ಕೃಷಿ ಇಲಾಖೆಯಲ್ಲಿ ರೈತ ಮಕ್ಕಳಾದ ಅನುವುಗಾರರನ್ನು ಕೈಬಿಟ್ಟು ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕಮಾಡಿಕೊಳ್ಳುವುದನ್ನು ವಿರೋಧಿಸಿ-ಪತ್ರಿಕಾ ಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರು ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ರೈತ ಅನುವುಗಾರರ ಕುರಿತು ಪತ್ರಿಕಾ ಗೋಷ್ಠಿ .

* ಕೃಷಿ ಇಲಾಖೆಯಲ್ಲಿ ರೈತ ಮಕ್ಕಳಾದ ಅನುವುಗಾರರನ್ನು ಕೈಬಿಟ್ಟು ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕಮಾಡಿಕೊಳ್ಳುವುದನ್ನು ವಿರೋಧಿಸಿ* .

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2008-09ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ರೂಪಿಸಿದ ಭೂಚೇತನ ಎಂಬ ರೈತ ಸ್ನೇಹಿ ಕಾರ್ಯಕ್ರಮದಲ್ಲಿ ರೈತ ಅನುವುಗಾರರನ್ನು ಸುಮಾರು 9657 ಜನ ಅನುವುಗಾರರನ್ನು ನೇಮಿಸಿಕೊಂಡಿದ್ದರು . 10 ವರ್ಷಗಳ ಭೂಚೇತನ ಅವಧಿಯಲ್ಲಿ ಅನುವುಗಾರರಿಗೆ ಕೇವಲ ರೂ .5000 / – ಗೌರವ ಧನವನ್ನು ನೀಡಿ ದುಡುಸಿಕೊಂಡರು . ಎರಡು ನಂತರದ ಅವಧಿಯಲ್ಲಿ ರಾಜ್ಯ ಸರ್ಕಾರ ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುವುಗಾರರನ್ನು ರದ್ದುಪಡಿಸಿ ಅನುವುಗಾರರ ಹೆಸರಿಗೆ ಬದಲಾಗಿ ತಾಂತ್ರಿಕ ಉತ್ತೇಜಕರೆಂದು ನಾಮಕರಣ ಮಾಡಿ ಅನುವುಗಾರರ ಸಂಖ್ಯೆಯನ್ನು ಕಡಿತಗೊಳಿಸಿ ಪಂಚಾಯ್ತಿಯೊಬ್ಬರಂತೆ ನೇಮಕ ಮಾಡಿ ಗೌರವಧನದ ಬದಲು ಹೆಕ್ಟರ್‌ ವಂತಿಕೆಯನ್ನು ಜಾರಿ ಮಾಡಿ ನಂತರ ಇಲಾಖೆಯ ಎಲ್ಲಾ ಯೋಜನೆಗಳಲ್ಲಿ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ

ನೀಡಿ ರೈತರ ಬೆಳೆಯಲ್ಲಿ ಆರ್ಥಿಕವಾಗಿ ಘಣನೀಯವಾಗಿ ಏರಿಕೆ ಮಾಡಿಸಿ ರೈತರ ಜೊತೆಗೆ ಪಾಲ್ಗೊಂಡು 52 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಬಿತ್ತನೆ ಮಾಡಿಸಿ ಶೇ .20 % ಮಾಡಿಸಿ ಕೇಂದ್ರ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಬರುವಂತೆ ಮಾಡಲು ಸಹಕರಿಸಿದ ಅನುವುಗಾರರನ್ನು ಈಗ ಪೂರ್ತಿ ಪ್ರಮಾಣದಲ್ಲಿ ರದ್ದುಪಡಿಸಿ ಅವರ ಬದಲಾಗಿ ಕೃಷಿ ಡಿಪ್ಲೋಮಾದವರನ್ನು ನೇಮಿಸಿಕೊಳ್ಳುತ್ತೇವೆ ಎಂದು ಸರ್ಕಾರ ತೀರ್ಮಾನಿಸಿರುವುದು ಅನುವುಗಾರರಿಗೆ ತುಂಬಲಾಗದ ನಷ್ಟ ಉಂಟಾಗಿದೆ . ಸುಮಾರು 12 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಪರಿಣಿತ ಹೊಂದಿದ ನಮ್ಮಗಿಂತ ಕೇವಲ 2 ವರ್ಷ ಡಿಪ್ಲೋಮಾ ಮಾಡಿದವರಿಗೆ ಅನುಭವ ಇರುವುದಿಲ್ಲ . ಈಗ ರೈತರಿಗೆ ನೇರವಾಗಿ ಯಾವ ಸವಲತ್ತುಗಳು ಸಹ ಸಿಗುತ್ತಿಲ್ಲ . ಈಗಾಗಲೇ ಇಲಾಖೆಯಲ್ಲಿ ಅನುವುಗಾರರಿಗೆ ತರಬೇತಿ ನೀಡಿರುತ್ತದೆ . ಆದ್ದರಿಂದ ರೈತ ಮಿತ್ರರ ನೇಮಕಾತಿಯನ್ನು ಕೈಬಿಟ್ಟು ಈಗಿರುವ ಸುಮಾರು 10-12 ವರ್ಷಗಳಿಂದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಹಾಗೂ ಅನುಭವ ಹೊಂದಿರುವ ರೈತ ಅನುವುಗಾರರನ್ನು ನೇಮಕಾತಿ ಮಾಡಿ ಮುಂದುವರೆಸಿ ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ .

ಎನ್.ಎನ್.ಸತೀಶ್ – ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ರೈತ ಅನುವುಗಾರರ ಸಂಘ – ಜಿ.ಎಂ.ರುದ್ರಪ್ಪ ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಅನುವುಗಾರರ ಸಂಘ

City Today News
9341997936