➢ ತಡೆರಹಿತ ಕ್ರಿಕೆಟ್‌ನ ಭರವಸೆ ಒದಗಿಸುತ್ತಾ, ಮುಂಚೂಣಿ ವಿದ್ಯುಚ್ಛಕ್ತಿ ಪರಿಹಾರಗಳ ಸರಬರಾಜುದಾರ ಸಂಸ್ಥೆ ಹಾಗೂ ಐಪಿಎಲ್ 2023ಗಾಗಿ ರಾಜಸ್ಥಾನ್ ರಾಯಲ್ಸ್‌ನ ಶೀರ್ಷಿಕಾ ಪ್ರಾಯೋಜನ ಸಂಸ್ಥೆಯಾದ ಲೂಮಿನಸ್ ಪವರ್ ಟೆಕ್ನಾಲಜೀಸ್, ಆಟಮ್‌ಗ್ರೇ(AutumnGrey)ದ ಸಹಯೋಗದೊಂದಿಗೆ ತನ್ನ ಇತ್ತೀಚಿನ ಪ್ರಚಾರಾಂದೋಲನವನ್ನು ಪ್ರಾರಂಭಿಸಿದೆ.
ಮೇ 01, 2023,ಬೆಂಗಳೂರು : ಇಡೀ ದೇಶ ಐಪಿಎಲ್ ಜ್ವರದ ಹಿಡಿತದಲ್ಲಿರುವಂತಹ ಸಂದರ್ಭದಲ್ಲಿ, ಮುಂಚೂಣಿ ವಿಚ್ಯುಚ್ಛಕ್ತಿ ಮತ್ತು ಶಕ್ತಿ ಪರಿಹಾರಗಳ ಸರಬರಾಜುದಾರ ಸಂಸ್ಥೆಯಾದ ಲೂಮಿನಸ್ ಪವರ್ ಟೆಕ್ನಾಲಜೀಸ್, ಸುಲಭವಾಗಿ ಮತ್ತು ಶೀಘ್ರವಾಗಿ ಚಾರ್ಜ್ ಆಗುವ ಇನ್ವರ್ಟರ್(ICON)ಗಳಿಂದ ಸಜ್ಜುಗೊಂಡ ಭಾರೀ ಲೋಡ್ ಮೇಲೆ ಓಡುವ ಅಧಿಕ-ಸಾಮರ್ಥ್ಯದ ಇನ್ವರ್ಟರ್‌ಗಳ ಶ್ರೇಣಿಯನ್ನು ಪ್ರದರ್ಶಿಸುವ ಸಲುವಾಗಿ, ತನ್ನ ಹೊಸ ಪ್ರಚಾರಾಂದೋಲನ #CricketMeinNoPowerCut ಅನ್ನು ಪ್ರಾರಂಭಿಸಿದೆ. ಟ್ವಿಟ್ಟರ್, ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಮತ್ತು ಯೂಟ್ಯೂಬ್ ಒಳಗೊಂಡಂತೆ ಎಲ್ಲಾ ಡಿಜಿಟಲ್ ವೇದಿಕೆಗಳಲ್ಲೂ ಇತ್ತೀಚೆಗೆ ಪ್ರಸಾರ ಮಾಡಲಾಗಿರುವ ಈ ಪ್ರಚಾರವನ್ನು ಟಿವಿ, ಮುದ್ರಣ ಹಾಗೂ ಓಟಿಟಿಯಲ್ಲೂ ಪ್ರದರ್ಶಿಸಲಾಗುತ್ತದೆ.
