ಐಕಾನ್ ಮತ್ತು ಅಧಿಕ ಸಾಮರ್ಥ್ಯದ ಇನ್ವರ್ಟರ್ ಶ್ರೇಣಿ ಪ್ರಾರಂಭಿಸಿದ ಲೂಮಿನಸ್ ಪವರ್ ಟೆಕ್ನಾಲಜೀಸ್

ಏಪ್ರಿಲ್ 24, 2023, ಬೆಂಗಳೂರು..

ಉತ್ತಮವಾಗಿ ಬೇರುಬಿಟ್ಟ ಮತ್ತು ಪವರ್ ಬ್ಯಾಕ್‌ಅಪ್ ಹಾಗೂ ನಿವಾಸ ಸೌರಕ್ಷೇತ್ರದಲ್ಲಿ ವಿಶ್ವಸನೀಯ ಬ್ರ್ಯಾಂಡ್ ಆದ ಲೂಮಿನಸ್ ಪವರ್ ಟೆಕ್ನಾಲಜೀಸ್, ಮುಂಬರುತ್ತಿರುವ ಬೇಸಿಗೆಗಾಗಿ ಭವಿಷ್ಯಮುಖಿ ಉತ್ಪನ್ನಗಳ ಹೊಚ್ಚ ಹೊಸ ಶ್ರೇಣಿಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಸ್ಮಾರ್ಟ್ ಆದ, ಸುರಕ್ಷಿತವಾದ, ವಿದ್ಯುತ್-ಸಮರ್ಥವಾದ ಹಾಗೂ ದೀರ್ಘಕಾಲ ಇರುವಂತಹ ಉತ್ಪನ್ನಗಳನ್ನು ಒದಗಿಸಿ ಸಂತೋಷಪಡಿಸಬೇಕೆನ್ನುವ ಸಂಸ್ಥೆಯ ಕ್ರೋಢೀಕೃತ ಪ್ರಯತ್ನಗಳ ಫಲವಾಗಿ ಇದು ಹೊರಹೊಮ್ಮಿದೆ. ಇದನ್ನು, ಬೆಂಗಳೂರಿನಲ್ಲಿ ಲೂಮಿನಸ್ ಪವರ್ ಟೆಕ್ನಾಲಜೀಸ್‌ನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಿಸ್ ಪ್ರೀತಿ ಬಜಾಜ್ ತಿಳಿಸಿದರು.

ಹೊಸ ಶ್ರೇಣಿಯ ಬಗ್ಗೆ ವಿವರ ಒದಗಿಸುತ್ತಾ, ಮಿಸ್ ಬಜಾಜ್ ಅವರು, “ಕಳೆದ 35 ವರ್ಷಗಳಿಂದಲೂ ಲೂಮಿನಸ್ ಪವರ್ ಬ್ಯಾಕ್‌ಅಪ್ ಪರಿಹಾರಗಳನ್ನು ಒದಗಿಸುವಲ್ಲಿ ಮುನ್ನೆಲೆಯಲ್ಲಿದೆ. ತಂತ್ರಜ್ಞಾನ-ಭರಿತವಾದ, ಸುಂದರ ವಿನ್ಯಾಸದ ಹಾಗೂ ದೀರ್ಘಕಾಲ ಇರುವಂತಹ ನಮ್ಮ ಉತ್ಪನ್ನಗಳೊಂದಿಗೆ ನಾವು 100 ದಶಲಕ್ಷಕ್ಕಿಂತ ಹೆಚ್ಚಿನ ಮನೆಗಳಿಗೆ ಬೆಳಕು ಒದಗಿಸಿ ಸಂತೋಷ ನೀಡುತ್ತಾ ಬಂದಿದ್ದೇವೆ. ಈ ಋತುವಿನಲ್ಲೂ ನಮ್ಮ ಮಾನದಂಡವನ್ನು ಇನ್ನಷ್ಟು ವರ್ಧಿಸಿಕೊಂಡು, ನಮ್ಮ ಇತ್ತೀಚಿನ ಪವರ್ ಬ್ಯಾಕ್‌ಅಪ್ ಉತ್ಪನ್ನಗಳ ಶ್ರೇಣಿಯಾದ ಐಕಾನ್ ಶ್ರೇಣಿ ಮತ್ತು ಅಧಿಕ ಸಾಮರ್ಥ್ಯದ ಇನ್ವರ್ಟರ್ ಶ್ರೇಣಿಯನ್ನು ಪ್ರದರ್ಶಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಈ ಉತ್ಪನ್ನಗಳ ಶ್ರೇಣಿಯು, ಕ್ರಮವಾಗಿ, ನಿವಾಸ ಹಾಗೂ ವಾಣಿಜ್ಯ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲಿವೆ.”ಎಂದು ಹೇಳಿದರು.

