ಕರ್ನಾಟಕರಾಜ್ಯದ ಯುವಜನರ ಯೋಗಕ್ಷೇಮ ಚಿಂತಿಸುವ , ಅರಿವು ಮೂಡಿಸುವ , ಯುವಜನರ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತು ವಹಿಸುವ ಯುವಜನರ ವೇದಿಕೆ

ಪತ್ರಿಕಾ ಗೋಷ್ಠಿ:

ಕೊರೋನ ಮತ್ತು ನಂತರದ ಕಾಲಘಟ್ಟದಲ್ಲಿ ಯುವಜನರ ಸಭಲೀಕರಣ ಮಾಡುವಂತೆ ಮತ್ತು ಯುವಜನರ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸುವಂತೆ ಹಕ್ಕೊತ್ತಾಯ…
ಯುವಮುನ್ನಡೆ – ಕರ್ನಾಟಕ
ರಾಜ್ಯದ ಯುವಜನರ ಯೋಗಕ್ಷೇಮ ಚಿಂತಿಸುವ , ಅರಿವು ಮೂಡಿಸುವ , ಯುವಜನರ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತು ವಹಿಸುವ ಯುವಜನರ ವೇದಿಕೆ. ಕರ್ನಾಟಕದಲ್ಲಿ ಸುಮಾರು ೧.೮ ಕೋಟಿ ಯುವಜನರಿದ್ದಾರೆ. ೧೫ ರಿಂದ ೨೯ ವಷದೊಳಗಿನವರನ್ನು ಯುವಜನರೆಂದು ಪರಿಗಣಿಸಲಾಗಿದೆ. ಕೊರೊನ ೨ ನೇ ಅಲೆ ಹಾಗೂ ಲಾಕ್‌ ಡೌನ್‌ ಸಂಧರ್ಭದಲ್ಲಿ ಯುವಜನರಿಗೆ ಬಹಳಷ್ಟು ಸಮಸ್ಯೆಗಳಾಗಿವೆ. ೧೯೪೮ ರ ವಿಸ್ವಸಂಸ್ಥೆ ಮಾನವ ಹಕ್ಕುಗಳ ಒಡಂಬಡಿಕೆಯು ಮಾನವ ಹಕ್ಕುಗಳನ್ನು ಘೋಷಿಸಿದೆ. ಆದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಯುವಜನರು ಸಕ್ರಿಯವಾಗಿ ತಮ್ಮ ಹಕ್ಕುಗಳನ್ನು ಪಡೆಯುತ್ತಿಲ್ಲ. ಹಾಗಾದರೆ ಈಗ ಯುವಜನರ ಹಕ್ಕುಗಳ ಪರಿಸ್ಥಿತಿ ಏನು ? ಇವುಗಳ ಬಗ್ಗೆ ವಕಾಲತ್ತು ವಹಿಸುವವರು ಯಾರು ?

