24/03/2023 ಶುಕ್ರವಾರದಂದು ನಡೆದ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡ ಕರ್ನಾಟಕ ರಾಜ್ಯ ಸರ್ಕಾರದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ತೆಗೆದುಕೊಂಡ ನಿರ್ಧಾರವು ಅತ್ಯಂತ ಅವೈಜ್ಞಾನಿಕ

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸಿನಂತೆ ಎಸ್‌.ಸಿ. ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವಂತೆ 3 ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರವನ್ನು ದಿನಾಂಕ 24/03/2023 ಶುಕ್ರವಾರದಂದು ನಡೆದ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡ ಕರ್ನಾಟಕ ರಾಜ್ಯ ಸರ್ಕಾರದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ತೆಗೆದುಕೊಂಡ ನಿರ್ಧಾರವು ಅತ್ಯಂತ ಅವೈಜ್ಞಾನಿಕವಾಗಿದ್ದು, ಈ ವರ್ಗಿಕರಣವನ್ನು ವರ್ಗ 4 ರಲ್ಲಿ ಗುರುತಿಸಿರುವ 49 ಸಮುದಾಯಗಳು ಸಂಪೂರ್ಣವಾಗಿ ವಿರೋಧಿಸುತ್ತದೆ.

ಕಾರಣ ಇದುವರೆಗೂ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ ಗುಡಿಸಲು, ಗುಡಾರ, ಕೌದಿ ಜೋಪಡಿಗಳಲ್ಲಿ ವಾಸಿಸುತ್ತಾ ತಮ್ಮ ಕುಲ ಕಸುಬು ಮತ್ತು ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿರುವ ಇದುವರೆಗೂ ಶಾಲೆಯ ಮುಖವನ್ನೇ ನೋಡದ ಜಾಕಿ ಪ್ರಮಾಣ ಪತ್ರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದೇ ದಾಖಲೆಗಳಿಲ್ಲದೆ ವಿಳಾಸವಿಲ್ಲದೇ, ಶಿಕ್ಷಣವಿಲ್ಲದೆ ಊರಿಂದ ಊರಿಗೆ ಅಲೆದಾಡುತ್ತಿರುವ ಇಂತಹ ಅಲೆಮಾರಿ ಸಮುದಾಯಗಳೆಂದು 4ನೇ ವರ್ಗದಲ್ಲಿ 49 ಜಾತಿಗಳನ್ನು ಗುರುತಿಸಿ ಕೇವಲ1% ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದೆ.

ಈ ಹಿಂದೆ ಪ.ಜಾತಿಗೆ ಇದ್ದು 15% ಮೀಸಲಾತಿಯನ್ನು ಇದುವರೆಗೂ ಯಾವ ಸಮುದಾಯಗಳು ಹೆಚ್ಚಿನ ಮಟ್ಟದಲ್ಲಿ ಮೀಸಲಾತಿಯನ್ನು ಅನುಭವಸಿದ್ದವೋ ಆದೇ ಸಮುದಾಯಗಳಿಗೆ ಈ ಸದಾಶಿವ ಆಯೋಗದ ವರದಿಯಲ್ಲಿಯೂ ಸಹ ಅವರಿಗೇನ ಹೆಚ್ಚಿನ ಪ್ರಧಾನ ನೀಡಿ ಹಂಚಿಕೆ ಮಾಡಿದೆ.

ಹಾಗೂ ಇತ್ತೀಚಿನ ದಿನಗಳಲ್ಲಿ ಶೇಕಡ 15% ಇದ್ದ ಮೀಸಲಾತಿಯನ್ನು 17% ಹೆಚ್ಚಿಸಿದ್ದು, ಈ ಹೆಚ್ಚಳದ ಮೀಸಲಿನಲ್ಲಿ ಆಸ್ಪತ್ರೆ ಸಮುದಾಯಗಳಿಗೆ 11.2% ಮಾದಿಗ ಮತ್ತು ಹೊಲಿಯ ಮತ್ತು ಹೊಲಿಯ ಸಂಬಂಧಿತ ಜಾತಿ ” % ಹೆಚ್ಚಿಸಿ ಮೀಸಲನ್ನು ಈ ಎರಡು ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿದ್ದಾರೆ.