ಐಕಾನ್ ಬಹುಶಃ, ಹಿಂದೆಂದೂ ಕಂಡಿರದಂತಹ ಸುರಕ್ಷತೆ ಹಾಗೂ ಅನುಕೂಲತಾ ಅಂಶಗಳೊಂದಿಗೆ ಬರುವ ಪ್ರೀಮಿಯಮ್ ಅಲ್ಟ್ರಾ ಮಾಡರ್ನ್ ನೋಟವಿರುವ ಭಾರತದ ಪ್ರಪ್ರಥಮ ಇನ್ವರ್ಟರ್ ಆಗಿದೆ. ಕೈಯಲ್ಲೆತ್ತಿಕೊಂಡು ಹೋಗಬಹುದಾದ, ನಿಶ್ಶಬ್ದವಾದ ಮತ್ತು ಸುಂದರವಾಗಿ ವಿನ್ಯಾಸಗೊಂಡಿರುವ ಇದನ್ನು ನೀವು ನಿಮ್ಮ ವಾಸಕೋಣೆಯಲ್ಲೂ ಇಟ್ಟುಕೊಳ್ಳಬಹುದು! 3 ಬಿಹೆಚ್‌ಕೆ ಮನೆ ಮತ್ತು ಶೋರೂಮ್‌ನ ಲೋಡ್ ಓಡಿಸುವುದಕ್ಕೆ ಸಜ್ಜುಗೊಂಡಿರುವ ಪ್ರಬಲವಾದ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವು ಅತಿದೊಡ್ಡ ಮಾರುಕಟ್ಟೆ ವರ್ಗದಲ್ಲಿ ಸೇರಿಕೊಳ್ಳುತ್ತದೆ. ಅಧಿಕ ಸಾಮರ್ಥ್ಯ ಇನ್ವರ್ಟರ್, ವಾಣಿಜ್ಯ ಬಳಕೆದಾರರಿಗೆ ನಿಜವಾಗಿಯೂ ಒಂದು ತಾಂತ್ರಿಕ ಅದ್ಭುತವೇ ಆಗಿದೆ. ಶೂನ್ಯ ಸದ್ದು ಹೊಂದಿರುವ ಪ್ರಬಲವಾದ ಇನ್ವರ್ಟರ್ ಆಗಿರುವ ಇದು, 2KVA ಗಿಂದ ಹೆಚ್ಚಿನ ಸಾಮರ್ಥ್ಯದ ಲೋಡ್ ಅಗತ್ಯವಿರುವಂತಹ ಕಚೇರಿಗಳು, ಶೋರೂಮ್‌ಗಳು, ಬ್ಯಾಂಕುಗಳು, ದಂತ ಚಿಕಿತ್ಸಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ರೆಸ್ಟಾರೆಂಟ್‌ಗಳು, ಸಲೂನ್‌ಗಳು, ಐಸ್‌ಕ್ರೀಂ ಪಾರ್ಲ್‌ಗಳ ಅಗತ್ಯಗಳನ್ನು ಪೂರೈಸುತ್ತದೆ. ಅಧಿಕ ಸಾಮರ್ಥ್ಯದ ಇನ್ವರ್ಟರ್, ಹವಾನಿಯಂತ್ರಕಗಳು, ಎಲ್ಲಾ ಅಡುಗೆಮನೆ ಅಪ್ಲಯನ್ಸ್‌ಗಳನ್ನೂ ಆರಾಮವಾಗಿ ಓಡಿಸುವುದಕ್ಕೆ ಲೋಡ್ ತೆಗೆದುಕೊಳ್ಳುತ್ತದೆ. ಅಧಿಕ ವಿದ್ಯುತ್ ಸಾಮರ್ಥ್ಯವಿರುವ ಈ ಇನ್ವರ್ಟ್‌ನಿಂದ ಬಳಕೆದಾರರಿಗೆ 2-5 ಘಂಟೆಗಳ ಬ್ಯಾಕ್‌ಅಪ್ ಸಮಯ ಸಿಗುತ್ತದೆ. ಪ್ರಬಲವಾದ ಸಿಸ್ಟಮ್ ಹೊಂದಿರುವ ಇದು 24 ತಿಂಗಳುಗಳ ವಾರಂಟಿ ಅವಧಿಯೊಂದಿಗೆ ಬರುತ್ತದ

