ನೂತನ ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಕೆ. ಎಚ್. ಮುನಿಯಪ್ಪ ಅಥವಾ ಆರ್.ಬಿ. ತಿಮ್ಮಪೂರ್ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಮತ್ತು 3 ಶಾಸಕರಿಗೆ ಸಚಿವ ಸ್ಥಾನಗಳನ್ನು ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಜಾಂಬವ ಜಾಗೃತಿ ವೇದಿಕೆ, ರಾಜ್ಯ ಸಮಿತಿ ಮನವಿ

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಯಾವ ಫಲಾಪೇಕ್ಷೆಯನ್ನು ಅಪೇಕ್ಷಿಸದೆ ಜನ ಸೇವೆಗೆ ಬದ್ಧರಾಗಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸಚಿವ ತಿಮ್ಮಪೂರ್ ರವರಿಗೆ ಕಾಂಗ್ರೆಸ್ ಪಕ್ಷದಿಂದಲೂ ಸಹ ಸಾಕಷ್ಟು ಬೆಂಬಲ, ಪ್ರೋತ್ಸಾಹ ದೊರಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಪ್ರತಿ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನವರೆಗೂ ಮತ್ತು ಅಭಿಮಾನಿಗಳು ಮತ್ತು ನಾಯಕರು ಜೊತೆಯಾಗಿ ನಿಂತು ಈ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿಯ ಪ್ರಭಾವಿ ಜಲ ಸಂಪನ್ಮೂಲ ಮಾಜಿ ಸಚಿವ ಗೋವಿಂದ ಕಾರಜೋಳರನ್ನು ಹೀನಾಯವಾಗಿ ಸೋಲಿಸುವ ಮೂಲಕ ಪ್ರಚಂಡ ವಿಜಯ ಸಾಧಿಸಿರುವ ಆರ್. ಬಿ. ತಿಮ್ಮಪೂರವರಿಗೆ ನೂತನ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸಾಮಾಜಿಕ ನ್ಯಾಯದಡಿಯಲ್ಲಿ ಆರ್.ಬಿ. ತಿಮ್ಮಪೂರ್‌ರವರಿಗೆ ಉಪ ಮುಖ್ಯಂತ್ರಿ ಸ್ಥಾನ ಮತ್ತು ಸಮುದಾಯದ ಮೂರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾದಿಗ ಸಮುದಾಯ ಮತ್ತು ಜಾಂಬವ ಜಾಗೃತಿ ವೇದಿಕೆ ಒತ್ತಾಯಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ಹೆಚ್ಚು ಸ್ಥಾನ ಪಡೆಯಲು ನಮ್ಮ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಕಳೆದ 75 ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಮುದಾಯವು ಬೆಂಬಲಿಸುತ್ತ ಬಂದಿದೆ. ಅದೇ ರೀತಿ ಹಿಂದಿನ ಸರ್ಕಾರಗಳಲ್ಲಿ ಕನಿಷ್ಠ 6-7 ಮಂದಿಗೆ ಸಚಿವ ಸ್ಥಾನವು ಸಿಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಚಿವ ಸ್ಥಾನಗಳು ಕಡಿಮೆಯಾಗುತ್ತಿವೆ. ಆದುದರಿಂದ ಈ ಬಾರಿ ನೂತನ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಎಐಸಿಸಿ ಅಧ್ಯಕ್ಷರಲ್ಲಿ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಜಾಂಬವ ಜಾಗೃತಿ ವೇದಿಕೆ ಮನವಿ ಮಾಡುತ್ತಿದೆ.
ಆರ್.ಬಿ. ತಿಮ್ಮಾಪೂರ್ 1989 ರಲ್ಲಿ ಪ್ರಪ್ರಥಮ ಬಾರಿ ತಮ್ಮ 27ನೇ ವಯಸ್ಸಿನಲ್ಲಿಯೇ ಮುಧೋಳ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದಾಗ ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷರಾಗಿ ನೇಕಾರರ ಬಗ್ಗೆ ಅಪಾರ ಕಾಳಜಿ ವಹಿಸಿ ಅನುಪಮ ಸೇವೆ ಸಲ್ಲಿಸಿದ್ದಾರೆ.
2000 ರಿಂದ 2004 ರಲ್ಲಿ ಮಾನ್ಯ ಶ್ರೀ ಎಸ್. ಎಮ್. ಕೃಷ್ಣರವರ ಸರಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಮುಧೋಳ ಕ್ಷೇತ್ರಕ್ಕೆ ಹತ್ತು ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ
. 2013 ರಲ್ಲಿ ಮಾನ್ಯ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದರು. ಆಗ ಕಾಂಗ್ರೆಸ್ ಜಯಗಳಿಸಿದ ಸಮಯದಲ್ಲಿ ಹಿನ್ನಡೆ ಕಂಡ ಆರ್ ಬಿ ತಿಮ್ಮಾಪೂರ ಕಾಂಗ್ರೆಸ್ ಪಕ್ಷವು ಮರು ಜೀವ ನೀಡಿತು, ಪಕ್ಷ ನಿಷ್ಠೆಗೆ ಮತ್ತೆ ವಿಧಾನಪರಿಷತ್ ಸದಸ್ಯರನ್ನಾಗಿಸಿತು. ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಶ್ರೀ ಕುಮಾರಸ್ವಾಮಿಯವರ ಸಚಿವ ಸಂಪುಟದಲ್ಲಿ ಸಕ್ಕರೆ ಸಚಿವರಾಗಿ ಕಬ್ಬು ಬೆಳಗಾರ ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿಗಳ ಮನವೊಲಿಸಿ, ಪ್ರತಿ ಟನ್ನ ಕಬ್ಬಿಗೆ ರೂ. 350/- ಹೆಚ್ಚುವರಿ ಸರ್ಕಾರದ ಸಹಯ ಧನ ದೊರಕಿಸಲು ಶ್ರಮಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಬೀರಲು ಕಾರಣವಾದರು.
2018ರ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅಬಕಾರಿ ಖಾತೆ ನಿರ್ವವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗೆ ಅತಿಹೆಚ್ಚು ಶ್ರಮವಹಿಸಿದ್ದಾರೆ.
ಈ ಹಿಂದೆ 2019 ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಶ್ರೀ ರಾಹುಲ್‌ಗಾಂಧಿಯವರು ಮುಧೋಳಕ್ಕೆ ಆಗಮಿಸಿದ ಸಮಯದಲ್ಲಿ ಪ್ರಸುತ್ತ ಕೆಪಿಸಿಸಿ ಉಪಾಧ್ಯಕ್ಷ ಆರ್.ಬಿ. ತಿಮ್ಮಪೂರ ಅವರು ಅತ್ಯಂತ ಚುರುಕಿನಿಂದ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ, ಭರ್ಜರಿ ಕಾರ್ಯಕ್ರಮ ಮಾಡಿ ಕ್ಷೇತ್ರದ ಮಾಹಾಜನತೆ ಹಾಗೂ ಪಕ್ಷದ ಹಿರಿಯ ನಾಯಕರಿಂದ ಮೆಚ್ಚುಗೆ ಪಡೆದಿದ್ದಾರೆ ಎಂದು ಜಾಂಬವ ಜಾಗೃತಿ ವೇದಿಕೆಯ ವತಿಯಿಂದ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಲಾಯಿತು.
City Today News 9341997936