ದೇಶದಲ್ಲೇ ಪ್ರಪ್ರಥಮ ಬಾರಿಗೆ  “ಮೊಳೆ ಮುಕ್ತ ಮರ” ಅಭಿಯಾನದ ಸಲುವಾಗಿ ಕಾಲ್ನಡಿಗೆ ಕಾರ್ಯಕ್ರಮ

ದೇಶದಲ್ಲೇ ಪ್ರಪ್ರಥಮ ಬಾರಿಗೆ ಮೊಳೆ ಮುಕ್ತ ಮರ ” ಅಭಿಯಾನದ ಸಲುವಾಗಿ ಕಾಲ್ನಡಿಗೆ ಕಾರ್ಯಕ್ರಮದ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಉದ್ಯಾನ ನಗರಿ ಬೆಂಗಳೂರು ಸೌಂದರ್ಯವನ್ನು ಹೆಚ್ಚಿಸುವ ರಸ್ತೆ ಬದಿಗಳ ಮರಗಳ ಮೇಲೆ ಅನಧಿಕೃತ ಭಿತ್ತಿ ಪತ್ರ , ಮೊಳೆ ಹಾಗೂ ಪಿನ್‌ಗಳನ್ನು ಹೊಡೆದು ಗಾಸಿಗೊಳಿಸುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸರಿಸುಮಾರು 3ಕಿ.ಮೀ.    “ ಮೊಳೆ ಮುಕ್ತ ಮರ ಬೆಂಗಳೂರು ” ಕಾಲ್ನಡಿಗೆಯ ಕಾರ್ಯಕ್ರಮವನ್ನು ಇದೇ ಮಾರ್ಚ್ 21 ರಂದು ಬೆಳಗ್ಗೆ 7:00 ಗಂಟೆಗೆ ಎಂ.ಜಿ.ರಸ್ತೆ ( ಬಾಲಭವನ ) ದಿಂದ ಬಿ.ಬಿ.ಎಂ.ಪಿ ಕೇಂದ್ರ ಕಛೇರಿಯವರೆಗೆ ಮಾಡಲು ಇಚ್ಚಿಸಿದ್ದೇವೆ .

ಈ ಕಾರ್ಯಕ್ರಮಕ್ಕೆ ಬಿಬಿಎಂಪಿ ಆಯುಕ್ತರಾದ ಶ್ರೀಯುತ ಮಂಜುನಾಥ್ ಪ್ರಸಾದ್‌ರವರು , ರೈಲ್ವೆಸ್ ಎಡಿಜಿಪಿ ಶ್ರೀಯುತ ಭಾಸ್ಕರ್ ರಾವ್ ರವರು , ಹಲಸೂರು ಗೇಟ್ ಪೊಲೀಸ್ ವಿಭಾಗದ ಎಸಿಪಿ ಶ್ರೀಮತಿ. ನಜ್ಮಾ ಫಾರೂಕ್ ರವರು ಹಾಗೂ CEN  ಇನ್ಸ್ ಪೆಕ್ಟರ್  ಎಲ್.ವೈ.ರಾಜೇಶ್‌ ರವರು ಮತ್ತು ಅನೇಕ ಹಿರಿತರೆ ಹಾಗೂ ಕಿರುತೆರೆಯ ನಟರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ .

ಬೆಂಗಳೂರು ಹುಡುಗರು ತಂಡ

City Today News
9341997936