
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಬೆಂಗಳೂರಿನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೋಸ್ಕರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಧಾರ್ಮಿಕ ಶಿಕ್ಷಣ ಶಿಬಿರವನ್ನು 21-4-2023 ರಿಂದ 30- 4- 2023ವರೆಗೂ ಶ್ರೀ ಮಠದಲ್ಲಿ ಏರ್ಪಡಿಸಿದೆ, ಈ ಬೇಸಿಗೆಯ ಧಾರ್ಮಿಕ ಶಿಕ್ಷಣ ಶಿಬಿರದ “ಉದ್ಘಾಟನೆ”ಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು “ಉದ್ಘಾಟಿಸಿ” ವಿದ್ಯಾರ್ಥಿಗಳಿಗೆ ಹಿತೋಪದೇಶವನ್ನು ನೀಡಿ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಶ್ರೀ ಮಠದ ವಿದ್ವಾಂಸರು ಉಪಸ್ಥಿತರಿದ್ದರು, ಹೆಚ್ಚಿನ ಮಾಹಿತಿಗಾಗಿ- ಶ್ರೀಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯ, ನಂದಕಿಶೋರಾಚಾರ್ಯ, ಇವರನ್ನು ಸಂಪರ್ಕಿಸಬಹುದು , ಮಂತ್ರಾಲಯ ಕ್ಷೇತ್ರದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಅಧ್ಯಾಪಕರಾದ -ಪವನ್ ಆಚಾರ್ ಕುರುಡಿ, ವೇಣುಗೋಪಾಲಾಚಾರ್ ಪುರೋಹಿತ್, ಶಶಿಧರಾಚಾರ್,
ವಾಗೀಶಾಚಾರ- ಶ್ರೀನಿಧಿ ಆಚಾರ್ ವೃಂದದವರಿಂದ ವಿಶೇಷ ಪಾಠಗಳು ನಡೆಯಲಿವೆ ಸಮಯ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4:30ರ ವರೆಗೆ ಪಾಠಗಳು ನಡೆಯಲಿವೆ , ಮಧ್ಯಾಹ್ನ ತೀರ್ಥ ಪ್ರಸಾದ ವ್ಯವಸ್ಥೆಯು ಶ್ರೀಮಠದಲ್ಲಿ ನಡೆಯಲಿದೆ.
9945429129- 9448847586- 9972779534- 7019717706- 08022443962,
City Today News 9341997936