ಜಮ್ಮಾ ಮಸೀದಿ ಆಡಳಿತ ಮಂಡಳಿ ಟ್ರಸ್ಟ್ ನಿಂದ ಅವ್ಯವಹಾರ; ಪೋಲಿಸ್ ಠಾಣೆ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು

ಬೆಂಗಳೂರು – ಕಳೆದ ಎರಡು ವರ್ಷಗಳಿಂದ ಬೆನ್ಸನ್ ಟೌನ್ ಮತ್ತು ಶಿವಾಜಿನಗರದಲ್ಲಿರುವ ಜಮ್ಮಾ ಮಸೀದಿ ಆಡಳಿತ ಮಂಡಳಿಯ ಟ್ರಸ್ಟಿ ಉಸ್ಮಾನ್ ಷರೀಪ್ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡದೇ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಯೋಗಕ್ಷೇಮ, ರಸ್ತೆ ಅಭಿವೃದ್ಧಿಯಂತಹ ಎಲ್ಲ ಕಾರ್ಯಗಳಿಗೂ ಅಡ್ಡಿಯಾಗಿದ್ದಾರೆ ಎಂದು ಜಮ್ಮಾ ಮಸೀದಿ ಆಡಳಿತ ಮಂಡಳಿಯ ಮತ್ತೋರ್ವ ಟ್ರಸ್ಟಿ ಎಸ್.ಎಸ್. ಅಪ್ಸರ್ ಖಾದ್ರಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಟ್ರಸ್ಟಿಗಳಾದ ಉಸ್ಮಾನ್ ಷರೀಪ್ ಮತ್ತು ಫಯಜಾನ್ ವಿರುದ್ಧ ಶಿವಾಜಿನಗರದ ಕಮರ್ಷಿಯಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇವರ ಸದಸ್ಯತ್ವ ರದ್ದು ಪಡಿಸುವಂತೆ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಉಸ್ಮಾನ್ ಷರೀಫ್, ಎಸ್.ಎಸ್.ಎ. ಖಾದರ್ ಅಕಾನೂನಾತ್ಮಕವಾಗಿ ಇಬ್ಬರು ಟ್ರಸ್ಟಿಗಳನ್ನು ಸಮಿತಿಗೆ ಸೇರ್ಪಡೆಗೊಳಿಸಿದ್ದು. ಕೆಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಉಳಿದ ಟ್ರಸ್ಟಿಗಳಾದ ಫಯಜಾನ್, ತಾಹೀರ್ ಇವರಿಗೆ ಯಾವುದೇ ಚೆಕ್‍ಗಳಿಗೆ ಸಹಿ ಮಾಡುವ ಅಧಿಕಾರ ಇಲ್ಲದಿದ್ದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಟ್ರಸ್ಟಿಗಳಾಗಿರುವ ಉಸ್ಮಾನ್ ಷರೀಪ್ ಜಮ್ಮಾ ಮಸೀದಿಯಲ್ಲಿ ಸ್ವತ ಬಾಡಿಗೆದಾರರಾಗಿದ್ದು, 200 ರೂಪಾಯಿ ಬಾಡಿಗೆಯಲ್ಲಿ ಮಳಿಗೆಗಳನ್ನು ಹೊಂದಿದ್ದು. ಬೇರೆಯವರಿಂದ ಎಂಟು ಸಾವಿರ ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಆದರೆ ಉಸ್ಮಾನ್ ಷರೀಪ್ ತಾವು ನೀಡಬೇಕಾದ 15 ತಿಂಗಳ ಬಾಡಿಗೆಯನ್ನು ನೀಡದೇ ಟ್ರಸ್ಟಿ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.

ಉಸ್ಮಾನ್ ಷರೀಪ್ ಪ್ರತಿ ವರ್ಷ ಸುನ್ನಿ ಜಮುಯುತ್ತಲ್ಲಾ ಉಲೇಮಾ ಮಿಲಾದ್ ನಡೆಸುತ್ತಿದ್ದು. ಇದರಿಂದ ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದಾರೆ.ಟ್ರಸ್ಟಿ ಉಸ್ಮಾನ್ ಷರೀಪ್ ಚುನಾವಣೆ ನಡೆಸದೇ ತಾವೇ ಕಾರ್ಯದರ್ಶಿ ಎಂದು ಸ್ವಯಂವಾಗಿ ಘೋಷಿಸಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ.ನ್ಯಾಯಾಲಯದಿಂದ ಟ್ರಸ್ಟ್ ಗೆ ಸ್ವತಂತ್ರ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಆದೇಶ ವಿದ್ದರೂ. ತಮಗೆ ಬೇಕಾದ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಂಡು ಹಣಕಾಸು ವ್ಯವಹಾರವನ್ಬು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಎಸ್.ಎಸ್.ಎ.ಖಾದರ್, ಉಸ್ಮಾನ್ ಷರೀಪ್ ಇಬ್ಬರು ಮುಸ್ಲಿಂ ನಿಕಾಗಳಿಗೆ ಮದುವೆಗಳಿಗೆ ನೀಡಬೇಕಾಗಿರುವ ಒಂದು ಸಾವಿರ ರೂಪಾಯಿ ಶುಲ್ಕವನ್ನು ಎರಡು ಸಾವಿರ ರೂಗಳಿಗೆ ಹೆಚ್ಚಿಸಿದ್ದಾರೆ. ಶವ ಸಂಸ್ಕಾರ ಶುಲ್ಕವನ್ನು ಎರಡು ಸಾವಿರ ರೂಪಾಯಿನಿಂದ ಐದು ಸಾವಿರ ರೂಪಾಯಿವರಗೆ ಏರಿಕೆ ಮಾಡಿದ್ದು ಇದಕ್ಕೆ ತಮ್ಮ ಬಡ ಮುಸ್ಲಿಂರ ತೀವ್ರ ವಿರೋದವಿದೆ ಎಂದರು.

