ಕವಿಪ್ರನಿನಿಯಲ್ಲಿ ನಡೆದಿರುವ ನೇಮಕಾತಿ , ಪದೋನ್ನತಿ ಮತ್ತು ವರ್ಗಾವಣೆಗಳ ಬಗ್ಗೆ ಅವ್ಯವಹಾರ ಮತ್ತು ಅಕ್ರಮ ಬಗ್ಗೆ ಸ್ಪಷ್ಠನೆ

ದಿನಾಂಕ : 03.05.2022 ರಂದು “ ನ್ಯೂಸ್ ಫರ್ಸ್ಟ್ ಸುದ್ದಿ ವಾಹಿನಿಯಲ್ಲಿ , ದಿನಾಂಕ : 13.05.2022 ರಂದು “ ಪವರ್ ಟಿ.ವಿ ಸದ್ದಿ ವಾಹಿನಿಯಲ್ಲಿ ಮತ್ತು ದಿನಾಂಕ : 18.05.2022 ರಂದು “ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕವಿಪ್ರನಿನಿಯಲ್ಲಿ ನಡೆದಿರುವ ನೇಮಕಾತಿ , ಪದೋನ್ನತಿ ಮತ್ತು ವರ್ಗಾವಣೆಗಳ ಬಗ್ಗೆ ಅವ್ಯವಹಾರ ಮತ್ತು ಅಕ್ರಮ ನಡೆದಿದೆಯೆಂದು ದೂರಿರುವ ಬಗ್ಗೆ , ಕವಿಪ್ರನಿನಿ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಒಕ್ಕೂಟವು ಈ ಕೆಳಕಂಡಂತೆ ಜಂಟಿಯಾಗಿ ಸ್ಪಷ್ಠನೆಯನ್ನು ನೀಡುತ್ತಿದೆ :

1. ಕವಿಪ್ರನಿನಿಯಲ್ಲಿ 2007 ನೇ ಸಾಲಿನಲ್ಲಿ ನೇರ ನೇಮಕಾತಿ ಅಡಿಯಲ್ಲಿ 319 ಸಹಾಯಕ ಕಾರ್ಯನಿರ್ವಾಹಕ ಇಂನಿಜಿನಿರುಗಳ ನೇಮಕಾತಿಯು ನಿಯಮಬದ್ಧವಾಗಿ ಇರುತ್ತದೆ . ಆಗಿನ ನೇಮಕಾತಿ ನಿಯಮಗಳ ಪ್ರಕಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯ ಶೇ .25 ರಷ್ಟು ಕೋಟಾ ವನ್ನು ನೇರ ನೇಮಕಾತಿ ಮಾಡಲು ಅವಕಾಶವಿತ್ತು ಮತ್ತು ಅದರ ಪ್ರಕಾರವೇ ನಿಯಮಾನುಸಾರ ನೇರ ನೇಮಕಾತಿ ಆಗಿರುತ್ತದೆ .

2. ಶೇ .90 ಮತ್ತು ಶೇ .10 ರ ಕೋಟಾವನ್ನು ಅನುಸರಿಸಿ ಕಾರ್ಯನಿರ್ವಾಹಕ ಇಂಜಿನಿಯರ್‌ ಹುದ್ದೆಗೆ ಪದೋನ್ನತಿ ನೀಡಲು ಕಾರ್ಯನಿರ್ವಹಣಾ ವರದಿಯನ್ನು ಕಾರ್ಯನಿರ್ವಹಣಾ ವರದಿಯನ್ನು ಕರೆಯಬೇಕೆಂಬ ಬೇಡಿಕೆಯು ಪದೋನ್ನತಿ ನಿಯಮಗಳಲ್ಲಿ ಅವಕಾಶವಿರುವುದಿಲ್ಲ . ನಿಯಮಗಳ ಪ್ರಕಾರ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಯಾವುದೇ ಕೋಟಾ ಇರುವುದಿಲ್ಲ . ಈ ಹುದ್ದೆಗೆ ಹಿರಿತನದ ಆಧಾರದ ಮೇಲೆ ಪದೋನ್ನತಿಗಳನ್ನು ನೀಡುವುದು ನಿಯಮಗಳ ಪ್ರಕಾರ ಸರಿಯಿರುತ್ತದೆ .

