ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಭಾರತ್ ಬಂದ್‌ಗೆ ಬೆಂಬಲ

ಪತ್ರಿಕಾ ಪ್ರಕಟಣೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು . ಬೆಂಬಲ ಬಲ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ 27-09-2021 ರಂದು ಭಾರತ್ ಬಂದ್ ಮಾಡಲು ತೀರ್ಮಾನಿಸಿದ್ದು , ಅದನ್ನು ಬೆಂಬಲಿಸಿ ಕಾರ್ನಾಟಕ ಬಂದ್ ಮಾಡುತ್ತಿದ್ದೇವೆ . ಕಿಸಾನ್ ಸಂಯುಕ್ತ ಮೋರ್ಚ ಹಾಗು ಕಾರ್ನಾಟಕ ರಾಜ್ಯ ರೈತ ಸಂಘ , ರಾಜ್ಯ ಕಬ್ಬು ಬೆಳೆಗಾರರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದು , ರಾಜ್ಯ ಹಾಗು ರಾಷ್ಟ್ರ ವ್ಯಾಪ್ತಿಯ ಅನೇಕ ರೈತ ಸಂಘಗಳು ಹಾಗು ಸಮಾನ ಮನಸ್ಕರ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಿ.ಡಿ.ಎ ಶಿವರಾಮ ಕಾರಂತ ಬಡಾವಣೆ ಹಾಗೂ ಪರಿಘರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸುತ್ತಾ ಸಾವಿರಾರು ಎಕರೆ ಕೃಷಿ ಜಮೀನು ವಶಪಡಿಸಿಕೊಂಡು ಭೂ ಮಾಲೀಕರಿಗೆ ಪುಡಿಗಾಸಿನ ಪರಿಹಾರ ನೀಡಲು ಯೋಜನೆ ರೂಪಿಸುತ್ತಿದ್ದು , ಇದರ ವಿರುದ್ಧವು ನಾವು ಹೋರಾಟ ರೂಪಿಸುತ್ತಿದ್ದೇವೆ .

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿ.ಡಿ.ಎ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ಯೋಜನೆ ರೂಪಿಸದೆ ನಮ್ಮ ಭೂಮಿಯನ್ನು ವಶಪಡಿಸಿಕೊಂಡು ನಮಗೆ ಶೇ 40 % ಬಿ.ಡಿ.ಎಗೆ ಶೇ 60 % ಅಭಿವೃದ್ಧಿ ಹೊಂದಿದ ಭೂಮಿ ನೀಡಲು ತಯಾರಿ ನಡೆಸಿದ್ದು , ಖಾಸಗಿ ಕಂಪನಿಗಳು ಶೇ 60 % ಅಭಿವೃದ್ಧಿ ಹೊಂದಿದ ಭೂಮಿಯನ್ನು ನೀಡುವ ಯೋಜನೆಗಳು ಬೆಂಗಳೂರಿನಲ್ಲಿ ಇವೆ . ಆದರೆ ಸರ್ಕಾರದ ಭಾಗವಾದ ಬಿ.ಡಿ.ಎ ಏಕೆ ಈ ರೀತಿಯ ಯೋಜನೆ ಮಾಡುತ್ತಿದೆ ಎಂದು ನಮ್ಮ ಪ್ರಶ್ನೆ . ಈ ಬಗ್ಗೆ ನಮ್ಮ ಹೋರಾಟ ಮುಂದೆವರೆಯುತ್ತದೆ ಎಂದು ನಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತಿದ್ದೇವೆ .

ದಿನಾಂಕ : 27-09-2021 ರಂದು ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ .

ವಿಆರ್ ನಾರಾಯಣರೆಡ್ಡಿ ರಾಜ್ಯಾಧ್ಯಕ್ಷರು

ಮಂಜುನಾಥ್ – ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು

ಹರೀಶ ಅದ್ದೆ – ರಾಜ್ಯ ಸಮಿತಿ ಸದಸ್ಯರು

ನವೀನ್ ಗೌಡ – ಯಲಹಂಕ ತಾಲ್ಲೂಕು ಅಧ್ಯಕ್ಷರು

City Today News

9341997936