ಈ ಎರಡು ಹೊಸ ಕೊಡುಗೆಗಳನ್ನು, ಭಾರತದಾದ್ಯಂತ ಇರುವ ಲೂಮಿನಸ್‌ನ ವಿಶಾಲ ಡೀಲರ್ ಕಾರ್ಯ ಜಾಲದ ಮೂಲಕ ಮಾರುಕಟ್ಟೆ ಮಾಡಲಾಗುತ್ತದೆ. 900 VA ಸಾಮರ್ಥ್ಯದ ಐಕಾನ್‌ನ ಬೆಲೆ ರೂ. 9000 ಆದರೆ, ಮತ್ತು 1400 VA ಸಾಮರ್ಥ್ಯದ ಐಕಾನ್‌ನ ಬೆಲೆ ರೂ 14,000 ಆಗಿರುತ್ತದೆ. ಅಧಿಕ ಸಾಮರ್ಥ್ಯದ ಇನ್ವರ್ಟ್‌ಗಳು ಕ್ರಮವಾಗಿ 2 KVAಗೆ ರೂ. 12,000ದಲ್ಲೂ ಮತ್ತು 10KVA ಸಿಸ್ಟಮ್‌ಗೆ ರೂ. 85,000ದಲ್ಲೂ ದೊರಕುತ್ತವೆ.

ಲೂಮಿನಸ್‌ನ ಮುಂದಿರುವ ಮಾರ್ಗಪಥದ ಬಗ್ಗೆ ಮಾತನಾಡುತ್ತಾ, ಮಿಸ್ ಬಜಾಜ್ ಅವರು, “ಭಾರತವು ಶ್ನೀಡ್‌ಗೆ ಅಧಿಕ ಆದ್ಯತೆಯ ಮಾರುಕಟ್ಟೆಯಾಗಿದೆ. ಇದಕ್ಕೆ ಕಾರಣ, ನೀತಿ ಆಯೋಗದ ಪ್ರಕಾರ, 6% CAGR ನಲ್ಲಿ ಬೆಳೆಯುತ್ತಿರುವ USD 20 ಬಿಲಿಯನ್ ಮಾರುಕಟ್ಟೆಯಲ್ಲಿರುವ ಅದರ ಅಪಾರ ಬೆಳವಣಿಗೆ ಸಾಧ್ಯತೆ. ಇದನ್ನು ಇನ್ನಷ್ಟು ಗಣನೀಯವಾಗಿ ಹೆಚ್ಚಿಸುವಲ್ಲಿ ಲೂಮಿನಸ್ ಪ್ರಮುಖ ಪಾತ್ರ ವಹಿಸಲಿದೆ. ಮುಂದಿನ 3 ವರ್ಷಗಳಲ್ಲಿ ಚುರುಕಾದ 12-15% ಬೆಳವಣಿಗೆಗಾಗಿ ನಾವು ಮಹತ್ವಾಕಾಂಕ್ಷೆಯ ಯೋಜನೆ ಹಾಕಿಕೊಂಡಿದ್ದೇವೆ. ನಾವು ಅನೇಕ ಭವಿಷ್ಯಮುಖಿ ಉತ್ಪನ್ನಗಳನ್ನು ಪರಿಚಯಿಸಲಿದ್ದೇವೆ, ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದ್ದೇವೆ ಮತ್ತು ನಮ್ಮ ಪ್ರಬಲವಾದ ಚಾನೆಲ್ ಕಾರ್ಯಜಾಲವನ್ನು