3 , ದಿನಾಂಕ : 10.12.20210 ಸರ್ಕಾರಿ ಆದೇಶದ ಉಲ್ಲಂಘನೆಯಾಗಿರತ್ತದೆ ಎಂದು ಆರೋಪಿಸಿರುತ್ತಾರೆ . ವಾಸ್ತವವಾಗಿ , ಸದರಿ ಸರ್ಕಾರಿ ಆದೇಶದಲ್ಲಿ ತಿಳಿಸಿದಂತೆ , ಯಾವುದೇ ಹುದ್ದೆಗೆ ನೇರ ನೇಮಕಾತಿ ಮುಖಾಂತರ ಮತ್ತು ಮುಂಬಡ್ತಿ ಮುಖಾಂತರ ಭರ್ತಿ ಮಾಡಲು ಅನುಪಾತ ನಿಗದಿಪಡಿಸಿದ್ದಲ್ಲಿ , ಆ ಹುದ್ದೆಯಲ್ಲಿ ಅನುಪಾತವನ್ನು ಪಾಲಿಸಬೇಕಾಗುತ್ತದೆ . ಆದರೆ ಕವಿಪ್ರನಿನಿಯ ಪದೋನ್ನತಿ ನಿಯಮಗಳ ಪ್ರಕಾರ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಅವಕಾಶವಿರುವುದಿಲ್ಲ .

4. ಸದನಕ್ಕೆ ಮಾನ್ಯ ಇಂಧನ ಸಚಿವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂಬುದರ ಬಗ್ಗೆ : ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶ್ರೀಕಂಠೇಗೌಡ ಇವರ ಪ್ರಶ್ನೆಗೆ ಮಾನ್ಯ ಇಂಧನ ಸಚಿವರಾದ ಶ್ರೀ ವಿ.ಸುನೀಲ್ ಕುಮಾರ್ ರವರು ನೀಡಿರುವ ಉತ್ತರವು ನಿಯಮಾನುಸಾರ ಸರಿಯಾಗಿರುತ್ತದೆ . ಕವಿಪ್ರನಿನಿ ಅಧಿಕಾರಿಗಳು ನೀಡಿರುವ ಉತ್ತರವು ನಿಯಮಾನುಸಾರವಾಗಿ ಇರುತ್ತದೆ .

5. ದಿನಾಂಕ : 18.05.2022 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಇಂಧನ ಇಲಾಖೆಯಲ್ಲಿ ವರ್ಗಾವಣೆ ಮಾರ್ಪಾಡು ನಿರಂತರ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯ ಬಗ್ಗೆ : ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದ ವಿಭಾಗೀಯ ಪೀಠದ ಆದೇಶದಂತೆ ಪ್ರಭಾರ ವ್ಯವಸ್ಥೆಯಡಿ ವ್ಯವಸ್ಥೆ ಮಾಡಲಾಗುತ್ತಿದ್ದು , ಇದು ನಿಯಮಾನುಸಾರ ಇರುತ್ತದೆ . ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಮತ್ತು ಮಾನ್ಯ ಇಂಧನ ಸಚಿವರಾದ ಶ್ರೀ ವಿ.ಸುನೀಲ್ ಕುಮಾರ್ ರವರು ಅಧಿಕಾರ ವಹಿಸಿಕೊಂಡ ನಂತರ ವರ್ಗಾವಣೆ ಮತ್ತು ಪದೋನ್ನತಿಗಳು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿವೆ ಎಂದು ಶಿವಪ್ರಕಾಶ್ ಟಿ.ಎಂ – ಮಹಾ ಪ್ರಧಾನ ಕಾರ್ಯದರ್ಶಿ , ಕ.ವಿ.ಮಂ.ನೌ.ಸಂಘಗಳ ಒಕ್ಕೂಟ, ಮತ್ತು ಟಿ .ಆರ್ . ರಾಮಕೃಷ್ಣಯ್ಯ ಅಧ್ಯಕ್ಷರು , ಕ.ವಿ.ಮಂ.ನೌ.ಸಂಘಗಳ ಒಕ್ಕೂಟ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News

9341997936