ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕೆಳಕಂಡ ಬೇಡಿಕೆಗಳನ್ನು

1. ಶ್ರೀ ಹೆಚ್ . ಕಾಂತರಾಜ ರವರ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲು ” ಧರಣಿ ಸತ್ಯಾಗ್ರಹ ” ಹಮ್ಮಿಕೊಳ್ಳಲಾಗಿದೆ .

2. 2A ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕವಾಗಿ , ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಪ್ರಭಲ ಜಾತಿಗಳನ್ನು ಸೇರಿಸಬಾರದೆಂದು ಸರ್ಕಾರಕ್ಕೆ ಒತ್ತಾ ಮಾಡುವುದು . 3.

ಹಿಂದುಳಿದ ಜಾತಿಗಳಿಗೆ ಜಾತಿಗೊಂದು ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂದು ಒತ್ತಾಯಿಸುವುದು .

ಕರ್ನಾಟಕ ಸರ್ಕಾರ ಈಡೇರಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ರಾಜಕೀಯವಾಗಿ , ಆಧ್ಯಾತ್ಮಿಕವಾಗಿ ಸದೃಢ ಹೊಂದಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ -2 ಕ್ಕೆ ಸೇರಿಸಬಾರದೆಂದು ಸಮಸ್ತ 197 ಹಿಂದುಳಿದ ಜಾತಿಗಳ ಪರವಾಗಿ ಸರ್ಕಾರಕ್ಕೆ ನಮ್ಮ ಟ್ರಸ್ಟ್ ಮೂಲಕ ಒತ್ತಾಯಿಸಲಾಗುತ್ತದೆ . ಒಂದು ವೇಳೆ ಇದನ್ನು ಹಗುರವಾಗಿ ಸರಕಾರ ತೆಗೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಏನೆಂದು ಈ ಸರಕಾರಕ್ಕೆ ತೋರಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯ ಮೂಲಕ ಸರ್ಕಾರಕ್ಕೆ ಎಚ್ಚತಿಸುತ್ತಿದ್ದೇವೆ . ಹಿಂದುಳಿದ ವರ್ಗಗಳ ಸಮುದಾಯದ ಬೇಡಿಕೆಗಳನ್ನು ಸರಕಾರ ತಕ್ಷಣ ಜಾರಿಗೆ ತರದೇ ಹೋದಲ್ಲಿ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಹಿಂದುಗಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟ್‌ನ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯವನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ .

– ಶ್ರೀ ಬಸವ ಪ್ರಭು ಸ್ವಾಮಿಜಿ – ಅಧ್ಯಕ್ಷರು

ಸೈದಪ್ಪ ಕೆ . ಗುತ್ತೇದಾರ್ – ಪ್ರಧಾನ ಕಾರ್ಯದರ್ಶಿ

City Today News

9341997936