ಪ್ರತಿವರ್ಷ, ದೀರ್ಘಕಾಲ ವಿದ್ಯುತ್ ಕಡಿತವಿರುವ ಬೇಸಿಗೆಯ ಭಯ ಭಾರತಕ್ಕಿದೆ. ಅದೇ ವೇಳೆ, ಬೇಸಿಗೆಯು, ಭಾರತದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತರದಿಂದ ಕಾಯುವ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವ ಸಮಯವೂ ಆಗಿದೆ. ಪ್ರತಿಯೊಬ್ಬ ಕ್ರಿಕೆಟ್ ಪ್ರೀಮಿ ಭಾರತೀಯ, ಅದರಲ್ಲೂ ವಿಶೇಷವಾಗಿ ಯಾವುದೇ ವಿದ್ಯುತ್ ಕಡಿತದ ತೊಂದರೆಯಿಲ್ಲದೆ ಐಪಿಎಲ್ ನೋಡಬೇಕೆನ್ನುವ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಪಂದ್ಯದ ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಲು ಇಷ್ಟವಿರುವುದಿಲ್ಲ. ಈ ಐಪಿಎಲ್ ಸೀಸನ್‌ನಲ್ಲಿ ಕ್ರಿಕೆಟ್ ಉತ್ಸಾಹಿಗಳು ಮತ್ತು ಅಭಿಮಾನಿಗಳಿಗೆ ತಡೆರಹಿತ ವೀಕ್ಷಣಾ ಅನುಭವದ ಭರವಸೆಯನ್ನು ಒದಗಿಸುತ್ತಾ, ಲೂಮಿನಸ್‌ನ ಹೊಸ ಪ್ರಚಾರಾಂದೋಲನ #CricketMeinNoPowerCut, ಶೀಘ್ರವಾಗಿ ಚಾರ್ಜ್ ಆಗುವ ಮತ್ತು ಹೆವಿಡ್ಯೂಟಿ ಇನ್ವರ್ಟರ್‌ಗಳೊಂದಿಗೆ ಬ್ಯಾಕ್‌ಅಪ್ ಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ತೋರಿಸುವ ಪ್ರಯತ್ನ ನಡೆಸಿದೆ.
ಈ ಸೀಸನ್‌ಗೆ ರಾಜಸ್ಥಾನ್ ರಾಯಲ್ಸ್‌ನ ಶೀರ್ಷಿಕಾ ಪ್ರಾಯೋಜಕವಾಗಿರುವ ಈ ಪ್ರಪ್ರಥಮ ಪ್ರಚಾರಾಂದೋಲನದ ಚಿತ್ರವನ್ನು ಪ್ರಚಾರದ ಭಾಗವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ತಂಡದ ಮುಂಚೂಣಿ ಆಟಗಾರರಾದ ಯುಜ್ವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್, ಜೋಸ್ ಬಟ್ಲರ್, ತಡೆರಹಿತವಾದ ಹಾಗೂ ವರ್ಧಿತ ಕ್ರಿಕೆಟ್ ವೀಕ್ಷಣಾ ಅನುಭವಕ್ಕಾಗಿ ಲೂಮಿನಸ್ ಇನ್ವರ್ಟರ್‌ಅನ್ನು ಮನೆಗೆ ತರುವಂತೆ ಅಭಿಮಾನಿಗಳನ್ನು ಪ್ರೋತ್ಸಾಹಿಸುತ್ತಾರೆ.

ಈ ಹೊಸ ಪ್ರಚಾರದ ಬಗ್ಗೆ ಮಾತನಾಡುತ್ತಾ, ಲೂಮಿನಸ್ ಪವರ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷೆ ಮತ್ತು ಚೀಫ್ ಸ್ಟ್ರಾಟಜಿ, ಟ್ರಾನ್ಸ್‌ಫರ್ಮೇಶನ್ ಮತ್ತು ಮಾರ್ಕೆಟಿಂಗ್ ಆಫಿಸರ್ ಆದ ಮಿಸ್. ನೀಲಿಮಾ ಬುರ್ರ ” ಕ್ರಿಕೆಟ್ ಅಭಿಮಾನಿಗಳ ಆಸಕ್ತಿಯನ್ನು ಹಿಡಿದಿಡುವುದಕ್ಕೆ ಐಪಿಎಲ್ ಯಾವಾಗಲೂ ಬ್ರ್ಯಾಂಡ್‌ಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ರಾಜಸ್ಥಾನ್ ರಾಯಲ್ಸ್‌ನೊಂದಿಗಿನ ನಮ್ಮ ಸಹಯೋಗ ಹಾಗು ಈ ಹೊಸ ಪ್ರಚಾರಾಂದೋಲನ #CricketMeinNoPowerCut, ನಾವು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ತಲುಪಿ, ಪ್ರಸ್ತುತದ ಹಾಗೂ ಸಂಭಾವ್ಯ ಗ್ರಾಹಕರ ಮೇಲೆ ಗಣನೀಯ ಪ್ರಭಾವ ಏರ್ಪಡಿಸುವುದಕ್ಕೆ ಅವಕಾಶಗಳನ್ನು ಒದಗಿಸುತ್ತದೆ. ನಿರಂತರವಾದ ಆವಿಷ್ಕಾರಗಳು ಮತ್ತು ತನ್ನ ಕೊಡುಗೆಗಳಲ್ಲಿ ಸುಧಾರಣೆಗಳ ಮೂಲಕ ತನ್ನ ಗ್ರಾಹಕರಿಗೆ ಮೌಲ್ಯ ಒದಗಿಸಲು ಮತ್ತು ಅತ್ಯುತ್ತಮ ಉತ್ಪನ್ನ ವಿಶ್ವಸನೀಯತೆಗಾಗಿ ಲೂಮಿನಸ್ ಸಾಬೀತಾದ ಪುರಾವೆ ಹೊಂದಿದೆ. ಈ ಹೊಸ ಪ್ರಚಾರಾಂದೋಲನವು, ಕ್ರೀಡೆಯನ್ನು ತಡೆಯಿಲ್ಲದೆ ಆನಂದಿಸಬೇಕೆನ್ನುವ ಕ್ರಿಕೆಟ್ ಅಭಿಮಾನಿಗಳಿಗಾಗ್ಯೇ ವಿಶೇಷವಾಗಿ ಬರುತ್ತಿದೆ.”ಎಂದು ಹೇಳಿದರು.
