ಅಲ್ಪಸಂಖ್ಯಾತರ ಸಮುದಾಯಗಳಿಗೆ 10 ಸಾವಿರ ಕೋಟಿ ಬಜೆಟ್ ಅನುದಾನ ಘೋಷಿಸಬೇಕು

ಬೆಂಗಳೂರು , ಮಾ -22 : ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯು 6.5 ಕೋಟಿಯಾಗಿದ್ದು , ಅದರಲ್ಲಿ ಅಲ್ಪಸಂಖ್ಯಾತರ ಸಮುದಾಯಗಳು ಜನಸಂಖ್ಯೆಯು 11 ಕೋಟಿ ರಷ್ಟಿದೆ . ಇದರಲ್ಲಿ ಮುಸ್ಲಿಂ 96 ಲಕ್ಷ , ಕ್ರೈಸ್ತರು 1.3 ಲಕ್ಷ , ಜೈನರು 5 ಲಕ್ಷ , ಸಿಕ್ಕರು 40 ಸಾವಿರ , ಬೌದ್ಧರು 1 ಲಕ್ಷ ಮತ್ತು ಪಾರ್ಸಿಯರು 5 ಸಾವಿರ ಜನಸಂಖ್ಯೆಯಲ್ಲಿದ್ದಾರೆ . ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು 2.4 ಲಕ್ಷ ಕೋಟಿ ಗಾತ್ರದ ರಾಜ್ಯ ಬಜೆಟ್ ಮಂಡಿಸಿದ್ದಾರೆ . ಇದರಲ್ಲಿ 11 ಕೋಟಿ ಜನಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರ ಸಮುದಾಯಗಳ ಕಲ್ಯಾಣಕ್ಕಾಗಿ ಕೇವಲ 1.5 ಸಾವಿರ ಕೋಟಿ ಮಾತ್ರ ಮೀಸಲಿಡಲಾಗಿದೆ .

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಹುಪಾಲು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ , ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 17 ರಷ್ಟಿರುವ ಈ 6 ಸಮುದಾಯಗಳಿಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಘೋಷಣೆ ಮಾಡಿ , ಈ ಸಮುದಾಯಗಳ ಕಲ್ಯಾಣಕ್ಕಾಗಿ ವಿಶೇಷ ಯೋಜನೆ , ನಿಧಿ ಹಂಚಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ . ಕನಿಷ್ಠ 10 ಸಾವಿರ ಕೋಟಿ ಮಂಜೂರು ಮಾಡಿ ಅಲ್ಪಸಂಖ್ಯಾತರ ಸಂಬಂಧಪಟ್ಟ ಇಲಾಖೆಗಳಿಗೆ ಕೊರತೆಯಿರುವ ಸಿಬ್ಬಂದಿಗಳನ್ನು ನೇಮಕ ಮಾಡುವುದು , ಇತರ ಸಮುದಾಯಗಳಂತೆ ಅಲ್ಪಸಂಖ್ಯಾತರ ಸಮುದಾಯಗಳಿಗೆ ಎಲ್ಲಾ ರಂಗದಲ್ಲೂ ಮುಂದ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ .

ಅಲ್ಪಸಂಖ್ಯಾತರಿಗೆ ಸೀಮಿತವಾದ ಯೋಜನೆ ಹಾಗೂ ಕಾರ್ಯಕ್ರಮಗಳು ಸ್ವಜನ ಪಕ್ಷಪಾತ ದುತ್ತು ಭ್ರಷ್ಟಚಾರವಿಲ್ಲದೆ ನೇರವಾಗಿ ಸೂಕ್ತ ಫಲಾನುಭವಿಗಳಿಗೆ ಲಭಿಸುವಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಾಗಿದೆ . ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಯಾವುದೇ ದ್ವೇಷ ಮತ್ತು ಸಂಘರ್ಷದ ರ್ವಾಣವಾಗದಂತೆ ಹಾಗೂ ಪ್ರೀತಿ , ಸ್ನೇಹ , ಸೌಹಾರ್ದತೆ ಖಾಯವಾಗಿ ನಲೆಗೊಳ್ಳುವಂತೆ ಸರ್ಕಾರ ವತಿಯಿಂದ ದೊಡ್ಡಮಟ್ಟದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ .

ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳು ಅಥವಾ ಜನಸಂಖ್ಯಾಧಾರಿತ ಖಾಸಗಿ ವಲಯದಲ್ಲಿ ಮೀಸಲಾತಿ , ಭೂ ಹಂಚಿಕೆ . ರಾಜಕೀಯ ಪ್ರಾತಿನಿದ್ಯ , ಬ್ಯಾಂಕ್ ಸಾಲ ಸೌಲಭ್ಯ , ಬಡಾವಣೆಗಳ ರಚನೆ . ಅಲ್ಪಸಂಖ್ಯಾತ ಬಹುಳ್ಯ ಪ್ರದೇಶಗಳಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಸ್ಥಾಪನೆ , ಶವ ಸಂಸ್ಕಾರಕ್ಕಾಗಿ ಉಚಿತ ಭೂಮಿ ಉದಯಿಸುವುದು , ಗೋಪಾಲನೆಗಾಗಿ ಕನಿಷ್ಠ 50 ಎಕರೆ ಭೂಮಿ ಮತ್ತು ನಿಧಿ , ಸಣ್ಣ ಉದ್ದಿಮೆದಾರರಿಗೆ ಕನಿಷ್ಠ ಮೂರು ಲಕ್ಷ ಬಡ್ಡಿರಹಿತ ಸಾಲ ವ್ಯವಸ್ಥೆ , ಕೊಳಗೇರಿ ಪ್ರದೇಶಗಳಲ್ಲಿ ಪ್ಲಾಟ್ ರಚನೆ ಮಾಡಿ ಹಂಚಿಕೆ , ಮೊದಲಾದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ,

ಅಲ್ಪಸಂಖ್ಯಾತ ಸಮುದಾಯಗಳ ಸಂಸ್ಕೃತಿ , ಭಾಷೆ , ಕುಲಕಸುಬು , ಆಚಾರ – ವಿಚಾರಗಳ ಬಗ್ಗೆ ಸಂಶೋಧನೆ , ರಕ್ಷಣೆ ಮತ್ತು ತರಬೇತಿಗಾಗಿ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಎಂದು ಅಲ್ಪಸಂಖ್ಯಾತರ 6 ಸಮುದಾಯಗಳ ಪ್ರತಿನಿಧಿಗಳು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ ,

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು 1. ಅಪ್ಪರ್ ಕೊಡ್ಲಿಪೇಟೆ , ಮುಸ್ಲಿಮ್ ಮುಖಂಡರು ಮತ್ತು ಸಾಮಾಜಿಕ ಹೋರಾಟಗಾರರು ( +91 8050940867 ) 2. ಕುಮಾರ್ , ಸಮಾಜ ಕಲ್ಯಾಣ ಅಧಿಕಾರಿ , ಕರ್ನಾಟಕ ಭುದ್ದ ಸಮಾಜ 3 , ಸುರೇಶ್ ಜೈನ್ , ಅಧ್ಯಕ್ಷರು ಶ್ರೀ ಜೈನ ಪಿತಾಂಬರ್ ತೇರಾಪಂತ್ ಸಭಾ , ಬೆಂಗಳೂರು ( +91 94483 83315 ) 4. ಆಕ್ರಂ ಹಸನ್ , ಅಧ್ಯಕ್ಷರು ಹಸನಬ್ಬ ಟ್ರಸ್ಟ್ , ಉಳ್ಳಾಲ 5 , ಕಾಂತರಾಜ , ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಶಪ್ ಹೌಸ್ G , ರಾಜ್ ಕಮಲ್ ಸಿಂಗ್ , ಮುಖಂಡರು ಸಿಕ್ ಗುರುದ್ವಾರ ಹಲಸೂರು 7. ರೂಪಕ್ ಕುಮಾರ್ , ವ್ಯವಸ್ಥಾಪಕರು ಪಾರ್ಸಿ ಸಮುದಾಯ ಕೇಂದ್ರ

City Today News
9341997936