ಪಂಚಾಯತ್ ರಾಜ್ ಸಾಧಕರಿಗೆ “ ಡಾ ॥ ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ‘ ಪುರಸ್ಕಾರ

ಪಂಚಾಯತ್ ರಾಜ್ ಸಾಧಕರಿಗೆ “ ಡಾ ॥ ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ‘ ಪುರಸ್ಕಾರ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ 1962 ರಲ್ಲಿ ಅಂದಿನ ಪ್ರಧಾನಿ ಶ್ರೀ ಪಂಡಿತ್ ಜವಾಹರ್ ಲಾಲ್ ನೆಹರೂರವರಿಂದ ಉದ್ಘಾಟಿಸಲ್ಪಟ್ಟ ಸಂಸ್ಥೆಯಾಗಿರುತ್ತದೆ . ಕರ್ನಾಟಕದ ಮೂರು ಹಂತದ ( ಜಿಲ್ಲಾ , ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ) ಪಂಚಾಯತ್ ರಾಜ್ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆಯಾಗಿರುತ್ತದೆ . ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ವತಿಯಿಂದ ದಿನಾಂಕ 2-9-2021ನೇ ಗುರುವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಸಾಧನೆ ಮಾಡಿರುವ ಪಂಚಾಯತ್ ರಾಜ್ ಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗೆ ‘ ಡಾ || ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ || ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ವಹಿಸಲಿದ್ದಾರೆ . ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಸಿ . ನಾರಾಯಣಸ್ವಾಮಿರವರು ಅಧ್ಯಕ್ಷತೆ ವಹಿಸಲಿದ್ದಾರೆ . ಉದ್ಘಾಟನೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ವೊಡೆ ಪಿ , ಕೃಷ್ಣರವರು ನೆರವೇರಿಸಲಿದ್ದಾರೆ . ಕಾರ್ಯಕ್ರಮದಲ್ಲಿ ಡಾ || ಚಿಕ್ಕಕೊಮಾರಿಗೌಡರ ಕೃತಿ “ ಬಾಳೊಂದು ನಾಟಕ ” ಪರಮಪೂಜ್ಯರಿಂದ ಬಿಡುಗಡೆಯಾಗಲಿದೆ . ಕೃತಿಯನ್ನು ಕುರಿತು ಖ್ಯಾತ ಚಿತ್ರಸಾಹಿತಿ , ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ಸಿ.ವಿ. ಶಿವಶಂಕರ್‌ರವರು ಮಾತನಾಡಲಿದ್ದಾರೆ . ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಹೆಗಡೆ ರವರು “ ಕರ್ನಾಟಕ ಪಂಚಾಯತ್ ರಾಜ್ ಒಂದು ಅವಲೋಕನ ” ಕೃತಿಯನ್ನು ಬಿಡುಗಡೆಗೊಳಿಸಿ ದತ್ತಿ ಉಪನ್ಯಾಸವನ್ನು ನೀಡಲಿದ್ದಾರೆ . ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್ . ಸತೀಶ್ ರವರು ಕೃತಿ ಪರಿಚಯ ಮಾಡಲಿದ್ದಾರೆ . ಪರಿಷತ್‌ನ ಕೋಶಾಧಿಕಾರಿಗಳು , ಸಾಹಿತಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಚಿಂತಕರಾದ ಡಾ || ಚಿಕ್ಕಕೊಮಾರಿಗೌಡರು ತಮ್ಮ ಹೆಸರಿನಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನಲ್ಲಿ ಐದು ಲಕ್ಷ ರೂಗಳನ್ನು ದತ್ತಿ ನಿಧಿಯಾಗಿ ಇಟ್ಟಿದ್ದು ಪ್ರತಿ ವರ್ಷ ಡಾ || ಚಿಕ್ಕಕೊಮಾರಿಗೌಡರ ಹೆಸರಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ಜನಪ್ರತಿನಿಧಿಗಳು , ಅಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು . ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲೇ ಅತ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಿಜಿಟಲ್ ಲೈಬ್ರರಿ , ಜನಔಷಧಿ ಕೇಂದ್ರ , ಶೇ . 100 ರಷ್ಟು ಶೌಚಾಲಯ , ಆತ್ಯುತ್ತಮ ಘನತ್ಯಾಜ್ಯ ವಿಲೇವಾರಿ ಹೀಗೆ ವಿಶೇಷ ಸಾಧನೆ ಮಾಡಿರುವ ಬೆಂಗಳೂರು ನಗರ ಜಿಲ್ಲೆಯ , ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ‘ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು .

ಮಾಜಿ ಶೌಚಾಲಯವಿಲ್ಲದ ಮನೆಯವರ ಕಾಲಿಗೆ ಬೀಳುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶೇ .100 ರಷ್ಟು ಶೌಚಾಲಯ ನಿರ್ಮಾಣ ಮಾಡಿಸಿದ ಹಾಗೂ ಮಾದರಿ ಬಹು ಗ್ರಾಮ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿರುವ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಜನಾರ್ಧನ ಹುಲಗಿ ರವರಿಗೆ “ ಅತ್ಯುತ್ತಮ ಪಂಚಾಯತ್ ರಾಜ್ ಜನಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ಶೇ .100 ರಷ್ಟು ಶೌಚಾಲಯ ನಿರ್ಮಾಣ , ಮಾದರಿ ಅಂಗನವಾಡಿ ನಿರ್ಮಾಣ , ತಿಪ್ಪ ಸಂಸ್ಕರಣ ಘಟಕಗಳ ನಿರ್ಮಾಣ . ಶ್ರಮದಾನದ ಮೂಲಕ ಗ್ರಾಮೀಣಾಭಿವೃದ್ಧಿ ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸಿದ ಜಿಲ್ಲೆಯ ರೆಡ್ಡರ ನಾಗನೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರೇಮಕ್ಕ ಎಂ . ತಿಮ್ಮನಗೌಡರ್ ರವರಿಗೆ ‘ ಅತ್ಯುತ್ತಮ ಪಂಚಾಯತ್‌ ರಾಜ್‌ ಮಹಿಳಾ ಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ತಾಲ್ಲೂಕು ಪಂಚಾಯಿತಿಯ ವಿದ್ಯಾವಂತ ಅಧ್ಯಕ್ಷರಾಗಿ ತಾಲ್ಲೂಕಿನಲ್ಲಿ ಶೌಚಾಲಯ ನಿರ್ಮಾಣ , ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮುಂತಾದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಮೂಲಕ ಸಮರ್ಥ ಆಡಳಿತ ನೀಡಿದ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಚಾಮರಾಜನಗರ ತಾಲ್ಲೂಕಿನ ಶ್ರೀ ಹೆಚ್.ವಿ , ಚಂದ್ರುರವರಿಗೆ ‘ ಅತ್ಯುತ್ತಮ ಪಂಚಾಯತ್ ರಾಜ್ ಪರಿಶಿಷ್ಟ ಜಾತಿ / ಪಂಗಡದ ಜನಪ್ರತಿನಿಧಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು . ದಕ್ಷ ಆಡಳಿತಗಾರರಾಗಿ , ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಸೂಕ್ತ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಮೂಲಕ ತಾವು ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಕೆ.ಎಸ್ , ಗಣೇಶ್ , ಬೀಡಿ ಗ್ರಾಮ ಪಂಚಾಯಿತಿ , ಖಾನಾಪುರ ತಾಲ್ಲೂಕು , ಬೆಳಗಾವಿ ಜಿಲ್ಲೆ ಇವರಿಗೆ ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ ‘ ನೀಡಿ ಗೌರವಿಸಲಾಗುವುದು , ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಹೆಚ್ . ಟಿ . ಶಂಕರ್ ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು , ದತ್ತಿ ನಿಧಿ ಸ್ಥಾಪಕರು ಹಾಗೂ ಪರಿಷತ್‌ನ ಕೋಶಾಧ್ಯಕ್ಷರಾದ ಡಾ || ಚಿಕ್ಕಕೊಮಾರಿಗೌಡರು , ಉಪಾಧ್ಯಕ್ಷರು ಮಾಜಿ ಶಾಸಕರಾದ ಶ್ರೀ ಡಿ.ಆರ್.ಪಾಟೀಲ್‌ರವರು , ಉಪಾಧ್ಯಕ್ಷರು ಹಾಗೂ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಶ್ರೀ ವಿ.ವೈ. ಘೋರ್ಪಡೆರವರು ಹಾಗೂ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ . ವಂದನೆಗಳೊಂದಿಗೆ ,

ಕೆ.ಎಸ್ . ಸತೀಶ್

ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್

City Today News

9341997936