ವಿಸ್ತರಿಸಲಿದ್ದೇವೆ. ಉತ್ಪನ್ನದ ವಿಷಯದಲ್ಲಿ ನಾವು ಹೊಸ ಯುಗದ ಲಿಥಿಯಮ್ ಅಯಾನ್ ಬ್ಯಾಟರ್, ಸೋಲಾರ್ ಆಕ್ಸಿಲರೇಶನ್, ಅಧಿಕ ಶಕ್ತಿಯ ಇನ್ವರ್ಟ್‌ಗಳು ಇತ್ಯಾದಿಗಳನ್ನು ಪರಿಚಯಿಸಲಿದ್ದೇವೆ. ಅಲ್ಲದೆ ಇದರ ಜೊತೆಗೆ, ನಾವು ನಮ್ಮ ಹಸಿರುಕ್ಷೇತ್ರ ಘಟಕಗಳನ್ನು ಸ್ಥಾಪಿಸುತ್ತೇವೆ, ನಮ್ಮ ಭೌಗೋಳಿಕ ಹೆಜ್ಜೆಗುರುತನ್ನು ವಿಸ್ತರಿಸುತ್ತೇವೆ, ಜನರು ಮತ್ತು ವ್ಯಾಪಾರ ಭಾಗೀದಾರ ಅಭಿವೃದ್ಧಿಯನ್ನು ವರ್ಧಿಸಲಿದ್ದೇವೆ. ಬ್ರ್ಯಾಂಡ್ ನಿರ್ಮಾಣ, ಡಿಜಿಟೀಕರಣ ಹಾಗೂ ಗ್ರಾಹಕ ತೊಡಗಿಕೊಳ್ಳುವಿಕೆ ಕಾರ್ಯಕ್ರಮಗಳ ಮೇಲೆ ಗಣನೀಯವಾಗಿ ಹೂಡಿಕೆ ಮಾಡುವ ಉದ್ದೇಶವೂ ನಮಗಿದೆ.”ಎಂದರು.

ಲೂಮಿನಸ್ ಪವರ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷೆ ಮತ್ತು ತಂತ್ರಗಾರಿಕೆ, ಪರಿವರ್ತನೆ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಮಿಸ್ ನೀಲಿಮ ಬುರ್ರ, “ಲೂಮಿನಸ್ ತನಗಾಗಿ ಒಂದು ವಿಶಿಷ್ಟ ಸ್ಥಾನವನ್ನು ಸ್ಥಾಪಿಸಿಕೊಂಡಿದ್ದು ಇಂದು ವಿದ್ಯುತ್ ಪರಿಹಾರಗಳ ಮಾರುಕಟ್ಟೆಯಲ್ಲಿ ನಂ.1 ಬ್ರ್ಯಾಂಡ್ ಆಗಿದೆ. ಭಾರತವು ಬದಲಾವಣೆಯ ಅಲೆಯಲ್ಲಿರುವಂತಹ ಸಂದರ್ಭದಲ್ಲಿ, ವಿದ್ಯುತ್ ಗುಣಮಟ್ಟ, ವಿದ್ಯುತ್ ಬಳಕೆ ಹಾಗೂ ಭಾರತದ ತಲಾಧಾರ ಆದಾಯದ ವಿಕಸನದಲ್ಲಿ ನಿದರ್ಶನೀಯ ಬದಲಾವಣೆಯಾಗುತ್ತಿದೆ. ವಿದ್ಯುತ್ ಬ್ಯಾಕ್‌ಅಪ್ ಅಗತ್ಯಗಳು ನಿವಾಸ ಸೋಲಾರ್ ಹಾಗೂ ಅಧಿಕ KVA ಶ್ರೇಣಿಗಳಡೆಗೆಬ್ ವಾಲುತ್ತಿರುವುದರಿಂದ ಲೂಮಿನಸ್ ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯನ್ನು ವರ್ಧಿಸಿ, ಭವಿಷ್ಯತ್ತಿನ ಲೂಮಿನಸ್ ಆದ Luminous 3.0 ಯನ್ನು ರೂಪಿಸಲು ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ, ವಿವಿಧ ವ್ಯಾಪಾರಗಳು ಮತ್ತು ಬ್ರ್ಯಾಂಡ್‌ಗಳಾದ್ಯಂತ ಪ್ರಮುಖ ಉಪಕ್ರಮಗಳ ಶ್ರೇಣಿಯನ್ನು ಯೋಜಿಸಲಾಗಿದ್ದು ಕಾಗತಿಕ ಪ್ರೊ-ಸ್ಯೂಮರ್-ಟೆಕ್ ಪ್ಲೇಯರ್ ಆಗಿ ಲೂಮಿನಸ್‌ನ ಸ್ಥಾನವನ್ನು ಪರಿವರ್ತಿಸುವ ಪಯಣವನ್ನು ಮುನ್ನಡೆಸಲಾಗುತ್ತದೆ. ನಮ್ಮ ತಂತ್ರವು ದೀರ್ಘಸ್ಥಾಯಿ ವಿದ್ಯನ ಜಗತ್ತನ್ನು ಪರಿವರ್ತಿಸುತ್ತಿದ್ದು ಸಂತುಷ್ಟ ಮನೆಗಳಿಗೆ ವಿದ್ಯುತ್ ಒದಗಿಸಿ ಆನಂದ ನೀಡುತ್ತಿದೆ. ಅಪಾರ ಉತ್ಪನ್ನಗಳ ಸ್ವೀಕೃತಿಯೊಂದಿಗೆ ನಾವು ನಮ್ಮ ಬಿ2ಸಿ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡು, ಅತ್ಯುತ್ಕೃಷ್ಟ ಗ್ರಾಹಕ ಅನುಭವ ಒದಗಿಸುವುದಕ್ಕಾಗಿ ಹೆಚ್ಚು ಸ್ಮಾರ್ಟ್ ಆದ, ಸುರಕ್ಷಿತವಾದ ಮತ್ತು ಹೆಚ್ಚು ದೀರ್ಘಕಾಲ ಇರುವಂತಹ ಉತ್ಪನ್ನಗಳೊಂದಿಗೆ ಬೆಳೆಯಲು ಗಣನೀಯವಾಗಿ ಹೂಡಿಕೆ ಮಾಡಲಿದ್ದೇವೆ. ಬ್ರ್ಯಾಂಡ್ ನಿರ್ಮಾಣ, ಚಾನೆಲ್ ಅಭಿವೃದ್ಧಿ ಮತ್ತು ಡಿಜಿಟೀಕರಣಕ್ಕಾಗಿ ಮುಂಬರುವ ವರ್ಷಗಳಿಗಾಗಿ ನಾವು ನಮ್ಮ ಹೂಡಿಕೆಗಳನ್ನು ಕಾದಿರಿಸಿದ್ದೇವೆ. ಇವುಗಳನ್ನು, ಮುಂಬರುವ ವರ್ಷಗಳಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಆಧುನೀಕರಣದೆಡೆಗೆ ವಿನಿಯೋಗಿಸಲಾಗುತ್ತದೆ.”ಎಂದು ಸೇರಿಸಿದರು.