ಇದು ಯಾವ ನ್ಯಾಯ ?
೪೫ ವರ್ಷದ ಮೇಲಿನವರಿಗೆ ಮಾತ್ರ ಮೊದಲು ಕೋವಿಡ್‌ ಲಸಿಕೆ… !
ಕೋವಿಡ್‌ ೨ ನೇ ಅಲೆ ಯುವಜನರನ್ನೂ ಬಲಿ ತೆಗೆದುಕೊಂಡಿದೆ. ಹ್ಯಾಪಿನೆಸ್‌ ಹೈಪಾಕ್ಸಿಯಾ ಯುವಜನರನ್ನೇ ಭಾದಿಸುತ್ತಿದೆ ಎಂದು ಈಗ ಗೊತ್ತಾಗಿದೆ. ಹಾಗಾದರೆ ಲಸಿಕೆ ಕೊಡುವಲ್ಲಿ ಯುವಜನರಿಗೆ ಮೊದಲ ಪ್ರಾಧಾನ್ಯತೆ ಯಾಕೆ ಕೊಟ್ಟಿಲ್ಲ ?
ಹಾಗೆಯೇ ೩೫ ವಷ ಮೇಲ್ಪಟ್ಟ ಕಲಾವಿದರಿಗೆ ಮಾತ್ರ ಕೋವಿಡ್‌ ಪರಿಹಾರ ಧನವನ್ನು ಘೋಷಿಸಲಾಯಿತು. ಆದರೆ ಯುವ ಕಲಾವಿದರ ಪರಿಸ್ಥಿತಿ ಏನು ? ವಯಸ್ಸಿನ ಆಧಾರದ ಮೇಲೆ ಇಷ್ಟು ತಾರತಮ್ಯ ಯಾಕೆ ? ಸಮಾನತೆಯ ಹಕ್ಕಿನ ಪ್ರಶ್ನೆ ಇಲ್ಲಿ ತಲೆದೋರುತ್ತದೆ…
ದ್ವಿತೀಯ ಪಿ.ಯು.ಸಿ ವಿದ್ಯಾಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ೧೦ ನೇ ತರಗತಿಯ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಯಾವುದೇ ವಿದ್ಯಾಥಿಗಳಿಗೆ ಸಂಪೂರ್ಣವಾದ ಪಠ್ಯಕ್ರಮ ಮುಗಿಸಿಲ್ಲ. ಆನ್‌ ಲೈನ್‌ ಪದ್ದತಿಯ ಶಿಕ್ಷಣ ವ್ಯವಸ್ಥೆಯು ಎಷ್ಟು ವಿದ್ಯಾಥಿಗಳನ್ನು ತಲುಪಿದೆ… ? ಗ್ರಾಮೀಣ ಭಾಗದ ವಿದ್ಯಾಥಿಗಳು ಬಹಳಷ್ಟು ಮಂದಿ ಮೊಬೈಲ್‌ / ಲ್ಯಾಪ್‌ ಟಾಪ್‌ ನೆಟ್ ವರ್ಕ್ ಹಾಗೂ ರೀಚಾರ್ಜ್ ಸಮಸ್ಯೆಗಳಿಂದ ಆನ್‌ ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ಶಿಕ್ಷಣದ ಹಕ್ಕಿನ ಪ್ರಶ್ನೆ…
ಆರೋಗ್ಯದ ಹಕ್ಕಿನ ಪ್ರಶ್ನೆ
ಒಂದು ವರದಿಯ ಪ್ರಕಾರ ಕೋವಿಡ್‌ ಸಂದಭದಲ್ಲಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವಜನರ ಸಂಖ್ಯೆ ಶೇ. ೯ ರಷ್ಟು ಹೆಚ್ಚಾಗಿದೆ. ಇತ್ತೀಚಿಗೆ ನೇಸರ ಫೌಂಡೇಶನ್‌ ಮಾಡಿರುವ ಒಂದು ಅನ್‌ ಲೈನ್‌ ಸರ್ವೇ ಪ್ರಕಾರ ಕೋವಿಡ್‌ ಸಂದಭದಲ್ಲಿ ಯುವಜನರಲ್ಲಿ ಭಯ , ಆತಂಕ ಮತ್ತು ಏಕಾಂಗಿತನ ಹೆಚ್ಚಾಗಿದೆ.
ಉದೋಗದ ಹಕ್ಕು
ಲಾಕ್‌ ಡೌನ್‌ ಸಂದಭದಲ್ಲಿ ಹಲವಾರು ಯುವಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ ಎದುರಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿವೆ.

ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವವರು ಯಾರು ? ಸಕಾರದ ಜವಾಬ್ದಾರಿ ಇಲ್ಲವೇ ?

