
ತಮಿಳು ಸೂಪರ್ಸ್ಟಾರ್ ಥಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ ಗಮನ ಸೆಳೆದಿದ್ದಾರೆ.
ಚೆನ್ನೈ,,ಏ.6 :
ಇಂದು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳು ಸೂಪರ್ಸ್ಟಾರ್ ಥಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ ಗಮನ ಸೆಳೆದಿದ್ದಾರೆ.

ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನ ಮತಗಟ್ಟೆಯಲ್ಲಿ ವಿಜಯ್ ಮತ ಚಲಾಯಿಸಿದ್ರು. ವಿಜಯ್ ಸೈಕಲ್ ಸವಾರಿ ವೇಳೆ ಕೆಲ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಭಾರೀ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ರಿಂದ ವಿಜಯ್ ಬೇಗನೆ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಬಳಿಕ ಅವರು ತಮ್ಮ ಸಿಬ್ಬಂದಿಯೊಬ್ಬರ ಟೂ ವೀಲರ್ನಲ್ಲಿ ಹಿಂದೆ ಕುಳಿತು ಪ್ರಯಾಣ ಮುಂದುವರಿಸಬೇಕಾಯ್ತು. ವಿಜಯ್ ಅವರ ಮತ್ತೋರ್ವ ಸಿಬ್ಬಂದಿ ಸೈಕಲ್ ತೆಗೆದುಕೊಂಡು ಹೋದ್ರು. ಇನ್ನು ಮತಗಟ್ಟೆ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ರು.
ವಿಜಯ್ ಅವರು ಮತಗಟ್ಟೆಗೆ ಸೈಕಲ್ನಲ್ಲಿ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್ ಮಾಸ್ಕ್ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ, ಅದು ಸುಲಭವಲ್ಲ ಎಂದು ವಿಜಯ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಇನ್ನು ವಿಜಯ್ ಅವರು ಇಂಧನ ದರ ಏರಿಕೆ ಖಂಡಿಸಲು ಸೈಕಲ್ನಲ್ಲಿ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ.
City Today News
9341997936
You must be logged in to post a comment.