ಸ್ವತಃ ಉಸ್ಮಾನ್ ಷರೀಪ್ ಅವರು ಖಬರ್ ಸ್ತಾನ್ ಶವ ಸಂಸ್ಕಾರ ಶವಗಾರ ಸಿಬ್ಬಂದಿಗಳನ್ನು ಜತೆಗೂಡಿಸಿಕೊಂಡು ಟ್ರಸ್ಟಿ ವಿರುದ್ದ ಪ್ರತಿಭಟನೆ ನಡೆಸಿ ಶುಲ್ಕ ಏರಿಕೆಗೆ ಆಗ್ರಹಿಸಿದ್ದು ಟ್ರಸ್ಟಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಜಮ್ಮಾ ಮಸೀದಿ ಟ್ರಸ್ಟ್ 150 ವರ್ಷದ ಇತಿಹಾಸ ಹೊಂದಿದ್ದು, ಇದರಡಿಯಲ್ಲಿ ಜಮ್ಮಾ ಮಸೀದಿ ಒಬಿಹೆಚ್ ರಸ್ತೆ, ಖಾದ್ರಿಯಾ ಮಸೀದಿ, ಖುದ್ ಸಾಬ್ ಈದ್ಗಾ, ಖುದಾಸ್ ಸಾಹೇಬ್ ಬರಿಯಾಲ್ ಮೈದಾನ.150 ಅಂಗಡಿ ಮಳಿಗೆಗಳು ಬರಲಿದ್ದು, 60ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಜಮ್ಮಾ ಮಸೀದಿ ಟ್ರಸ್ಟ್ ಆರೋಗ್ಯ. ಶಿಕ್ಷಣ, ಉದ್ಯೋಗ ವಿವಿಧ ಸಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.ಸೆಪ್ಟೆಂಬರ್ 2019ರಲ್ಲಿ ಜಿಲ್ಲಾ ನ್ಯಾಯಾಲಯ ಆದೇಶದಂತೆ ಐದು ಜನರನ್ನು ಒಳಗೊಂಡ ಟ್ರಸ್ಟಿ ಸಮಿತಿ ರಚನೆ ಮಾಡಲಾಗಿದ್ದು, ನಿವೃತ್ತ ನ್ಯಾಯಾಧೀಶ ನಯಾಜ್ ಅಹಮದ್ ದಪೇದಾರ್, ಹಿರಿಯ ವಕೀಲ ಮುಸ್ತಕ್ ಅಹಮದ್, ಎಸ್. ಎಸ್.ಎ. ಖಾದರ್, ಎಸ್.ಎಸ್ ಅಪ್ಸರ್ ಖಾದ್ರಿ, ಉಸ್ಮಾನ್ ಷರೀಪ್, ಅವರನ್ನು ಟಸ್ಟಿಗಳಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಟ್ರಸ್ಟಿಗಳಾದ ಎಸ್. ಎಸ್ ಖಾದರ್ ಮರಣ ಹೊಂದಿದ್ದು. ಮತ್ತೋರ್ವ ಟ್ರಸ್ಟಿಗಳಾದ ನಯಾಜ್ ಅಹಮದ್ ದಪೇದಾರ್ ರಾಜೀನಾಮೆ ನೀಡಿದ್ದು ಆದರೆ ಇವರ ರಾಜೀನಾಮೆಯನ್ನು ನ್ಯಾಯಾಲಯ ಸ್ವೀಕರಿಸಿಲ್ಲ. ಪ್ರಸ್ತುತ ನಾಲ್ಕು ಮಂದಿ ಟ್ರಸ್ಟಿಗಳು ಇದ್ದಾರೆ ಎಂದು ವಿವರಿಸಿದರು,

ಎಸ್.ಎಸ್. ಅಪ್ಸರ್ ಖಾದ್ರಿ
ಜಮ್ಮಾ ಮಸೀದಿ ಆಡಳಿತ ಮಂಡಳಿ ಟ್ರಸ್ಟಿ
ಮೊ: 9844014533

City Today News

9341997936