ಕರ್ನಾಟಕ ರಾಜ್ಯದಲ್ಲಿ ಸುಮಾರು 45 ಲಕ್ಷದಷ್ಟು ಮತದಾರರು ಬಂಜಾರ ಸಮುದಾಯಕ್ಕೆ ಸೇರಿದವಾರಗಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರು, ಕೆಪಿಸಿಸಿಯ ಮುಖ್ಯವಕ್ತಾರರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಶ್ರೀ ಪಕಾಶ, ಕೆ ರಾಠೋಡ ರವರ ತಂದೆಯವರಾದ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ದಿ||ಕೆ.ಟಿ.ರಾಠೋಡ ರವರು ಬಂಜಾರಾ ಸಮಾಜಕ್ಕೆ ಪರಿಶಿಷ್ಠ ಜಾತಿಯಲ್ಲಿ ಸೇರಿಸಲು ಮುಖ್ಯ ಕಾರಣೀಭೂತರಾಗಿದ್ದರು. ಚುನಾವಣಾ ಪೂರ್ವದಲ್ಲಿ ಒಳ ಮೀಸಲಾತಿ ಘೋಷಣೆ ಮಾಡಿದ ಬಿಜೆಪಿ ಸರಕಾರದ ವಿರುದ್ಧ ಶ್ರೀ ಪ್ರಕಾಶ.ಕೆ.ರಾಠೋಡ ರವರು ವಿರೋಧ ವ್ಯಕ್ತಪಡಿಸಿ ಬಂಜಾರಾ ಸಮಾಜವನ್ನು ಎಚ್ಚರಗೊಳಿಸಿ 135 ಸ್ಥಾನಗಳು ಕಾಂಗ್ರೇಸ್ ಪರವಾಗಿ ಬರಲು ಪ್ರಮುಖ ಪಾತ್ರವಹಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಪ್ರಜಾಧ್ವನಿ ಕಾರ್ಯಕ್ರಮದ ಸಂಚಾಲಕರಾಗಿ ಸುಮಾರು 102 ಮತ ಕ್ಷೇತ್ರದಲ್ಲಿ ಪ್ರವಾಸ ಮಾಡಿ 45 ಕ್ಕಿಂತ ಹೆಚ್ಚು ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಬಂಜಾರಾ ಭಾಷೆಯಲ್ಲಿ ಕೂಡ ಮಾತನಾಡಿ ಬಂಜಾರ ಸಮುದಾಯವು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಹಾಕಿಸಲು ಕಾರಣೀಭೂತರಾಗಿದ್ದಾರೆ.

ಕೆಪಿಸಿಸಿ ಮುಖ್ಯ ವಕ್ತರರಾಗಿ ಹಲವಾರು ಬಾರಿ ಪತ್ರಿಕಾ ಗೋಷ್ಠಿಯನ್ನು ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿಧಾನ ಪರಿಷತ್ತಿನಲ್ಲಿಯೂ ಕೂಡ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿ ಬಿಜೆಪಿ ಸರಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಸರಕಾರ ಒಳ ಮೀಸಲಾತಿ ನಿರ್ಣಯವನ್ನು ಖಂಡಿಸಿ ಬಂಜಾರಾ ಸಮಾಜಕ್ಕೆ ಅನ್ಯಾಯವಾಗಿರುವುದನ್ನು ಪ್ರತಿಯೊಂದು ಜಿಲ್ಲೆಗೆ ಹೋಗಿ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕೆಂದು ಜಾಗೃತ ಮೂಡಿಸಿದರು. ಇದರ ಪರಿಣಾಮವಗಿ ಬಂಜಾರ ಸಮುದಾಯವು ಕಾಂಗ್ರೇಸ್ ಪರ ದೊಡ್ಡ ಪ್ರಮಾಣದಲ್ಲಿ ಮತ ಹಾಕಿ ಕಾಂಗ್ರೇಸ್ ಸರ್ಕಾರ ಬರುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
ಹಾಗಾಗಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಸಂಘಟನೆ ಮತ್ತು ಏಳೆಗಾಗಿ ಸಾಕಷ್ಟು ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿ ಕರ್ನಾಟಕ ರಾಜ್ಯದ ಸುಮಾರು 45: ಲಕ್ಷ ಬಂಜಾರಾ ಸಮುದಾಯದ ಪರವಾಗಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರು, ಕೆಪಿಸಿಸಿಯ ಮುಖ್ಯವಕ್ತಾರರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಶ್ರೀ ಪ್ರಕಾಶಕೆ.ರಾಠೋಡ ರವರಿಗೆ ಸಚಿವ ಸ್ಥಾನ ನೀಡಲು, ಕಾಂಗ್ರೇಸ್ ಪಕ್ಷದ/ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀಯವರಿಗೆ, ಸೋನಿಯಾ ಗಾಂಧಿ ಜೀ, ರಾಹುಲ್ ಗಾಂಧಿ ಜೀ ಹಾಗೂ ಪ್ರಿಯಾಂಕಾ ಗಾಂಧಿ ಜೀ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಸಿ.ವೇಣುಗೋಪಾಲ ಹಾಗೂ ಕರ್ನಾಟಕ ಉಸ್ತುವಾರಿ ಸುರ್ಜೆವಾಲ ಸಾಹೇಬರು, ರಾಜ್ಯದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರಿಗೆ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ರವರಿಗೆ ಹಾಗೂ ಪಕ್ಷದ ಪ್ರಮುಖರಿಗೆ ವಿನಮ್ರವಾಗಿ ವಿನಂತಿಸುತ್ತೇವೆ.
ಶ್ರೀ ಪ್ರಕಾಶ.ಕೆ.ರಾಠೋಡ ರವರಿಗೆ ಸಚಿವ ಸ್ಥಾನ ನೀಡುವುದರಿಂದ ಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಬಂಜಾರಾ ಸಮಾಜವು ಕಾಂಗ್ರೇಸ್ ಪಕ್ಷದ ಪರವಾಗಿ ನಿಲ್ಲಲಿದೆ ಅಥವಾ ಮತ ಚಲಾಯಿಸಲಿದೆ. ಹಾಗಾಗಿ ರಾಜ್ಯದ ಬಂಜಾರಾ ಸಮಾಜದ ಪರವಾಗಿ ಸಚಿವಸ್ಥಾನ ನೀಡುವ ಸಂದರ್ಭದಲ್ಲಿ ಶ್ರೀ ಪ್ರಕಾಶ ರಾಠೋಡರವರಿಗೆ ಸಚಿವ ಸ್ಥಾನ ನೀಡಲು ರಾಜ್ಯದ ಬಂಜಾರಾ ಸಮಾಜ ನಿರ್ಣಯಿಸಿ ತಮ್ಮಲ್ಲಿ ಆಗ್ರಹ ಪೂರ್ವಕವಾಗಿ ವಿನಂತಿಸುತ್ತೇವೆವಿನಂತಿಸುತ್ತೇವೆ ಎಂದು ಅರ್ಜುನ ರಾಠೋಡ, ಮಾಜಿ ಅಧ್ಯಕ್ಷರು, ಜಿ.ಪಂ ವಿಜಯಪೂರ ರವರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಥಿಯಲ್ಲಿ ಎಂ.ಎಸ್ ನಾಯಕ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿ.ಪಂ ವಿಜಯಪೂರ, ಅಶೋಕ.ರಾಠೋಡ, ರಾಷ್ಟ್ರೀಯ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷರು,ಬೆಂಗಳೂರು ಹಾಗೂ ಸದಸ್ಯರು, ಮಹಾಲಕ್ಷ್ಮಿ ಬ್ಯಾಂಕ್, ವಿಜಯಪೂರ, ರಾಜಾ ನಾಯಕ, ಅಧ್ಯಕ್ಷರು, ಆಲ್ ಇಂಡಿಯಾ ಬಂಜಾರ ಸೇವಾ ಸಂಘ,ಬೆಂಗಳೂರು ಬಿ.ಬಿ ನಾಯಕ್, ಸಮಾಜದ ಮುಖಂಡರು, ವಿಜಯಪೂರ ಮತ್ತು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಮುಖಂಡರುಗಳು ಉಪಸ್ತಿತರಿದ್ದರು.
City Today News 9341997936