“ಕ್ರಿಕೆಟ್ ಅತಿಯಾಗಿ ತೊಡಗಿಕೊಳ್ಳುವಂತಹ ಮತ್ತು ಪರಸ್ಪರ ಸಂವಾದದ ಕ್ರೀಡೆಯಾಗಿರುವುದರಿಂದ ನಮ್ಮ ಸ್ಟಾರ್ ಉತ್ಪನ್ನಗಳಾದ ಐಕಾನ್ ಮತ್ತು ಐಕ್ರೂಜ್(Icon and iCruze )ಅನ್ನು, ನಮ್ಮ ಗ್ರಾಹಕರಿಗೆ ತಡೆರಹಿತ ವಿದ್ಯುಚ್ಛಕ್ತಿ ಬ್ಯಾಕ್‌ಅಪ್‌ನ ಖಾತರಿ ಮತ್ತು ಭರವಸೆಯ ಜೊತೆಗೆ, ಆನಂದಮಯ ವೀಕ್ಷಣಾ ಅನುಭವವನ್ನು ನೀಡುವುದಕ್ಕಾಗಿಯೇ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ.”ಎಂದು ಅವರು ಸೇರಿಸಿದರು.
ಒಂದು ತಿಂಗಳ ಪ್ರಚಾರದ ಭಾಗವಾಗಿ ಲೂಮಿನಸ್, ಅನೇಕ ಸ್ಪರ್ಧೆಗಳನ್ನೂ ಏರ್ಪಡಿಸಲಿದ್ದು, ಅಭಿಮಾನಿಗಳು ಇದರಲ್ಲಿ ಭಾಗವಹಿಸಿ ಕೌತುಕಮಯವಾದ ಬಹುಮಾನಗಳನ್ನು ಗೆಲ್ಲಬಹುದು. #CricketMeinNoPowerCut ಸುತ್ತ ಒಂದು ಕಂಟೆಂಟ್ ರಚಿಸುವ ಸಲುವಾಗಿ ಬ್ರ್ಯಾಂಡ್ ಅನೇಕ ಪ್ರಭಾವಕರೊಡನೆ ಕೂಡ ಸಹಯೋಗ ಏರ್ಪಡಿಸಿಕೊಂಡಿದೆ. ಅಭಿಮಾನಿಗಳೇ ಈ ಪ್ರಚಾರದ ಹಿಂದಿರುವ ಪ್ರಾಥಮಿಕ ಪ್ರೇರಣೆಯಾಗಿರುವುದರಿಂದ, ಕ್ರಿಕೆಟರ್‌ಗಳಿಗಾಗಿ ತಮ್ಮ ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ಈ ಪ್ರಚಾರದ ಮುಂದಿನ ಜಾಹೀರಾತಿನಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳಲು ಒಂದು ಸ್ಪರ್ಧೆ ಏರ್ಪಡಿಸಲಾಗಿದೆ.
