಂದಿರುವಂತೆ, ಈ ವರ್ಷವೂ ಸಹ ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರರ ಮತ್ಥಳಿಗೆ ಭಾನುವಾರ ದಿನಾಂಕ 23-04-2023ರ ಬೆಳಿಗ್ಗೆ 9.30 ಗಂಟೆಗೆ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ತರಳಬಾಳು ಜಗದ್ಗುರು ಶಾಖಾ-ಶ್ರೀಮಠ, ಸಾಣೇಹಳ್ಳಿ, ಶಿವಾನುಭವ ಚರಮೂರ್ತಿ ಪೂಜ್ಯ ಶ್ರೀ ಶಿವರುದ್ರ ಸ್ವಾಮಿಗಳು, ಅಧ್ಯಕ್ಷರು, ಬೇಲಿಮಠ ಮಹಾಸಂಸ್ಥಾನ, ಬೆಂಗಳೂರು, ಲೆಫ್ಟಿನೆಂಟ್ ಜನರಲ್ ಶ್ರೀ ರಮೇಶ್ ಹಲಗಲಿ, PVSM, AVSM,SM, Former General Officer and Deputy Chief of Army Staff, Indian Army ಹಾಗೂ ಇನ್ನಿತರ ಗಣ್ಯರಿಂದ ಮಾಲಾರ್ಪಣೆಗೊಳಿಸಿವುದರ ಮೂಲಕ ವಿಶ್ವಗುರು ಬಸವೇಶ್ವರರಿಗೆ ಗೌರವ ಸಮರ್ಪಿಸಲಿದ್ದಾರೆ.

ಬಸವ ಜಯಂತಿ ಸಭಾ ಕಾರ್ಯಕ್ರಮವನ್ನು ಬೆಳಿಗ್ಗೆ 10.00 ಗಂಟೆಗೆ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ. ಸದರಿ ಸಮಾರಂಭದಲ್ಲಿ ಶ್ರೀ ಜಯಂತ ಹುಂಬರವಾಡಿ, ಖ್ಯಾತ ಉದ್ಯಮಿಗಳು, ಅಶೋಕ ಫೌಂಡ್ರಿ, ಬೆಳಗಾವಿ ಇವರಿಗೆ ‘ಕಾಯಕ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ. ವೀರಣ್ಣ ರಾಜೂರ, ಕರ್ನಾಟಕ ಸರ್ಕಾರದ 2023ರ “ರಾಷ್ಟ್ರೀಯ ಬಸವ ಪುರಸ್ಕಾರ” ಭಾಜನರು, ಡಾ. ದಾಮೋದರ ಮೌಜೋ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ‘ವಚನ’ ಕೊಂಕಣಿ ಭಾಷೆಯ ಪ್ರಧಾನ ಸಂಪಾದಕರು ಹಾಗೂ ಪ್ರೊ. ಮೊಹಮ್ಮದ್ ಝಮಾನ್ ಅಜುರ್ದಾ, ನಿವೃತ್ತ ಪ್ರಾಧ್ಯಾಪಕರು, ಕಾಶ್ಮೀರ ವಿಶ್ವವಿದ್ಯಾಲಯ, ‘ವಚನ’ ಕಾಶ್ಮೀರಿ ಭಾಷೆಯ ಪ್ರಧಾನ ಸಂಪಾದಕರು ಇವರುಗಳಿಗೆ ‘ಬಸವ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರೊ ಜಿ.ಎಸ್. ಸಿದ್ಧಲಿಂಗಯ್ಯ ಇವರಿಗೆ ‘ಬಸವ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಮಾರಂಭದದಲ್ಲಿ ಬಸವ ಸಮಿತಿಯ ಸಂಶೋಧನಾ ಮತ್ತು ಪ್ರಕಟಣಾ ವಿಭಾಗ ಸಿದ್ಧಪಡಿಸಿರುವ 14 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು.

ಶರಣ ಸಂಸ್ಕೃತಿಯಲ್ಲಿ ಬದುಕಿ, ಶರಣ ಸಂಸ್ಕೃತಿಯನ್ನು ಉಳಿಸೋಣ, ಬೆಳೆಸೋಣ, ರಕ್ಷಿಸೋಣ ಎಂದು ಕೇಂದ್ರ ಬಸವ ಸಮಿತಿ, ಬೆಂಗಳೂರಿನ ಅಧ್ಯಕ್ಷರಾದ ಅರವಿಂದ ಜತ್ತಿ ಯವರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.