ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದಿಂದ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಶ್ರೀ.ಶಿವರಾಜ ಎಸ್ ತಂಗಡಗಿ ಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಭೋವಿ ಸಮಾಜ ಒತ್ತಾಯಿಸುತ್ತದೆ. ಭೋವಿ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ದಲಿತ ಸಮುದಾಯವಾಗಿದ್ದು, ಅನೇಕ ಶತಮಾನಗಳಿಂದ ಶೋಷಣೆ, ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದ ಸಮಾಜವಾಗಿರುತ್ತದೆ. ಇಂತಹ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕಾದರೆ ಮಾನ್ಯ ಶ್ರೀ ಶಿವರಾಜ ಎಸ್ ತಂಗಡಗಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವುದು ಬಹಳ ಮುಖ್ಯವಾಗಿರುತ್ತದೆ.

ಶ್ರೀ ಶಿವರಾಜ ಎಸ್ ತಂಗಡಗಿ ರವರು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ 3 (ಮೂವರು) ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಮುಖ್ಯಪಾತ್ರ ನಿರ್ವಹಿಸಿರುತ್ತಾರೆ. ಈ ಹಿಂದೆ 2 (ಎರಡು) ಬಾರಿ ಸಚಿವರಾಗಿ ಯಾವುದೇ ಕಳಂಕವಿಲ್ಲದೆ ಯಶಸ್ವಿಯಾಗಿ ಕಾರ್ಯನಿಭಾಯಿಸಿದ್ದು, ಇವರ ಪಾರದರ್ಶಕ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಈಗ ಜರುಗಿದ 2023ರ ಚುನಾವಣೆಯಲ್ಲಿ ನಮ್ಮ ಭೋವಿ ಸಮಾಜವು ಇಡೀ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಶೇ 90% ರಷ್ಟು ಮತದಾನ ಮಾಡಿರುತ್ತೇವೆ. ಕಾಂಗ್ರೆಸ್ ಪಕ್ಷ ಜಯಿಸಿ, ಬಹುಮತ ಗಳಿಸುವಲ್ಲಿ ಭೋವಿ ಸಮಾಜದ ಪಾತ್ರವೂ ಕೂಡ ಇದೆ. ಈ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಭೋ ಸಮಾಜವನ್ನು ಮುಖ್ಯವಾಹಿನಿಗೆ ತರಲು ಹಾಗೂ ರಾಜ್ಯದಲ್ಲಿರುವ ಬೋವಿ ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ಮೂಲಕ ಸಾಮಾಜಿಕ ನ್ಯಾಯದಡಿ ಶ್ರೀ ಶಿವರಾಜ ಎಸ್ ತಂಗಡಗಿ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಖರ್ಗೆಯವರಲ್ಲಿ, ಸಿ.ಎಲ್.ಪಿ. ನಾಯಕರಾದ ಶ್ರೀ ಸಿದ್ದರಾಮಯ್ಯ ರವರಲ್ಲಿ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಇವರಲ್ಲಿ ಕರ್ನಾಟಕ ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್, ಸುರ್ಜಿವಾಲಾ ರವರಲ್ಲಿ ಈ ಮೂಲಕ ಒತ್ತಾಯಿಸುತ್ತೇವೆ ಎಂದು ಡಾ|| ಹೆಚ್. ರವಿ ಮಾಕಳಿ ರಾಷ್ಟ್ರೀಯ ಅಧ್ಯಕ್ಷರು, ಭೋವಿ (ವಡ್ಡರ) ಸಮಾಜ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು
ಪತ್ರಿಕಾ ಗೋಷ್ಥಿಯಲ್ಲಿ ರವಿ ಪೂಜಾ, ಹಾವೇರಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮುಖಂಡರು, ಭೋವಿ (ವಡ್ಡರ) ಸಮಾಜ, ಹುಲ್ಲಪ್ಪ ಹಲ್ಲೂರು ಬಾಗಲಕೋಟೆ ಜಿಲ್ಲಾಧ್ಯಕ್ಷರು, ಭೋವಿ (ವಡ್ಡರ) ಸಮಾಜ, ಮತ್ತು ಬೊವಿ ಸಮಾಜದ ಮುಖಂಡರುಗಳು ಉಪಸ್ತಿತರಿದ್ದರು.
City Today News 9341997936