
ಉಲ್ಲೇಖ : ಸರ್ಕಾರದಆದೇಶ ಸಂಖ್ಯೆ : ಕಸಂವಾ 112 ಕಸಧ 2022 & ( ತಿದ್ದುಪಡಿ ಆದೇಶ ) ದಿನಾಂಕ : 30.07.2022
12 ನೇ ಶತಮಾನದ ಕಲ್ಯಾಣದ ವೈಚಾರಿಕ ಕಾಂತ್ರಿಯ ಹರಿಕಾರರಾದ ಬಸವಸಾಧಿ ಪ್ರಮಥರ ಸಮಾಕಾಲೀನರೂ , ಕಲ್ಯಾಣದ ಸ್ವತಃ ಕಾಯಕ ಮತ್ತು ದಾಸೋಹಕ್ಕೆ ಮಾದರಿಯಾದ ಶ್ರೇಷ್ಠ ಕಾಯಕ ಹಠಯೋಗಿ , ಕುಳುವ ಸಮುದಾಯದ ಶರಣ ಶ್ರೀ ನುಲಿಯಚಂದಯ್ಯ ನವರ ಜಯಂತೋತ್ಸವವನ್ನು ಆಚರಿಸುವಂತೆ ಸಂಘದ ಮನವಿಗೆ ಸ್ಪಂದಿಸಿ ಸರ್ಕಾರ ಮೇಲಿನ ಉಲ್ಲೇಖಿತ ಪತ್ರದಂತೆ ಆದೇಶ ಹೊರಡಿಸಿದೆ . ಇದನ್ನು ಸ್ವಾಗತಿಸುತ್ತಾ , ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರಿಗೆ ನಾಡಿನ ಸಮಸ್ತ ಕುಳುವ ಸಮಾಜದ ಪರವಾಗಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ( ರಿ ) ( ಕೊರಮ – ಕೊರಚ – ಕೊರವ ಸಮುದಾಯಗಳ ಒಕ್ಕೂಟ ) ವು ಅಭಿನಂದನಾಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ .
ದಿನಾಂಕ : 12-08-2022ರ ರಾಜ್ಯಾದ್ಯಾಂತ ನೂಲಿನ ಹುಣ್ಣಿಮೆ ದಿನದಂದು ರಾಜ್ಯದ 31 ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಕೇಂದ್ರಸ್ಥಾನದಲ್ಲಿ ಸರ್ಕಾರ ಆಯೋಜಿಸುವ ಜಯಂತಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಿಪೂರ್ಪಕವಾಗಿ ಸಂಘದ ಎಲ್ಲಾ ಹಂತದ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಮಾಜದ ಹಿರಿಯರು , ಚಿಂತಕರು , ಬುದ್ದಿಜೀವಿಗಳು ಮತ್ತು ನೌಕರ ವರ್ಗದವರೊಂದಿಗೆ ಜೊತೆಗೂಡಿ ಒಗ್ಗಟ್ಟಾಗಿ ಶ್ರೀ.ನುಲಿಚಂದಯ್ಯನವರ 915 ನೇ ಜಯಂತಿಯನ್ನು ಆಚರಿಸುವುದರ ಜೊತೆಗೆ ಶ್ರೀ ಶರಣರ ಕಾಯಕ ತತ್ವಾದರ್ಶಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವಂತೆ ಜಯಂತೋತ್ಸವವನ್ನು ರಾಜ್ಯಾದ್ಯಾಂತ ಏಕಕಾಲದಲ್ಲಿ ಆಚರಿಸಿ ಸಮುದಾಯದ ಒಗ್ಗಟ್ಟು ಮತ್ತು ಧಾರ್ಮಿಕ ಅಸ್ಮಿತೆಯ ಬದ್ಧತೆಯನ್ನು ಎತ್ತಿಹಿಡಿಯುವ ಮೂಲಕ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿಯಾಗಬೇಕೆಂದು ಈ ಮೂಲಕ ಅಖಿಲ ಕರ್ನಾಟಕ ಕುಳುವ ಮಹಾಸಂಘ ( ರಿ ) ಕರೆ ನೀಡುತ್ತದೆ .
City Today News
9341997936
You must be logged in to post a comment.