ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷೀಯ ಅಭ್ಯರ್ಥಿ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗದ ಪತ್ರಿಕಾ ಪ್ರಕಟಣೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗ ಪತ್ರಿಕಾ ಪ್ರಕಟಣೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆ : 19-12-2021ರ ಭಾನುವಾರದಂದು ` ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಮತದಾನ ನಡೆಯಲಿದೆ . ಈ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆರ್ . ಲಕ್ಷ್ಮೀಕಾಂತ್ ಆದ ನಾನು ಸ್ಪರ್ಧಿಸುತ್ತಿದ್ದೇನೆ . ಕಳದ ಮೂವತ್ತು ವರ್ಷಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಹಾಲಿ ಉಪಾಧ್ಯಕ್ಷರಾಗಿರುವ ನಾನು ನಮ್ಮ ವಿಪು ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು ಅವುಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಮೂಡಿದ ವಿಪು ಬಾಂಧವರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡುತ್ತೇನೆ . ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡತನ ರೇಖೆಗಿಂತ ಕಡು ಬಡವರಿದ್ದು , ಅವರ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ .

ಅಂತಹ ಹಲವು ಹತ್ತು ಯೋಜನೆಗಳನ್ನು ನಾನು ಅನುಷ್ಠಾನಗೊಳಿಸಲು ಉತ್ಸುಕನಾಗಿದ್ದು ಅವುಗಳಲ್ಲಿ ಪ್ರಮುಖವಾದ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . 1. ಮಹಾಸಭಾದ ಬೈಲಾ ತಿದ್ದುಪಡಿ ಮಾಡಿ ಆಡಳಿತ ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕರಣ ಮಾಡುವುದು 2. ಮಹಾಸಭಾದ ಸದಸ್ಯತ್ವವನ್ನು ಕನಿಷ್ಠ 1 ಲಕ್ಷದ ಸದಸ್ಯರನ್ನು ಒಗ್ಗೂಡಿಸುವುದು 3. ಈಗಿರುವ ಮಹಿಳಾ ವಸತಿ ನಿಲಯದ ಪಕ್ಕದಲ್ಲಿಯೇ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡುವುದು 4. ವಿಪ್ರ ಸದಸ್ಯರಿಗೆ ಅನುಕೂಲವಾಗುವಂತ ಉಚಿತ ಡಯಾಲಿಸಿಸ್ ಕೇಂದ್ರಗಳು ಆರೋಗ್ಯ ಸಹಾಯವಾಣಿ ಸ್ಥಾಪಿಸುವುದು . 5.ಬಡ ವಿದ್ಯಾರ್ಥಿಗಳಿಗಾಗಿ ಈಗಿರುವ ವಿದ್ಯಾನಿಧಿ ಹಾಗೂ ಕೇಂದ್ರ ನಿಧಿಗಳ ಠೇವಣಿಯನ್ನು ಹತ್ತು ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು . 6. ವಿಪ್ರ ಯುವಕರನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸುವ ಸಲುವಾಗಿ ಐಎಎಸ್ ಹಾಗೂ ಕೆಎಎಸ್ ಉಚಿತ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು . 7.ಮಹಿಳಾ ಉದ್ಯೋಗಿಗಳು ಹಾಗೂ ಯುವಕರಿಗಾಗಿ ಆರ್ಥಿಕ ಸದೃಢತೆಯನ್ನು ತರುವ ಸಲುವಾಗಿ ಹಣಕಾಸಿನ ನೆರವು ನೀಡುವ ಬಗ್ಗೆ ಯೋಜನೆಗಳು

8. ಕನಿಷ್ಠ 2 ವರ್ಷಗಳಿಗೊಮ್ಮೆ ರಾಜ್ಯಮಟ್ಟದ ವಿಪ್ರ ಸಮ್ಮೇಳನವನ್ನು ಆಯೋಜಿಸುವುದು ಸಂಘಟನಾತ್ಮಕವಾಗಿ ಜಿಲ್ಲಾ ಮಟ್ಟದಲ್ಲಿ ಬ್ರಾಹ್ಮಣ ಸಮುದಾಯವನ್ನ ಬಲಿಷ್ಠಗೊಳಿಸುವುದು . 9. ಅಶಕ್ತ ವಿಪ್ರ ಸದಸ್ಯರುಗಳಿಗೆ ಎಪಿಎಲ್‌ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಸರ್ಕಾರಿ ಸವಲತ್ತುಗಳಿಗೆ ಅರ್ಹ ರಾಗುವಂತೆ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಲು ಶ್ರಮಿಸುವುದು ಈ ಎಲ್ಲಾ ಯೋಜನೆಗಳಿಗೆ ಸಮುದಾಯದ ದಾನಿಗಳಿಂದ ಸಿಗುವ ಸೌಲಭ್ಯ ಮತ್ತು ದೇಣಿಗೆಯನ್ನು ಕ್ರೂಡೀಕರಿಸಿ ಅನುಷ್ಠಾನ ಗೊಳಿಸಲು ಕಾರ್ಯ ಯೋಜನೆ ರೂಪಿಸಲಾಗುವುದು . ಹೀಗೆ ವಿಶ್ವ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡು ಅವುಗಳ ಅನುಷ್ಠಾನ ಮಾಡಬೇಕಾಗಿರುವುದು ಹಾಗೂ ಇಂದಿನ ಯುವಕರನ್ನು ಮಹಿಳೆಯರನ್ನ ಸಮುದಾಯದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ಶ್ರಮಿಸಲು ನಾನು ಬದ್ಧನಾಗಿದ್ದೇನೆ . ಆದ್ದರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆಗಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನನ್ನನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರು ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆ 2021 ರ ಚುನಾವಣೆಯ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಧೈಯ ಉದ್ದೇಶಗಳ ಕೈಪಿಡಿ ಬಿಡುಗಡೆಗೊಳಿಸಲಾಗುವುದು ಎಂದು ಆರ್ . ಲಕ್ಷ್ಮೀಕಾಂತ್ ಎಕೆಬಿಎಂಎಸ್‌ ಅಧ್ಯಕ್ಷೀಯ ಅಭ್ಯರ್ಥಿ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಆರ್ , ಲಕ್ಷ್ಮೀಕಾಂತ್ , ಅಧ್ಯಕ್ಷೀಯ ಅಭ್ಯರ್ಥಿ , ಖ್ಯಾತ ಧಾರ್ಮಿಕ ಚಿಂತಕರಾದ ಪಾವಗಡ ಪ್ರಕಾಶ್ ರಾವ್ , ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಹೆಚ್.ಸಿ , ಕೃಷ್ಣ , ಪತ್ರಕರ್ತ ಜೆ.ಹೆಚ್.ಅನಿಲ್ ಕುಮಾರ್ , ಉಪಾಧ್ಯಕ್ಷರಾದ ರಾಮ್ ಪ್ರಸಾದ್ , ರಾಜಶೇಖರ್ , ಮೋಹನ್ ಕುಮಾರ್ ಹಾಗೂ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು .

City Today News

9341997936