“ಬೇಸಿಗೆಯಲ್ಲಿ ಯಾರಿಗೆ ತಾನೇ ಪವರ್ ಕಟ್ ಇಷ್ಟವಾಗುತ್ತದೆ! ಅದರಲ್ಲೂ ಐಪಿಎಲ್ ಸೀಸನ್‌ನಲ್ಲಿ! ಈ ಪರಿಕಲ್ಪನೆಯ ಹೃದ್ಭಾಗ ತಟ್ಟುವುದು ನಮ್ಮ ಗುರಿ. ತಮ್ಮ ಅಧಿಕ ಸಾಮರ್ಥ್ಯದ ಇನ್ವರ್ಟರ್‌ಗಳೊಂದಿಗೆ ಲೂಮಿನಸ್ ವಿದ್ಯುತ್ ಕಡಿತ ಇಲ್ಲದಿರುವುದನ್ನು ಖಾತರಿಪಡಿಸುವುದು ಮಾತ್ರವಲ್ಲದೆ, ನಿಮ್ಮ ಎ.ಸಿ.ಯಂತಹ ಹೆವಿಡ್ಯೂಟಿ ಸಾಧನಗಳು ಓಡುವುದನ್ನೂ ಖಾತರಿಪಡಿಸುತ್ತವೆ. ಆದ್ದರಿಂದಲೇ ನಾವು #CricketMeinNoPowerCuts” ಎಂದು ಹೇಳುತ್ತಿದ್ದೇವೆರ್.”ಎಂದು ಹೇಳುತ್ತಾರೆ, ಗ್ರೇ ಗ್ರೂಪ್‌ನ ಚೇರ್‌ಪರ್ಸನ್ ಮತ್ತು ಗ್ರೂಪ್ ಸಿಇಒ ಅನುಷ ಶೆಟ್ಟಿ.
ಕಳೆದ 35 ವರ್ಷಗಳಿಂದ ಲೂಮಿನಸ್ ಪವರ್ ಟೆಕ್ನಾಲಜೀಸ್, ಪವರ್ ಬ್ಯಾಕ್‌ಅಪ್ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಐಕಾನ್(Icon), ಪ್ರೀಮಿಯಮ್ ಅತ್ಯಾಧುನಿಕ ನೋಟವಿರುವ ಭಾರತದ ಪ್ರಪ್ರಥಮ ಇನ್ವರ್ಟರ್ ಆಗಿದ್ದು, ಹಿಂದೆಂದೂ ಕಂಡಿರದ ಸುರಕ್ಷತೆ ಮತ್ತು ಸೌಲಭ್ಯದ ಅಂಶಗಳನ್ನು ಹೊಂದಿದೆ. ಪ್ರಬಲವಾದ ಬ್ಯಾಟರಿ ಬ್ಯಾಕ್‌ಅಪ್ ಇರುವ ಅದು, 3 BHK ಮನೆ ಮತ್ತು ಶೋರೂಮ್‌ನ ಲೋಡ್ ಓಡಿಸಲು ಸಜ್ಜಾಗಿದ್ದು, ಇದು ಅದರ ಅತಿದೊಡ್ಡ ಮಾರುಕಟ್ಟೆ ವರ್ಗವಾಗಿದೆ. ಹೈ-ಕೆಪಾಸಿಟಿ(ಅಧಿಕ ಸಾಮರ್ಥ್ಯದ) ಇನ್ವರ್ಟರ್, ವಾಣಿಜ್ಯ ಬಳಕೆದಾರರಿಗೆ ಒಂದು ವರದಾನ. ಶೂನ್ಯ ಶಬ್ದವಿರುವ ಬಲಿಷ್ಟ ಇವರ್ಟರ್ ಆಗಿರುವ ಇದು, 2KVA ಗಿಂತ ಹೆಚ್ಚಿನ ಅಧಿಕ ಸಾಮರ್ಥ್ಯದ ಲೋಡ್‌ಗಳ ಅವಶ್ಯಕತೆ ಇರುವ ಕಚೇರಿಗಳು, ಶೋರೂಮ್‌ಗಳು, ಬ್ಯಾಂಕ್‌ಗಳು, ದಂತ ಚಿಕಿತ್ಸಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ರೆಸ್ಟಾರೆಂಟ್‌ಗಳು, ಸಲೂನ್‌ಗಳು, ಐಸ್-ಕ್ರೀಮ್ ಪಾರ್ಲರ್‌ಗಳು ಮುಂತಾದವುಗಳ ಅವಶ್ಯಕತೆಗಳನ್ನು ಪೂರೈಸುತ್ತದೆ. ಹೈ ಕೆಪಾಸಿಟಿ ಇನ್ವರ್ಟರ್, ಏರ್-ಕಂಡೀಷನರ್, ಎಲ್ಲಾ ಅಡುಗೆಮನೆ ಸಾಧನಗಳು ಇತ್ಯಾದಿ ಭಾರೀ ಲೋಡ್‌ಗಳನ್ನೂ ಸುಲಭವಾಗಿ ಓಡಿಸುತ್ತದೆ.
ಸಿಟಿ ಟುಡೇ ನ್ಯೂಸ್