ಪ್ರಸ್ತುತದ ಟಿ20 ಸರಣಿ 2023ದಲ್ಲಿ ಟೈಟಲ್ ಸ್ಪಾನ್ಸರ್ ಆಗಿ ರಾಜಸ್ಥಾನ್ ರಾಯಲ್ಸ್‌ನೊಂದಿಗಿನ (RR) ಸಹಯೋಗದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಮಿಸ್ ಬುರ್ರ ಅವರು, “ಭಾರತದ ಪ್ರತಿಯೊಂದು ಮನೆಯಲ್ಲಿ ನಮ್ಮ ಬ್ರ್ಯಾಂಡನ್ನು ಬಲಪಡಿಸಲು ನೆರವಾಗುವುದರಿಂದ, IPL ಮತ್ತು RR ಸಹಯೋಗವು ಅತ್ಯಮೂಲ್ಯವಾದುದು. ತಂತ್ರಜ್ಞಾನ ಆವಿಷ್ಕಾರಗಳ ಮೂಲಕ ಸಂತುಷ್ಟ ಮನೆಗಳಿಗೆ ಶಕ್ತಿ ನೀಡುವ ಗುರಿಹೊಂದಿರುವ ಮನೆಮಾತಾದ ಹೆಸರಾಗಿ ಪರಿವರ್ತಿತಗೊಂಡಿರುವ ಒಂದು ಬ್ರ್ಯಾಂಡ್ ಮತ್ತು ಕ್ರಿಕೆಟ್ ಮೂಲಕ ಸಮಾಜವನ್ನು ಹಾಗೂ ಆವಿಷ್ಕಾರದ ಮೂಲಕ ಕ್ರಿಕೆಟನ್ನು ಪರಿವರ್ತಿಸುವ ಧ್ಯೇಯೋದ್ದೇಶ ಹೊಂದಿರುವ ಕ್ರಿಕೆಟ್ ತಂಡದ ನಡುವಣ ಈ ಸಹಯೋಗವು, ಎರಡೂ ಸಂಸ್ಥೆಗಳ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸಬಲ್ಲ ಒಂದು ಪರಸ್ಪರ ಪ್ರಯೋಜನಕಾರಿಯಾಗಿರುವಂತಹ ಭಾಗೀದಾರ ಪರಿಸರವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಬಹಳ ದೂರ ಸಾಗಲಿದೆ. ತನ್ನ ಸಮಾಜಸೇವಾ ಘಟಕವಾದ ರಾಯಲ್ ರಾಜಸ್ಥಾನ್ ಫೌಂಡೇಶನ್ ಮೂಲಕ ಈ ಫ್ರಾಂಚೈಸ್, ಸೌರಶಕ್ತಿಗೆ ಪ್ರವೇಶಾವಕಾಶ ಒದಗಿಸುವುದರ ಜೊತೆಜೊತೆಗೆ, ನೀರು, ಜೀವನೋಪಾಯ ಮತ್ತು ಮಾನಸಿಕ ಆರೋಗ್ಯ ಪರಿಹಾರಗಳಿಗೆ ಸಮನಾದ ಪ್ರವೇಶಾವಕಾಶ ನೀಡುವುದಕ್ಕಾಗಿ ರಾಜಸ್ಥಾನದಲ್ಲಿ ಸಬಲ್ ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಲು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಮಹಿಳಾ ದಿನದ ಪ್ರಚಾರಾಂದೋಲನ #WomenInEnergy, ವಿದ್ಯುತ್ ಕ್ಷೇತ್ರದಲ್ಲಿರ ಲಿಂಗ ಅಸಮಾನತೆಯಲ್ಲಿನ ಅಂತರವನ್ನು ಕಡಿಮೆ ಮಾಡಿ, ಸಂತುಷ್ಟ ಮನೆಗಳಿಗೆ ಬಲ ನೀಡುತ್ತಿರುವ ಮಹಿಳೆಯರಿಗೆ ಸಮಾನ ಅವಕಾಶವನ್ನು ಒದಗಿಸುವ ಗುರಿ ಹೊಂದಿದೆ. ಕ್ರಿಕೆಟನ್ನು ವಾಹನವಾಗಿರಿಸಿಕೊಂಡು ಸಮಾಜದ ಮೇಲೆ ಪ್ರಭಾವ ಬೀರಬೇಕೆನ್ನುವ ರಾಯಲ್ಸ್ ಅವರ ಮಹತ್ವಾಕಾಂಕ್ಷೆಯನ್ನು ಪರಿಗಣಿಸಿದಾಗ, ಹೆಣ್ಣುಮಕ್ಕಳಿಗೆ ಸಮೃದ್ಧ ಶಿಕ್ಷಣ ನೀಡುವುದು, ಜೀವನೋಪಾಯ ಕಲ್ಪಿಸುವುದು ಹಾಗೂ ಜೀವಿಸುವುದಕ್ಕೆ ಹಸಿರು ಪರಿಸರವನ್ನು ಒದಗಿಸುವ ಲೂಮಿನಸ್ ಬದ್ಧತೆಯಲ್ಲಿ, ಎರಡೂ ಬ್ರ್ಯಾಂಡ್‌ಗಳಿಗೆ ಹಲವಾರು ಅವಕಾಶಗಳಿವೆ.

City Today News 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.