ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಎ . ಅನಿಲ್‌ ಅಂಟೋನಿ , ವರ್ತೂರು ರವರಿಂದ ಅಂಬೇಡ್ಕರ್‌ರವರ 131 ನೇ ಜಯಂತ್ಯೋತ್ಸವ

ಭಾರತರತ್ನ , ಸಂವಿಧಾನ ಶಿಲ್ಪಿ ಡಾ . ಬಿ.ಆರ್.ಅಂಬೇಡ್ಕರ್ ರವರ 131 ನೇ ಜಯಂತ್ಯೋತ್ಸವ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹದೇವಪುರ ವಿಧಾನ ಸಭಾ ಕ್ಷೇತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ 131 ನೇ ಜಯಂತ್ಯೋತ್ಸವದಲ್ಲಿ ಎ . ಅನಿಲ್‌ ಅಂಟೋನಿ , ಮಾಲಾರ್ಪಣೆ ಮಾಡಿ ಡಾ. ಬಿ.ಆರ್.ಅಂಬೇಡ್ಕರ್ ರವರು ಈ ದೇಶದ ಕೊಟ್ಯಂತರ ನೊಂದ ಧ್ವನಿ ಇಲ್ಲದ ಜನರಿಗೆ ಧ್ವನಿಯಾದವರು , ಧ್ವನಿಕೊಟ್ಟ ಧೀಮಂತ ನಾಯಕರು . ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ತಿಳಿದಿದೆ . ಸಂವಿಧಾನದಿಂದ ಎಲ್ಲರಿಗೂ ಸಮಾನ ಹಕ್ಕುಸಮಾನ ಅವಕಾಶ ದೊರಕಿದೆ .ಡಾ. ಬಾಬ ಸಾಹೇಬ್ ಅಂಬೇಡ್ಕರ್ ಜೀವನ ಪೂರ್ತಿ ಹೋರಾಟದ ಬದುಕು, ಲಂಡನ್ ತೆರಳಿ ಅಲ್ಲಿ ಬ್ಯಾರಿಸ್ಟರ್ ವಿದ್ಯಾಭ್ಯಾಸ ಮಾಡಿ ನಮಗೆ ಉತ್ತಮ ಸಂವಿಧಾನ ಕೊಟ್ಟಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶ, ಸಿದ್ಧಾಂತ ಮತ್ತು ವಿಚಾರಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡರೆ ಸಮಾಜ ಅಭಿವೃದ್ಧಿ ಸಾಧ್ಯ ಎಂದರು .

City Today News

9341997936