
ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ ಡಬಲ್ ಇಂಜಿನ್ ಇದ್ದರೆ ಮಾತ್ರ. ಆದರೆ ಕರ್ನಾಟಕದ ಅಭಿವೃದ್ಧಿಯಲ್ಲಿ ರಾಜ್ಯದ ಇಂಜಿನ್ ಕೆಲಸ ಮಾಡಿಲ್ಲ. ಅದನ್ನು ರಾಜ್ಯದ ಜನತೆ ತಿರಸ್ಕರಿಸಿ ಸೂಕ್ತ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಎಷ್ಟು ಬಾರಿ ಬಂದು ಅಬ್ಬರದ ಪ್ರಚಾರ ಮಾಡಿದರು ಸಹ ಕರ್ನಾಟಕ ಜನತೆ ಡಬಲ್ ಇಂಜಿನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲ. ಈ ಬಾರಿಯ ಚುನಾವಣಾ ಫಲಿತಾಂಶ ಬಿಜೆಪಿಗೆ ದಕ್ಷಿಣ ಭಾರತದ 2024ರ ಸಂಸತ್ ಚುನಾವಣೆಗೆ ಎಚ್ಚರಿಕೆಯ ಗಂಟೆಯಾಗಿದೆ.
ಕೇಂದ್ರ ಕಾಂಗ್ರೆಸ್ ನಾಯಕರು ಹಾಗು ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟಿನಲ್ಲಿ ನಡೆದ ಭಾರತ್ ಜೋಡೋ, ಕರ್ನಾಟಕ್ ಜೋಡೋ ಯಾತ್ರೆಯ ಪರಿಣಾಮದ ಫಲಶ್ರುತಿಯನ್ನು ಇಂದು ರಾಜ್ಯದ ಜನತೆ ನೀಡಿದ್ದಾರೆ.
ಈ ಬಾರಿ ನಾನು ಒಬ್ಬ ರಾಜಕೀಯ ತಂತ್ರಗಾರನಾಗಿ. ಬೆಂಗಳೂರಿನ ಮಹದೇವಪುರ, ತಿಪಟೂರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ಸೇರಿದಂತೆ 3 ವಾರ್ ರೂಮ್ ಗಳ ಕೆಲಸಗಳನ್ನು ನಿರ್ವಹಸಿದ್ದೇನೆ. ಆ ಭಾಗದಲ್ಲಿ ಕಂಡುಬಂದ ವಿಷಯಗಳು ಬಡಜನತೆಯ ಸಮಗ್ರ ಜೀವನಕ್ಕೆ ಜನಪರ ಸ್ನೇಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುಬೇಕು ಎಂಬ ಆಶಯಗಳೇ ಕೇಳಿ ಬಂದಿತ್ತು.
ಬೆಲೆ ಏರಿಕೆಯಿಂದ ತತ್ತರಿಸಿರುವ ಬಡಜನತೆ ಸಮರ್ಥ ಜೀವನಕ್ಕಾಗಿ ಮಹಿಳಾ ಮತದಾರರು ಬಹು ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ನೂತನ ಸರ್ಕಾರ ರಚನೆಯಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ವಿಚಾರ ಅಥವಾ ದಿ ಕೇರಳ ಸ್ಟೋರಿ, ಭಜರಂಗದಳ ಈ ಯಾವ ವಿಚಾರಗಳು ಕೂಡ ವೋಟ್ ಬ್ಯಾಂಕ್ ಆಗೋದಿಲ್ಲ ಎಂಬುದನ್ನು ಗಮನಾರ್ಹ ಅಂಶ. ಇದು ಬಿಜೆಪಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಈ ಬಾರಿ ಕರ್ನಾಟಕ ಜನತೆ ಈ ವಿಚಾರಗಳನ್ನು ಮುಖ್ಯವಾಗಿರಿಸಿಕೊಂಡು ಮತ ಚಲಾವಣೆ ಮಾಡಿಲ್ಲ. ಬಹಳ ಮುಖ್ಯವಾಗಿ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷದತ್ತ ಹೆಚ್ಚು ಮುಖ ಮಾಡಿದ್ದು, ಬಿಜೆಪಿಯತ್ತ ಕಡಿಮೆ ವಾಲುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿಯವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು. ಪಿಂಚಣಿದಾರರ ವಿಚಾರಗಳನ್ನು ಒಳಗೊಂಡಂತೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಘೋಷಣೆ ಮಾಡಿದ್ದು. ಕರ್ನಾಟಕ ಜನತೆ ಗ್ಯಾರಂಟಿ ಯೋಜನೆಗಳನ್ನು ಪರಿಗಣಿಸಿ ನಂಬಿಕೆಯಿಂದ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳೆಲ್ಲವೂ ಕಾಂಗ್ರೆಸ್ ನತ್ತ ಮುಖ ಮಾಡಿದೆ.
