ಎಸ್ಸೆಸ್ಸೆಫ್‌ ಸದಸ್ಯತ್ವ ಅಭಿಯಾನ ಜನವರಿ ಒಂದರಿಂದ ಆರಂಭ

ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ಸುನ್ನೀ ಸೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023 ಜನವರಿ 01 ರಿಂದ 10 ರ ತನಕ ರಾಜ್ಯಾದ್ಯಂತ ನಡೆಯಲಿದೆ. ಎಸ್ಸೆಸ್ಸೆಫ್ ಕರ್ನಾಟಕದ ಮಣ್ಣಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಚುರುಕಿನ ಕಾರ್ಯಾಚರಣೆ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ಈ ನಾಡಿಗೆ ಸಮರ್ಪಿಸಿದೆ.

ಈ ಕಲುಷಿತಗೊಂಡಿರುವ ವಾತಾವರಣದಲ್ಲಿ ಹಾದಿ ತಪ್ಪುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಧಾರ್ಮಿಕತೆ, ನೈತಿಕತೆ ಹಾಗೂ ಆಧ್ಯಾತ್ಮಿಕತೆಯನ್ನು ತುಂಬಿ ಸಮಾಜದ ಸತ್ಪಜೆಗಳನ್ನಾಗಿ ಮಾಡುವಲ್ಲಿ ಎಸ್ಸೆಸ್ಸೆಫ ಯಶಸ್ವಿಯಾಗಿದೆ. ರಾಷ್ಟ್ರದಾದ್ಯಂತ ಕಾರ್ಯಾಚರಿಸುತ್ತಿರುವ ಈ ಸಂಘಟನೆಗೆ ಇದೀಗ ಐದು ದಶಕಗಳು ತುಂಬ ಸುವರ್ಣ ಮಹೋತ್ಸವ ಆಚರಣೆಯಲ್ಲಿದೆ.

ಕರ್ನಾಟಕ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ವಿದ್ಯಾರ್ಥಿ ಒಕ್ಕೂಟವಾದ ಎಸ್ಸೆಸ್ಸೆಫ್, ಯುವಜನ ಒಕ್ಕೂಟವಾದ ಎಸ್.ವೈ.ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಮೂರು ಸಂಘಟನೆಗಳು ಸಂಯುಕ್ತವಾಗಿ ಸದಸ್ಯತ್ವ ಅಭಿಯಾನ ನಡೆಸಲಿದೆ.

“ವ್ಯರ್ಥವಾಗದಿರಲಿ ಯೌವ್ವನ” ಎಂಬ ಧೈಯ ವಾಕ್ಯದಡಿ ಎಸ್.ಎಸ್.ಎಫ್ 12 ವಯಸ್ಸಿನಿಂದ 32 ವಯಸ್ಸಿನವರೆಗೆ ಇರುವ, ಸಂಘಟನೆಯ ತತ್ವ ಸಿದ್ಧಾಂತಗಳಲ್ಲಿ ಬದ್ಧರಾದ ವಿದ್ಯಾರ್ಥಿಗಳು, ಯುವಕರು ಸಂಘಟನೆಯ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ.

ಹನ್ನೆರಡು ವಯಸ್ಸಿನಿಂದ ಮೂವತ್ತೆರಡು ವಯಸ್ಸು ಪ್ರಾಯ ಮಿತಿಯಲ್ಲಿರುವ ಸುನ್ನೀ ಯುವಕರು ಈ ಅವಧಿಯಲ್ಲಿ ಸದಸ್ಯತ್ವ ಪಡೆದು ಮುಂದಿನ ದಿನಗಳಲ್ಲಿ ನಾಡಿಗೂ, ಕುಟುಂಬಕ್ಕೂ, ರಾಷ್ಟ್ರಕ್ಕೂ ಬೆನ್ನೆಲುಬಾಗಿ ನಿಲ್ಲುವ ಪ್ರಜೆಗಳಾಗಬೇಕಿದೆ ಎಂದು ಎಸ್ಸೆಸ್ಸೆಫ್‌ ರಾಜ್ಯ ಅಧ್ಯಕ್ಷರಾದ ಅಬ್ದುಲ್‌ ಲತೀಫ್ ಸಅದಿ ಶಿವಮೊಗ್ಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಹಾಫಿಝ್ ಸುಫಿಯಾನ್ ಸಖಾಫಿ, ಕೊಪ್ಪಳ (ಫಿನಾನ್ಸ್ ಸೆಕ್ರೆಟರಿ, ಎಸ್ಸೆಸ್ಸೆಫ್‌ ಕರ್ನಾಟಕ ರಾಜ್ಯ), ಶಾಫಿ ಸಅದಿ ಬೆಂಗಳೂರು (ಸದಸ್ಯರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ), ಶಬೀಬ್ ಎ.ವಿ ಬೆಂಗಳೂರು (ಪ್ರಧಾನ ಕಾರ್ಯದರ್ಶಿ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ) ,ಹಾಗೂ ಸಾಧಿಕ್, ಜಿಲ್ಲಾ ಕಾರ್ಯಧರ್ಶಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.

For further details contact:9945756676.

City Today News – 9341997936