ಕೇವಲ ಜನ ಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ವರ್ಗಿಕರಣ ಮಾಡದೇ, ಇದುವರೆಗೂ ಯಾವ ಯಾವ ವರ್ಗಗಳು ಈ 15% ಮೀಸಲಾತಿಯನ್ನು ಬಳಸಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ಸಮಾಜಿಕವಾಗಿ ಅಭಿವೃದ್ಧಿ ಹೊಂದಿವೆಯೋ ಅಂತಹ ಜಾತಿಗಳಿಗೆ ಸ್ವಲ್ಪ ಕಡಿಮೆ ಮೀಸಲು ನೀಡಿ, ಇದುವರೆಗೂ ಶಾಲೆಯ ಮುಖವನ್ನೇ ನೋಡದ ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಮೀಸಲಿನ ವಾಸನೆಯನ್ನು ತಿಳಿದಿರುವ ಯಾವುದೇ ಸರ್ಕಾರಿ ನೌಕರಿ, ರಾಜಕೀಯ ಸ್ಥಾನ ಮಾನ ಪಡೆಯದೇ ಎಲ್ಲಾ ರಂಗಗಳಲ್ಲೂ ಹಿಂದುಳಿದಿರುವ ಅಲೆಮಾರಿ 49 ಸಮುದಾಯಗಳು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿರುವ 4ನೇ ವರ್ಗದ ಸಮುದಾಯಗಳಿಗೆ ಈಒಳ ಮೀಸಲು ನೀಡಿರುವ 1% ಮಿಸಲು ಮೂಗಿಗೆ ತುಪ್ಪ ಸವರಿದಂತಿದೆ ಹಾಗೂ ಈ ಸಮುದಾಯಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ಇಂತಹ ಅಲೆಮಾರಿ ಪ.ಜಾತಿ ಸೂಕ್ಷ್ಮ, ಆತೀ ಸೂಕ್ಷ್ಮ ಕುಟುಂಬಗಳು ಮೀಸಲಾತಿಯಿಂದ ವಂಚಿತವಾಗಿದ್ದು, ಆಲೆಮಾರಿ ಸಮುದಾಯದ 49 ಜಾತಿಗಳನ್ನು ಈ ಸಮುದಾಯಕ್ಕೆ 3% ಮೀಸಲನ್ನು ನೀಡಿ ಸಮುದಾಯಗಳನ್ನು ಉಳಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಿಕ ನ್ಯಾಯಾ ನೀಡಬೇಕೆಂದು ಒತ್ತಾಯಪಡೆಸುತ್ತೇವೆ.

ಕರ್ನಾಟಕ ರಾಜ್ಯ ಎಸ್‌ಸಿ/ಎಸ್ಟಿ ಆಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯದ ಸಂಘಗಳು ಒತ್ತಾಯಿಸುತ್ತವೆ. ಒಂದು ವೇಳೆ ನಮಗೆ 3% ಮೀಸಲು ನೀಡದೆ ಇದ್ದಲ್ಲಿ ಮುಂದಿನ ವಿಧಾಮದ ಚುನಾವಣೆಯಲ್ಲಿ ಮೇಲಾಣಿಸಿದ 49 ಜಾತಿಗಳಿಂದ ಮತದಾನವನ್ನು ಬಹಿಷ್ಕಾರ ಮಾಡುತ್ತೇವೆ, ಜನಸಂಖ್ಯೆ ಆಧಾರದ ಮೇಲೆ ಪೀಸಲಾತಿಯನ್ನು ಕೊಟ್ಟರೆ ನಮ್ಮ ಸಮುದಾಯಗಳಿಗೆ ಅನ್ಯಾಯವಾಗುತ್ತದೆ, 49 ಸಮುದಾಯಗಳು ಸೂಕ್ಷ್ಮ ಅತೀ ಸೂಕ್ಷ್ಮ ಸಮುದಾಯಗಳಿದ್ದು, ಇಂತಹ ಸಮುದಾಯಗಳಿಗೆ ಕವ KNFO 3% ಕೊಡಬೇಕೆಂದು ಸರ್ಕಾರಕ್ಕೆ ಸಂಘಟನೆ ಮುಖಾ೦ಕರ ಒತ್ತಾಯ ಮಾಡುತ್ತೇವೆ. ಎಸ್ಸಿಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲೂಕು ಘಟಕ ಹರಪನಹಳ್ಳಿ ಈ ಮನವಿ ಸಲ್ಲಿಸಿದ್ದೇವೆ.