ಈ ಬಗ್ಗೆ ಸಕಾರ ಶೀಘ್ರಗತಿಯಲ್ಲಿ ಗಮನ ಹರಿಸಿ , ಈ ಕೆಳಗಿನ ಅಂಶಗಳನ್ನು ತಕ್ಷಣವೇ ಪೂರೈಸಬೇಕಿದೆ.
೧. ಕೋವಿಡ್‌ ಮತ್ತು ಲಾಕ್‌ ಡೌನ್‌ ನಿಂದ ತೊಂದರೆಗೆ ಒಳಗಾದ ಎಲ್ಲಾ ಸಾಮಾಜಿಕ – ಆರ್ಥಿಕ ಹಿಂದುಳಿದಿರುವ ಕುಟುಂಬಗಳಿಗೆ ಅರ್ಥಿಕ ನೆರವು ನೀಡುವುದು.
೨. ಎಲ್ಲಾ ಪರೀಕ್ಷೆಗಳನ್ನು ರದ್ದು ಪಡಿಸುವುದು. ಈ ಶೈಕ್ಷಣಿಕ ವರ್ಷದ ಕಲಿಕೆಯಲ್ಲಾದ , ಆಗಬಹುದಾದ ಕೊರತೆಯನ್ನು ತುಂಬಲು ಕ್ರಮ ಕೈಗೊಳ್ಳುವುದು.
೩. ೨೦೧೨ ರ ಕರ್ನಾಟಕ ಯುವನೀತಿಯಲ್ಲಿ ಪ್ರಸ್ತಾಪಿಸುವಂತೆ ತಕ್ಷಣ ಯುವಜನ ಸಬಲೀಕರಣ ನಿಗಮವನ್ನು ಸ್ಥಾಪಿಸಿ.
೪. ಕೋವಿಡ್‌ ಲಸಿಕೆಯ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸುವುದು.
ದೀರ್ಘ ಕಾಲಿಕ ಬೇಡಿಕೆಗಳು
೧. ಯುವಜನ ಸಬಲೀಕರಣ ಇಲಾಖೆಯ ಅಡಿಯಲ್ಲಿ ಇರುವ ಜಿಲ್ಲಾವಾರು ಆಪ್ತಸಮಾಲೋಚನಾ ಕೇಂದ್ರಗಳನ್ನು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಹಂತಕ್ಕೆ ವಿಸ್ತರಿಸಬೇಕು.
೨. ಯುವಜನರ ಆರೋಗ್ಯದ ಬಗ್ಗೆ ಕಾಲಜಿ ವಹಿಸಿ , ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪೌಷ್ಠಿಕ ಆಹಾರ ನೀಡುವ ವ್ಯವಸ್ಥೆ ನೀಡಬೇಕು.
೩. ಯುವನೀತಿ , ಯುವಜನ ಆಯೋಗ ಮತ್ತು ಯುವಜನ ಸಬಲೀಕರಣ ನಿಗಮವನ್ನು ಸ್ಥಾಪಿಸಬೇಕು.
೪. ಗುಡಿಕೈಗಾರಿಕೆಗಳು , ಸ್ವಯಂ ಉದ್ಯೋಗಗಳಿಗೆ ಹೆಚ್ಚು ಒತ್ತು ನೀಡಿ , ಎಲ್ಲರಿಗೂ ಭದ್ರತೆಯುಳ್ಳ ಉದ್ಯೋಗಗಳನ್ನು ಒದಗಿಸಿಕೊಡಬೇಕು.
೫. ರಾಜಕೀಯ ಮತು ಆಡಳಿತ – ಸಾಮಾಜಿಕ ಚಟುವಟಿಕೆಗಳಲ್ಲಿ ಯುವಜನರು ಭಾಗವಹಿಸಲು ಅವಕಾಶ ಒದಗಿಸಿಕೊಡಬೇಕು.
೬. ಯುವಜನರ ಹಕ್ಕುಗಳನ್ನು ಘೋಷಿಸಬೇಕು.

ಕೋವಿಡ್‌ ಸಮಯದಲ್ಲಿ ಯುವಜನರು ಹಕ್ಕುಗಳಿಂದ ಇನ್ನಷ್ಟು ವಂಚಿತರಾಗಿದ್ದಾರೆ ಎಂದು ನಮಗೆ ಅನಿಸಿದೆ. ನಮ್ಮ ಹಕ್ಕುಗಳನ್ನು ಕೇಳಲು ಹೊರಟಿದ್ದೇವೆ.

ಯುವಜನ ಮುಂದಾಳುಗಳು

ಪೂಜಾ ನಾರಾಯಣಪ್ಪ,ದಿಲೀಪ್
ಬೆಂಗಳೂರು, ಮಣಿ ಕೋಲಾರ,ಮೇಘನಾ,ಮಹಾಲಿಂಗ
ತುಮಕೂರು