ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ. ದಾಖಲೆ. ರಾಮಯ್ಯನಪಾಳ್ಯ ದಲ್ಲಿ, ಡಾ//ಬಿ.ಆರ್ . ಅಂಬೇಡ್ಕರ್ ರವರ ಪುತ್ರಳಿ ಅನಾವರಣ ಬೃಹತ್ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ. ದಾಖಲೆ. ರಾಮಯ್ಯನಪಾಳ್ಯ ದಲ್ಲಿ, ಡಾ//ಬಿ.ಆರ್ . ಅಂಬೇಡ್ಕರ್ ರವರ ಪುತ್ರಳಿ ಅನಾವರಣ ಬೃಹತ್ ಕಾರ್ಯಕ್ರಮ

ಈ ವಿಷಯಕ್ಕೆ ಸಂಬಂಧಿಸಿದಂತೆ, ಡಾ||ಬಿ.ಆರ್ ಅಂಬೇಡ್ಕರ್ ಪ್ರತಿಷ್ಠಾನ (ರಿ) ದ ವತಿಯಿಂದ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ ದಾಖಲೆ, ರಾಮಯ್ಯನಪಾಳ್ಯ ದಲ್ಲಿ, ಡಾ|| ಬಿ ಆರ್ ಅಂಬೇಡ್ಕರ್ ರವರ ಪುತ್ತೂಳಿ ಅನಾವರಣ ಬೃಹತ್‌ ಕಾರ್ಯಕ್ರಮವನ್ನು ದಿನಾಂಕ :12/03/2023 ರಂದು ಭಾನುವಾರ ಬೆಳಿಗೆ 11 ಘಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ, ನಾಡಿನ ಹೆಸರಾಂತ ಸ್ವಾಮಿಜಿಗಳಾದ ಪರಮ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮಿಜಿ ರವರು ಪೀಠಾಧ್ಯಕ್ಷರು, ಉರಿಲಿಂಗಪೆದ್ದಿ, ಮಹಾಮಠ, ಗಾಂಧಿನಗರ, ಮೈಸೂರು, ಇವರು ಕಾರ್ಯಕ್ರಮದ ಸಾನಿಧ್ಯ, ವನ್ನು ವಹಿಸಲಿಸಿದ್ದಾರೆ. ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಡಾ||ಆರೂಡ ಭಾರತಿ ಸ್ವಾಮೀಜಿ ಸಿದ್ದರೂಡ ಮಿಷನ್, ರಾಮೋಹಳ್ಳ ಬೆಂಗಳೂರು, ಇವರು ನಡೆಸಲಿದ್ದಾರೆ. ಹಾಗೂ ಶ್ರೀಯುತ.ಎಸ್.ಟಿ.ಸೋಮಶೇಖರ್ ಗೌಡರವರು ಮಾನ್ಯ ಸಹಾಕರ ಸಚಿವರು, ಕರ್ನಾಟಕ ಸರ್ಕಾರ, ಇವರು ಡಾ|| ಅಂಬೇಡ್ಕರ್ ಮತ್ಥಳಯನ್ನು ಅನಾವರಣ ಮಾಡಅದ್ದಾರೆ. ಶ್ರೀಯುತ ಡಿ.ಕೆ.ಸುರೇಶ್‌ರವರು ಮಾನ್ಯ ಲೋಕಸಭಾ ಸದಸ್ಯರು ಬೆಂಗಳೂರು ಗ್ರಾಮಾಂತರ ಇವರು ಡಾ|| ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಹೆಚ್ಚುವರಿ ಮೋಲೀಸ್ ಮಹಾ ನಿರ್ದೇಶಕರಾದ ಶ್ರೀ.ಎಂ.ನಂಜುಂಡಸ್ವಾಮಿಯವರು, ಐ.ಪಿ.ಎಸ್. ಮತ್ತು ಶ್ರೀ ಎಸ್. ಸಿದ್ಧರಾಜುರವರು ಎಸ್.ಪಿ ಭಾಗವಹಿಸಲಿದ್ದಾರೆ. ಶ್ರೀಯುತ ಎಂ.ಮುನಿನಾರಾಯಣ್‌ ರವರು ರಾಜ್ಯಾಧ್ಯಕ್ಷರು, ಡಾ|| ಅಂಬೇಡ್ಕರ್್ರ’ ಪ್ರತಿಷ್ಠಾನ (ರಿ) ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಶ್ರೀ.ಜಿ.ಶಿವಣ್ಣರವರು ಮಾಜಿ ಸಿಂಡಿಕೇಟ್ ಸದಸ್ಯರು, ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಇದರ ಜೊತೆಗೆ ಗಣ್ಯ ವ್ಯಕ್ತಿಗಳು, ಹಿರಿಯ ಅಧಿಕಾರಿಗಳು, ದಲಿತ ಸಂಘಟನೆಯ ನಾಯಕರುಗಳು, ಸ್ಥಳೀಯ ನಾಯಕರುಗಳು ಭಗವಹಿಸುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಮ್ಮ ಕಾರ್ಯಕ್ರಮವನ್ನು ಪತ್ರಿಕೆಯಲ್ಲಿ ಮತ್ತು ಟಿ.ವಿ. ಮಾಧ್ಯಮದಲ್ಲಿ ಪ್ರಚಾರ ಮಾಡಬೇಕೆಂದು ಮತ್ತು ಕಾರ್ಯಕ್ರಮದ ಜಾಗಕ್ಕೆ ಬಂದು ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮುನಿನಾರಾಯಣ ಎಂ. ರಾಜಾಧ್ಯಕ್ಷರು, ಡಾ|ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನ (ರಿ) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936