-: ಹಕ್ಕು ಒತ್ತಾಯಗಳು –

1) ಅಲೆಮಾರಿ ಪ್ರಜಾಕಿ 49 ಸಮುದಾಯಗಳು ಸಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳೆದು ಪರಿಗಣಿಸಿ 3% 2) ನಿವೇಶನ ರಹಿತ ಆಲೆಮಾರಿ ಕುಟುಂಬಗಳಿಗೆ ಹರಪನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಕಂದಾಯ ಇಲಾಖೆಗೆ ಸೇರಿರುವ ಜಮೀನನ್ನು 10-00 ಎಕರೆ ಅಲೆಮಾರಿ ಎಸ್.ಸಿ/ಎಸ್.ಟಿ ಸಮುದಾಯಗಳಿಗೆ ಮೀಸಲಿಸಬೇಕು. 3) ಹರಪನಹಳ್ಳಿ: ಟೌನ್ ಅಲೆಮಾರಿ ಹಂದಿಜೋಗಿ: 40 ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ಅರ್ಜಿಸಲ್ಲಿಸಿದವರಿಗೆ, ಜಾತಿ ಪ್ರಮಾಣ ಪತ್ರ ನೀಡಬೇಕು. 4) ಹರಪನಹಳ್ಳಿ ತಾಲೂಕು, ಹಲುವಾಗಲು ಗ್ರಾಮದಲ್ಲಿ ಅಲೆಮಾರಿ ಸಿಂಧೂ‌ ಸಮುದಾಯಕ್ಕೆ ಸರ್ವೆನಂಬರ್ 4 ಮತ್ತು ಯರಬಳ್ಳಿ 500 ಎಕರೆ ಈ ಸಮುದಾಯದ ಹೆಸರಿಗೆ ಕಾಯ್ದಿರಿಸಬೇಕು. 5) ಹರಪನಹಳ್ಳಿ ತಾಲೂಕು ಮತ್ತು ಗ್ರಾಮಾಂತರದಲ್ಲಿ ವಾಸವಾಗಿರುವ ಅಲೆಮಾರಿ ಸಮುದಾಯದವರಿಗೆ ರುದ್ರಭೂಮಿಯನ್ನು ಕಾಯ್ದಿರಿಸಬೇಕು. 6) ಹರಪನಹಳ್ಳಿ ತಾಲೂಕು ಅತಿಹೆಚ್ಚು ಕುಟುಂಬಗಳ ವಾಸವಾಗಿರುವ ಗ್ರಾಮಗಳಲ್ಲಿ ಗ್ರಂಥಾಯವನ್ನು ಮಾಡಿಕೊಡುವುದರ 7) 74 ಅಲೆಮಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಾಗ ಜಾತಿ ಪ್ರಮಾಣ ಪತ್ರದ ಕಾಲಂನಲ್ಲಿ ಆಲೆಮಾರಿ ಜನಾಂಗವೆಂದು ನಮೂದು ಮಾಡಬೇಕು. 8) ಅಲೆಮಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 74 ಸಮುದಾಯ ಕುಟುಂಬದವರಿಗೆ ಜಾತಿ ಪ್ರಮಾಣ ಪತ್ರ ನೀಡುವಾಗ ಯಾವುದೇ ಮಾನದಂಡವನ್ನು ಅನುಸರಿಸದೇ ಜಾತಿ ಪ್ರಮಾಣ ಪತ್ರ ನೀಡಬೇಕು. 