ಜೀವಮಾನದ ಸಾಧನೆಗಾಗಿ ಪತ್ರಕರ್ತ ಡಾ:ಕೆ.ಶ್ರೀನಿವಾಸ್ (ಮಿಂಚು) ಅವರಿಗೆ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರಧಾನ

ದಿನಾಂಕ 13-3-2023 ಸೋಮವಾರ ದಂದು ಸುಂದರ ಸಂಜೆಯಲ್ಲಿ, ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ 145 ಪತ್ರಕರ್ತರಿಗೆ ಜೀವಮಾನದ ಸಾಧನೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಾಡಿದರು.

ಈ ಪತ್ರಕರ್ತರ ಪೈಕಿ, ಹೊಸಮಿಂಚು ಪತ್ರಿಕೆ ಸಂಪಾದಕರು ಹಾಗೂ ಇಂದು ಸಂಜೆ ದಿನ ಪತ್ರಿಕೆ ಹಿರಿಯ ವರದಿಗಾರರು ಆಗಿ, KUWJ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪತ್ರಕರ್ತರ ಸೇವೆಗೈದು ಹಾಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾದ್ಯಕ್ಷರಾಗಿ ಪತ್ರಕರ್ತರ ನೋವು ನಲಿವುಗಳಿಗೆ ಸ್ಪಂದಿಸಿ ಅವರ ಸೇವೆಯಲ್ಲಿರುವ ಡಾ: ಕೆ.ಶ್ರೀನಿವಾಸ್ (ಮಿಂಚು) ಅವರಿಗೆ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ ಮಾಧ್ಯಮ ಅಕಾಡೆಮಿಯು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಈ ಪ್ರಶಸ್ತಿಯನ್ನು ಮುಖ್ಯ ಮಂತ್ರಿ ಗಳಿಂದು ಪ್ರಧಾನ ಮಾಡಿ ಪತ್ರಿಕಾ ರಂಗದಲ್ಲಿ ಅವರ ಸೇವೆ ಮತ್ತು ಸಾಧನೆ ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತರಾದ ಡಾ: ಪಿ.ಎಸ್. ಹರ್ಷ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

ಶ್ರೀಯುತರನ್ನು ಸಿಟಿ ಟುಡೇ ನ್ಯೂಸ್, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ (ರಿ)ದ
ಪದಾಧಿಕಾರಿಗಳು ಮತ್ತು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ (ರಿ)ದ ಪದಾಧಿಕಾರಿಗಳು ಹಾಗೂ ಎಸ್.ಬಿ.ನ್ಯೂಸ್ (ಸ್ವಚ್ಛ ಬೆಂಗಳೂರು ಸುದ್ದಿ) ಬಳಗ
ಹೃದಯಪೂರ್ವಕವಾಗಿ ಅಭಿನಂದಿಸುತ್ತವೆ.

City Today News – 9341997936