ಕೆ ಆರ್ ಪುರ ಗಂಗಶೆಟ್ಟಿ ಕೆರೆ ಒತ್ತುವರಿ: ಕೆರೆ ಇಂದು ಕಳ್ಳಕಾಕರ ಹಾವಳಿಯಿಂದ ಅಳಿವಿನ ಹಂಚಿನಲ್ಲಿದೆ

ಕೆ. ಆರ್. ಪುರ ಗಂಗಶೆಟ್ಟಿ ಕೆರೆ ಸರ್ವೇ ನಂ ೫೮ ಪೈಕಿ ಅಂದಾಜು 22 ಎಕರೆ ೩೮ ಗುಂಟೆ ಜಮೀನಿನ ಒತ್ತುವರಿ. ಇತಿಹಾಸ ಪ್ರಸಿದ್ದಿ ಕೆರೆಗಳಲ್ಲಿ ಒಂದಾದ ಕೆಆರ್ ಪುರದ ಗಂಗಶೆಟ್ಟಿ ಕೆರೆ ಇಂದು ಕಳ್ಳಕಾಕರ ಹಾವಳಿಯಿಂದ ಅಳಿವಿನ ಹಂಚಿನಲ್ಲಿದೆ ಇದನ್ನು ಒತ್ತುವರಿ ಮಾಡಿಕೊಂಡು ಕೆಲ ಪ್ರಭಾವಿ ರಾಜಕಾರಣಿಗಳ ಅಧಿಕಾರದ ದುರ್ಬಳಕೆಯಿಂದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು ಬಡಾವಣೆ ಕಾಮಾಗಾರಿ ನಡೆಸುತ್ತಿದ್ದಾರೆ . ಕೆರೆಗಳು ರೈತರ ಜೀವನಾಡಿಯಾಗಿದ್ದು ಇಂದು ಅವನತಿಯತ್ತ ಸಾಗಿದೆ ಕುಡಿಯುವ ನೀರಿಗು ಸಹ ಹಾಹಕಾರ ಉಂಟಾಗಿದೆ . ಆದುದರಿಂದ ಸರ್ಕಾರಿ ಜಾಗವನ್ನು ಸೂಕ್ತವಾಗಿ ಸರ್ವೇ ನಡೆಸಿ ಕೆರೆ ಜಾಗವನ್ನು ಕೆರೆಗೆ ಮೀಸಲಿಡಲು ಹಾಗೂ ಇಂತಹ ಕೆಲ ಭೂ ಗಳರಿಗೆ ಕಾನೂನು ಪ್ರಕಾರ ತಕ್ಕ ಶಾಸ್ತಿ ಮಾಡಲು ಸಮಸ್ತ ಕೆ ಆರ್ ಪುರದ ನಾಗರೀಕರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೆವೆ . “ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ “

ಲಕ್ಷ್ಮಣ್ . ಎಲ್.ಎಸ್
ಕರ್ನಾಟಕ ರಾಜ್ಯಾಧ್ಯಕ್ಷರು
ರತ್ನ ಭಾರತ ರೈತ ಸಮಾಜ

City Today News
9341997936