
ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ರೆಡ್ಡಿ ಜನಾಂಗದ ಲಕ್ಷಾಂತರ ಕುಟುಂಬದವರು ವಾಸುಸಿತ್ತಿದ್ದು, ಇದೇ 13-05-2023 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ರೆಡ್ಡಿ ಜನಾಂಗದವರಾದ ಸುಮಾರು 12 ಜನ ಕಾಂಗ್ರೇಸ್ ಶಾಸಕರುಗಳು ಜಯಗಳಿಸಿದ್ದು, ಉಳಿದ ಪಕ್ಷಗಳಲ್ಲಿ ರೆಡ್ಡಿ ಜನಾಂಗದ 4 ಜನ ಶಾಸಕರು ಹಾಗೂ ಪಕ್ಷೇತರಾಗಿ ‘ಒಬ್ಬ ಶಾಸಕರು ಜಯಗಳಿಸಿರುತ್ತಾರೆ. ಕಾಂಗ್ರೇಸ್ ಪಕ್ಷದಲ್ಲಿ 135 ಜನ ಶಾಸಕರಾದರೆ ರೆಡ್ಡಿ ಜನಾಂಗದ ಶೇಕಡ 9% ಶಾಸಕರು ಗೆದ್ದಿದ್ದು, ಈ ಪೈಕಿ ನಮ್ಮ ರೆಡ್ಡಿ ಜನಾಂಗದ ಹಿರಿಯ ಮುತ್ಸದಿ ಜನಾಂಗದ ನಾಯಕ ಹಾಗೂ ಸೋಲಿಲ್ಲದ ಸರದಾರೆಂಬ 8 ಬಾರಿ ಸತತವಾಗಿ ಜಯಗಳಿಸಿ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಖ್ಯಾತಿಯಾದ ಸನ್ಮಾನ್ಯ ಶ್ರೀ.ರಾಮಲಿಂಗಾರೆಡ್ಡಿ ರವರಿಗೆ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯನವರ ಕರ್ನಾಟಕ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಿಸಿಕೊಳ್ಳಬೇಕಾಗಿ ಮತ್ತು ನಮ್ಮ ಜನಾಂಗದ ಜನಾಂಗದ ಹಿರಿಯ ಮುಖಂಡರಾದ ಹಾಗೂ ಮಾಜಿ ಮಂತ್ರಿಗಳಾದ ಸನ್ಮಾನ್ಯ ಶ್ರೀ.ಹೆಚ್.ಕೆ.ಪಾಟೀಲ್ ರವರನ್ನು ಸಹ ಉಪ ಮುಖ್ಯ ಮಂತ್ರಿಯಾಗಿ ನೇಮಿಸಿಕೊಳ್ಳಬೇಕಾಗಿ ಮತ್ತು ಇನ್ನು ಉಳಿದಂತಹ ನಮ್ಮ ಜನಾಂಗದ ಶಾಸಕರುಗಳನ್ನು ಜಿಲ್ಲವಾರು ಪರಿಗಣಿಸಿ ಮಂತ್ರಿ ಸ್ಥಾನವನ್ನು ರೆಡ್ಡಿ ಜನಾಂಗದ ಅಭಿವೃದ್ಧಿಗಾಗಿ ನೀಡಿ ಪ್ರೀತಿಯ ಪಾತ್ರರಾಗಬೇಕಾಗಿ ಈ ಮೂಲಕ ಪ್ರಾಥಿಸಿಕೊಳ್ಳುತ್ತೇವೆ ಎಂದು ಪಿ.ಚಂದ್ರ ಶೇಖರ್ ರೆಡ್ಡಿ,ಅಧ್ಯಕ್ಷರು ಮತ್ತು ಎಂ.ಸಿ.ಪ್ರಭಾಕರ ರೆಡ್ಡಿ,(ಪ್ರಕಾಶ್ ರೆಡ್ಡಿ),ಪ್ರಧಾನ ಕಾರ್ಯದರ್ಶಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.
City Today News 9341997936