9) ಅಲೆಮಾರಿ ಪ್ರಜಾತಿ/ಪವರ್ಗ ಸಮುದಾಯದವರು 53-57 ರಲ್ಲಿ ಅರ್ಜಿಸಲ್ಲಿಸಿದವರಿಗೆ ಪಟ್ಟ ಮಂಜೂರಾತಿ ಮಾಡುವ ಬಗ್ಗೆ 10) ಹರಪನಹಳ್ಳಿ ತಾ, ಆಶ್ರಯ ಕಾಲೋನಿ, ಹರಿಹರ ರಸ್ತೆ, ಆದಿ ಬಸವೇಶ್ವರ ನಗರದಲ್ಲಿ ವಾಸವಾಗಿರುವ ಕುಟುಂಬಗಳಿಗೆ ನ್ಯಾಯಾಬೆಲೆ ಅಂಗಡಿ ಮಾಡಿಕೊಡುವ ಬಗ್ಗೆ. 11) ಹರಪನಹಳ್ಳಿ ತಾ, ಆಶ್ರಯ ಕಾಲೋನಿ, ಹರಿಹರ ರಸ್ತೆ, ಆದಿ ಬಸವೇಶ್ವರ ನಗರದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಗ್ರಂಥಾಲಯ ಮಾಡಿಕೊಡುವ ಬಗ್ಗೆ 12) ಹರಪನಹಳ್ಳಿ ತಾ, ಆಶ್ರಯ ಕಾಲೋನಿ, ಹರಿಹರ ರಸ್ತೆ, ಆದಿ ಬಸವೇಶ್ವರ ನಗರದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಬಸ್ಸಿನ ಉಪ ತಂಗುದಾಣ (ಸಬ್‌ಸ್ಟೇಜ್) ಮಾಡಿಕೊಡುವ ಬಗ್ಗೆ. 13) ಹರಪನಹಳ್ಳಿ ತಾ, ಆಶ್ರಯ ಕಾಲೋನಿ, ಹರಿಹರ ರಸ್ತೆ, ಆದಿ ಬಸವೇಶ್ವರ ನಗರದಲ್ಲಿ ವಾಸವಾಗಿರುವ ಕುಟುಂಬಗಳಿಗೆ ರುದ್ರಭೂಮಿಗಾಗಿ ಜಾಗ ಕಲ್ಪಿಸುವ ಬಗ್ಗೆ 14) ಅಲೆಮಾರಿ ಕುಟುಂಬಗಳು ಹರಪನಹಳ್ಳಿ ತಾಲೂಕಿನಲ್ಲಿ ವಾಸವಾಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ ಸದರಿ ವಾಸ 5 ವರ್ಷ ನಿವಾಸಿಯಾಗಿರುವ ಕುಟುಂಬದವರಿಗೆ ನೀಡಬೇಕು. 15) 72 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕುಲಶಾಸ್ತ್ರ ಅಧ್ಯಾಯನ ಆಯೋಗವನ್ನು ಮಾಡಬೇಕು ಎಂದು ವಿ.ಸಣ್ಣ ಅಜ್ಜಯ್ಯ, (ರಾಜ್ಯ ಕಾರ್ಯಧ್ಯಕ್ಷರು,  ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ ಆಲೆಮಾರಿ ಬುಕಟ್ಟು ಮಹಾಸಭಾ (ರಿ) ಬೆಂಗಳೂರು) ರವರು ಮನವಿ ನೀಡುವುದರ ಮೂಲಕ ಕರ್ನಾಟಕ ರಾಜ್ಯ ಚುನಾವಣ ಅಧಿಕಾರಿಗಳನ್ನು ವಿನಂತಿಸಿದರು.ಪ್ರತಿಭಟನೆಯಲ್ಲಿ ಸಮುದಾಯದ ಎಲ್ಲಾ ನಾಯಕರುಗಳು ಹಾಜರಿದ್ದರು.

City Today News 9341997936