ನನ್ನ ಗಮನಕ್ಕೆ ಬಹುವಾಗಿ ಕಾಣಿಸಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಚುನಾವಣಾ ಪ್ರಚಾರದ ರೀತಿ ನೀತಿ ಗ್ಯಾರಂಟಿ ಕಾರ್ಡ್ ಗಳ ಮಾಹಿತಿ ಇಲ್ಲದಿರುದು ಜತೆಗೆ ಹೊಂದಾಣಿಕೆಯ ಪ್ರಚಾರ ಈ ವಿಚಾರಗಳ ಮೇಲೆ ನಾನು ಕೆಲಸ ಮಾಡಿದ್ದು ಸಾಧ್ಯವಾದಷ್ಟು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇನೆ.
ಹಿಂದಿ ಭಾಷೆ ವಿಚಾರದಲ್ಲಿ ಹೇರಿಕೆ ಮಾಡುತ್ತಿದೆ ಎಂದು ಬಿಂಬಿತವಾದರೂ, ನಂದಿನಿ ಹಾಲು ವಿಚಾರದಲ್ಲಿ ಬಿಜೆಪಿ ನಿಲುವುಗಳನ್ನು ನಮ್ಮ ರೈತರು ವಿರೋಧಿಸಿದ್ದು ಇದರ ಪರಿಣಾಮವನ್ನು ಹಳೇ ಮೈಸೂರು ಭಾಗದಲ್ಲಿ ನಾವು ಕಾಣಬಹುದು.
ಬಿ. ಎಸ್. ಯಡಿಯೂರಪ್ಪ ಅವರ ಪ್ರಧಾನ ನಾಯಕತ್ವವಿಲ್ಲದೆ ಬಿಜೆಪಿ 2ನೇ ಚುನಾವಣೆಯನ್ನು ಎದುರಿಸಿದೆ. 2013 ರಲ್ಲಿ, ಇದು ವಿಫಲವಾಗಿತ್ತು. 2023 ರಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆಯು ಸಹ ಇದೀಗ ಸುಳ್ಳಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಚಾರಕ್ಕೆ ಬರುವವರೆಗೂ ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಅಂತಹ ನಾಯಕತ್ವ ಇರಲಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯ ನಾಯಕರ ಬಳಿ ಏನಾದರೂ ವಿವರಣೆ ಇದೆಯೇ?
ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 60 ರಿಂದ 70 ಕ್ಷೇತ್ರಗಳಲ್ಲಿ ಯುವಕರಿಗೆ ಮಣೆ ಹಾಕಿರುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಈ ನಿರ್ಧಾರ ಮುಂದಿನ 2024ರ ಸಂಸತ್ ಚುನಾವಣೆಗೆ ಪರಿಣಾಮಕಾರಿ ಎಂಬ ಸೂಚನೆಗಳು ಕಾಣುತ್ತಿವೆ.
40% ರಾಜ್ಯ ಸರ್ಕಾರದ ಅಭಿವೃದ್ಧಿ ಇಂದಿನ ಚುನಾವಣೆಯಲ್ಲಿ ಕಾಣಿಸುತ್ತಿದೆ. ಬಿಜೆಪಿ ಆಪರೇಷನ್ ಕಮಲದ ರೀತಿಯ ಯಾವ ಯೋಜನೆಗಳಿಗೆ ಮಣೆ ಹಾಕದೆ ಕರ್ನಾಟಕ ಜನತೆಯ ತೀರ್ಪನ್ನು ಗೌರವಿಸಿ ಬಿಜೆಪಿ ವಿರೋಧ ಪಕ್ಷವನ್ನು ಅಲಂಕರಿಸುವುದು ಸೂಕ್ತವಾಗಿರುತ್ತದೆ.
ಕರ್ನಾಟಕ ರಾಜ್ಯದ ರಾಜಕೀಯ ಚಿತ್ರಣ ಬಹಳ ಹಿಂದಿನಿಂದಲೂ ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ ಎಂಬ ಮಾತಿನಂತೆ ರಾಜ್ಯದಲ್ಲಿ ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ.
City Today News 9341997936